ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗಳದಲ್ಲಿನ ವರ್ಗಾವಣೆ

ವಿಕಿಸೋರ್ಸ್ದಿಂದ

ಅಂಗಳದಲ್ಲಿನ ವರ್ಗಾವಣೆ

[ಸಂಪಾದಿಸಿ]

ಸ್ಥಳದಲ್ಲಿಯೆ ಖರೀದಿಮಾಡುವವನಿಗೇ ನೇರವಾಗಿ ಪದಾರ್ಥಗಳನ್ನು ಒದಗಿಸುವುದು. ಸಾಕ್ಷಾತ್ ಮಾರುಕಟ್ಟೆಯಲ್ಲಿಯೇ ನಡೆಯುವ ಸ್ಥಳವ್ಯವಹಾರಗಳಲ್ಲಿ ಮಾತ್ರ ಈ ರೀತಿಯ ವರ್ಗಾವಣೆ ನಡೆಯುತ್ತದೆ. ನಿರ್ದಿಷ್ಟ ವಸ್ತುವಿನ ನಿರ್ದಿಷ್ಟ ಪ್ರಮಾಣಕ್ಕೆ ಮಾತ್ರ ವರ್ಗಾವಣೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಇದು ಉತ್ಪಾದಕರ ಮತ್ತು ಸರಕು ವ್ಯಾಪಾರಿಗಳ ಆ ಕ್ಷಣದ ಅಗತ್ಯಗಳನ್ನು ಪುರೈಸುತ್ತದೆ. ಇಂಥ ವರ್ಗಾವಣೆಗಳು ಹೆಚ್ಚುತ್ತಿರುವುದು ಸ್ಥಳಪೇಟೆಯ ಬೆಳೆವಣಿಗೆಯನ್ನೇ ಅಲ್ಲದೆ ಮುಂಮಾರಿಕೆ ಪೇಟೆಯ ಪ್ರಗತಿಯನ್ನೂ ಸೂಚಿಸುತ್ತದೆ.