ಒಂದು ಬಿಲ್ವವೃಕ್ಷವನ್ನು ನೋಡಿ ಅವನಿಗೆ ಪರಮಾನಂದವಾಯಿತು. ತಾನು ಮೇದಿನಿಪುರಕ್ಕೆ ಹೊರಟಿದ್ದೆನೆಂಬುದು ಸಂಪೂರ್ಣವಾಗಿ ಮರೆತು ಹೋಯಿತು. ಆ ಊರಿನೊಳಕ್ಕೆ ಹೋಗಿ ಒಂದು ಹೊಸ ಬುಟ್ಟಿಯನ್ನೂ ಒಂದು ಚೌಕವನ್ನೂ ಕೊಂಡು ಕೊಂಡು ಆ ಚೌಕವನ್ನು ಚೊಕ್ಕಟವಾಗಿ ಕೊಳದಲ್ಲಿ ಒಗೆದು ಆ ಕುಕ್ಕೆಯತುಂಬ ಬಿಲ್ವಪತ್ರೆಯ ದಳಗಳನ್ನು ಕುಯ್ದು ತುಂಬಿ ಅದರಮೇಲೆ ಒದ್ದೆಯ ಬಟ್ಟೆಯನ್ನು ಮುಚ್ಚಿಕೊಂಡು ಉರಿಬಿಸಿಲಿನಲ್ಲಿಯೇ ಹಿಂತಿರುಗಿದನು. ಕಾಮಾರಪುಕುರವನ್ನು ಸೇರಿದಾಗ ಮಧ್ಯಾಹ್ನ ಸುಮಾರು ಒಂದು ಗಂಟೆಯಾಗಿತ್ತು. ಕೂಡಲೇ ಸ್ನಾನಮಾಡಿ ಬಹಳ ಹೊತ್ತು ಈ ಪತ್ರೆಗಳಿಂದ ದೇವತಾರ್ಚನೆಯನ್ನು ಮಾಡಿದನು. ಇದೆಲ್ಲವೂ ಆದಮೇಲೆ ಊಟಮಾಡುತ್ತಿದ್ದಾಗ ಶ್ರೀಮತಿ ಚಂದ್ರಾದೇವಿಯು ಈ ವೃತ್ತಾಂತವನ್ನೆಲ್ಲಾ ತಿಳಿದು ಕೇವಲವಿಸ್ಮಿತೆಯಾದಳು. ಖುದಿರಾಮನು ಮೇದಿನೀಪುರಕ್ಕೆ ಮರುದಿನ ಹೊರಟನು.
ಕಾಮಾರಪುಕುರಕ್ಕೆ ಬಂದಮೇಲೆ ಈರೀತಿ ಆರುವರ್ಷಗಳು ಕಳೆದುವು. ಈಗ ರಾಮಕುಮಾರನಿಗೆ ಹದಿನಾರುವರ್ಷ, ಕಾತ್ಯಾಯನಿಗೆ ಹನ್ನೊಂದುವರ್ಷ, ಮಗಳಿಗೆ ವಿವಾಹವಾಗಬೇಕಾದ ವಯಸ್ಸು ಮೀರುತ್ತಾಬಂದದ್ದನ್ನು ನೋಡಿ ಖುದಿರಾಮನು ಹುಡುಗಿಯನ್ನು ಹತ್ತಿರದಲ್ಲಿದ್ದ ಆನೂರುಗ್ರಾಮದ ಕೇನೇರಾಮನಿಗೆಕೊಟ್ಟುಮದುವೆಮಾಡಿದನು. ಇದರ ಜೊತೆಯಲ್ಲಿಯೇ ಕೇನೇರಾಮನ ತಂಗಿ ಯನ್ನು ಕೊಟ್ಟು ರಾಮಕುಮಾರನ. ಮದುವೆಯೂ ನಡೆದುಹೋ ಯಿತು. ಇಷ್ಟು ಹೊತ್ತಿಗೆ ರಾಮಕುಮಾರನು ಸಾಹಿತ್ಯ ವ್ಯಾಕರಣ ಗಳನ್ನು ಮುಗಿಸಿ ಸ್ಮೃತಿ ಶಾಸ್ತ್ರಗಳನ್ನು ಓದುತ್ತಿದ್ದನು. ಮೂರು ನಾಲ್ಕು ವರ್ಷಗಳಲ್ಲಿ ರಾಮಕುಮಾರನು ಸಂಪಾದಿಸುವುದಕ್ಕೆ ಶಕ್ತನಾದನು. ಮಗನು ವಯಸ್ಕನಾಗಿ ಸಂಸಾರ ಭಾರವನ್ನು ವಹಿಸುವುದಕ್ಕೆ ಸಮರ್ಥನಾದದ್ದನ್ನು ನೋಡಿ ತೀರ್ಥಯಾತ್ರೆ ಮಾಡಿಕೊಂಡು ಬರಲು ಮನಸ್ಸು ಹುಟ್ಟಿ, ೧೮೨೪ ರಲ್ಲಿ ಖುದಿರಾಮನು