ಸದಸ್ಯ:1840369sumanasainath
ಲಾಜಿಕ್ ಗೇಟ್
[ಸಂಪಾದಿಸಿ]ಎಲೆಕ್ಟ್ರಾನಿಕ್ಸ್ನಲ್ಲಿ ಲಾಜಿಕ್ ಗೇಟ್, ಬೂಲಿಯನ್ ಆಲ್ಜೀಬ್ರವನ್ನು ಉಪಯೋಗಿಸಿ ಕಾರ್ಯಗತಗೊಳಿಸುವ ಆದರ್ಶೀಕೃತ ಅಥವಾ ಭೌತಿಕ ಸಾಧನವಾಗಿದೆ; ಅಂದರೆ, ಇದು ಒಂದು ಅಥವಾ ಹೆಚ್ಚಿನ ಬೈನರಿ ಇನ್‌ಪುಟ್‌ಗಳಲ್ಲಿ ತಾರ್ಕಿಕ ಕಾರ್ಯಾಚರಣೆಯನ್ನು ಮಾಡುತ್ತದೆ ಮತ್ತು ಒಂದೇ ಬೈನರಿ ಔಟ್ಪುಟ್ ಅನ್ನು ಉತ್ಪಾದಿಸುತ್ತದೆ. ಲಾಜಿಕ್ ಗೇಟ್‌ಗಳನ್ನು ಪ್ರಾಥಮಿಕವಾಗಿ ಡಯೋಡ್‌ಗಳು ಅಥವಾ ಎಲೆಕ್ಟ್ರಾನಿಕ್ ಸ್ವಿಚ್‌ಗಳಾಗಿ ಕಾರ್ಯನಿರ್ವಹಿಸುವ ಟ್ರಾನ್ಸಿಸ್ಟರ್‌ಗಳನ್ನು ಬಳಸಿ ಕಾರ್ಯಗತಗೊಳಿಸಲಾಗುತ್ತದೆ ಹಾಗೆಯೇ ನಿರ್ವಾತ ಟ್ಯೂಬ್ (ವಾಕ್ಯುಮ್ ಟ್ಯೂಬ್), ರಿಲೇ ಲಾಜಿಕ್, ದ್ರವ ಲಾಜಿಕ್, ನ್ಯೂಮ್ಯಾಟಿಕ್ ಲಾಜಿಕ್, ದೃಗ್ವಿಜ್ಞಾನ, ಅಣುಗಳು ಅಥವಾ ಯಾಂತ್ರಿಕ ಅಂಶಗಳನ್ನು ಬಳಸಿ ಸಹ ಇದನ್ನು ನಿರ್ಮಿಸಬಹುದು. ಆಮ್ಪ್ಲಿಪಿಕೇಷನ್ ಅನ್ನು ಉಪಯೋಗಿಸಿ, ಲಾಜಿಕ್ ಗೇಟ್‌ಗಳು ಎಲ್ಲಾ ಬೂಲಿಯನ್ ತರ್ಕದ ಭೌತಿಕ ಮಾದರಿಯನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಬೂಲಿಯನ್ ಲಾಜಿಕ್ ಇಂದ ಎಲ್ಲಾ ಕ್ರಮಾವಳಿಗಳು ಮತ್ತು ಗಣಿತಶಾಸ್ತ್ರವನ್ನು ವಿವರಿಸಬಹುದು. ಲಾಜಿಕ್ ಸರ್ಕ್ಯೂಟ್‌ಗಳಲ್ಲಿ ಮಲ್ಟಿಪ್ಲೆಕ್ಸರ್, ರಿಜಿಸ್ಟರ್, ಅಂಕಗಣಿತದ ತರ್ಕ ಘಟಕ (ಎಎಲ್ಯು), ಕಂಪ್ಯೂಟರ್ ಮೆಮೊರಿ ಮತ್ತು ಮೈಕ್ರೊಪ್ರೊಸೆಸರ್ ಮುಂತಾದ ಸಾಧನಗಳು ಒಳಗೊಂಡಿರುತ್ತದೆ. ಆಧುನಿಕ ದಿನಗಳಲ್ಲಿ ಹೆಚ್ಚಿನ ಗೇಟ್‌ಗಳನ್ನು ಫೀಲ್ಡ್-ಎಫೆಕ್ಟ್ ಟ್ರಾನ್ಸಿಸ್ಟರ್‌ಗಳಿಂದ [ವಿಶೇಷವಾಗಿ ಮೆಟಲ್-ಆಕ್ಸೈಡ್-ಸೆಮಿಕಂಡಕ್ಟರ್ ಫೀಲ್ಡ್-ಎಫೆಕ್ಟ್ ಟ್ರಾನ್ಸಿಸ್ಟರ್ ಆಥವ ಮೊಸ್ಫೆಟ್] ತಯಾರಿಸಲಾಗುತ್ತದೆ.
