ಈ ಪುಟವನ್ನು ಪ್ರಕಟಿಸಲಾಗಿದೆ
೪೧
ಡಾದಂ ಮೈದೋರಿ ಕೂರ್ಪಿ೦ ಸರಸತಿ ಮುಂತಾದರಿಟ್ಟೋಲೆಗಾದಾ
ಮಾದೇವಂ ನೀನೆ ಮತ್ತಾರ್ ತ್ರಿಭುವನವಿಭು ಪಂಪಾವಿರೂಪಾಕ್ಷಲಿಂಗಾ"‖ ೧೦೩
‖
* *
*
ಸೋಮೇಶ್ವರಶತಕ
ಶ್ರೀಮತ್ಕೈಲಾಸವಾಸಂ ಸ್ಮಿತಮೃದುವಚನಂ ಪಂಚವಕ್ತ್ರಂ ತ್ರಿಣೇತ್ರಂ
ಪ್ರೇಮಾಬ್ಧೀಪೂರ್ಣಕಾಯಂ ಪರಮಪರಶಿವಂ ಪಾರ್ವತೀಶಂ ಪರೇಶಂ
ಧೀಮಂತಂ ದೇವದೇವಂ ಪುಲಿಗೆರೆನಗರೀ ಶಾಸನಾ೦ಕಂ ಮೃಗಾಂಕ೦
ಸೋಮೇಶಂ ಸರ್ಪಭೂಷಂ ಸಲಹುಗೆ ಜಗಮಂ ಸರ್ವದಾ ಸುಪ್ರಸನ್ನಂ‖ ೧
‖
ಕೆಲವಂ ಬಲ್ಲವರಿಂದೆ ಕಲ್ತು ಕೆಲವಂ ಶಾಸ್ತ್ರಂಗಳಿಂ ೧ಕೇಳಿ ತಾಂ೧
ಕೆಲವಂ ಮಾಳ್ಪವರಿಂದೆ ಕಂಡು ಕೆಲವಂ ಸ್ವಜ್ಞಾನದಿಂ ನೋಡುತಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನ೨ಪ್ಪಂತೆ ಕೇಳ್೨
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೨ ‖
ಅದರಿಂ ನೀತಿಯೆ ಸಾಧನಂ ಸಕಲಲೋಕಕ್ಕೆಲ್ಲ ಬೇಕೆಂದು ಪೇ-