ಇತಿಹಾಸ ಮತ್ತು ಅಭಿವೃದ್ಧಿ
[ಸಂಪಾದಿಸಿ]ಬೈನರಿ ಸಂಖ್ಯೆಯ ವ್ಯವಸ್ಥೆಯನ್ನು ಗಾಟ್ಫ್ರೈಡ್ ವಿಲ್ಹೆಲ್ಮ್ ಲೀಬ್ನಿಜ್ ಪರಿಷ್ಕರಿಸಿದರು ಮತ್ತು ೧೭೦೫ರಲ್ಲಿ ಪ್ರಕಟಿಸಿದರು. ಇದು ಪ್ರಾಚೀನ ಕಾಲದ ಚಿಂಗ್-೧ನ ಬೈನರಿ ವ್ಯವಸ್ಥೆಯಿಂದ ಪ್ರಭಾವಿತವಾಗಿದೆ. ಬೈನರಿ ವ್ಯವಸ್ಥೆಯನ್ನು ಬಳಸುವ ಮೂಲಕ, ಅಂಕಗಣಿತ ಮತ್ತು ತರ್ಕದ ತತ್ವಗಳನ್ನು ಸಂಯೋಜಿಸಬಹುದು ಎಂದು ಲೀಬ್ನಿಜ್ ಸ್ಥಾಪಿಸಿದರು. ೧೮೮೬ರ ಪತ್ರವೊಂದರಲ್ಲಿ, ಚಾರ್ಲ್ಸ್ ಸ್ಯಾಂಡರ್ಸ್ ಪಿಯರ್ಸ್ ವಿದ್ಯುತ್ ಸ್ವಿಚಿಂಗ್ ಸರ್ಕ್ಯೂಟ್‌ಗಳಿಂದ ತಾರ್ಕಿಕ ಕಾರ್ಯಾಚರಣೆಗಳನ್ನು ಹೇಗೆ ನಡೆಸಬಹುದೆಂದು ವಿವರಿಸಿದರು. ನಂತರದ ನಿರ್ವಾತ ಟ್ಯೂಬ್ ತರ್ಕ ಕಾರ್ಯಾಚರಣೆಗಾಗಿ ರಿಲೇಗಳ ಬದಲು ಉಪಯೋಗಿಸಲಾಗಿತ್ತು. ೧೯೦೭ರಲ್ಲಿ, ಲೀ ಡಿ ಫಾರೆಸ್ಟ್ ಫ್ಲೆಮಿಂಗ್ ವಾಲ್ವ್ ಅನ್ನು ಮಾರ್ಪಡಿಸಿ ಲಾಜಿಕ್ ಗೇಟ್ ಆಗಿ ಬಳಸಬಹುದಾಗಿತ್ತು. ಲುಡ್ವಿಗ್ ವಿಟ್ಗೆನ್‌ಸ್ಟೈನ್ ೧೬ ಸಾಲಿನ ಟ್ರುತ್ ಟೇಬಲ್ ಆವೃತ್ತಿಯನ್ನು ಟ್ರಾಕ್ಟಾಟಸ್ ಲಾಜಿಕೊ-ಫಿಲಾಸಫಿಕಸ್ (೧೯೨೧) ನ ೫.೧೦೧ರ ಪ್ರಸ್ತಾಪವಾಗಿ ಪರಿಚಯಿಸಿದರು. ಕಾಕತಾಳೀಯ ಸರ್ಕ್ಯೂಟ್ನ ಸಂಶೋಧಕ ವಾಲ್ಥರ್ ಬೋಥೆ ೧೯೨೪ರಲ್ಲಿ ಮೊದಲ ಆಧುನಿಕ ಎಲೆಕ್ಟ್ರಾನಿಕ್ ಆಂಡ್ ಗೇಟ್ಗಾಗಿ ಭೌತಶಾಸ್ತ್ರದಲ್ಲಿ ೧೯೫೪ರ ನೊಬೆಲ್ ಪ್ರಶಸ್ತಿಯನ್ನು ಪಡೆದರು. ೧೯೩೪ರಿಂದ ೧೯೩೬ರವರೆಗೆ, ಎನ್‌ಇಸಿ ಎಂಜಿನಿಯರ್ ಅಕಿರಾ ನಕಾಶಿಮಾ ಸ್ವಿಚಿಂಗ್ ಸರ್ಕ್ಯೂಟ್ ಸಿದ್ಧಾಂತವನ್ನು ಸರಣಿ ಪತ್ರಿಕೆಗಳಲ್ಲಿ ಪರೆಚಯಿಸಿ, ಎರಡು ಮೌಲ್ಯದ ಬೂಲಿಯನ್ ಆಲ್ಜೀಬ್ರ ಸ್ವಿಚಿಂಗ್ ಸರ್ಕ್ಯೂಟ್‌ಗಳ ಕಾರ್ಯಾಚರಣೆಯನ್ನು ವಿವರಿಸುತ್ತದೆ ಎಂದು ತೋರಿಸಿದರು. ಅವರ ಕೆಲಸವನ್ನು ನಂತರ ಕ್ಲೌಡ್ ಇ. ಶಾನನ್ ಅವರು ೧೯೩೭ರಲ್ಲಿ ಸ್ವಿಚಿಂಗ್ ಸರ್ಕ್ಯೂಟ್‌ಗಳ ವಿಶ್ಲೇಷಣೆ ಮತ್ತು ವಿನ್ಯಾಸದಲ್ಲಿ ಬೂಲಿಯನ್ ಆಲ್ಜೀಬ್ರದ ಬಳಕೆಯನ್ನು ವಿವರಿಸಿದರು. ತರ್ಕವನ್ನು ಕಾರ್ಯಗತಗೊಳಿಸಲು ವಿದ್ಯುತ್ ಸ್ವಿಚ್‌ಗಳ ಈ ಗುಣವು ಎಲ್ಲಾ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್‌ಗಳ ಹಿಂದಿರುವ ಮೂಲಭೂತ ಪರಿಕಲ್ಪನೆಯಾಗಿದೆ. ಸ್ವಿಚಿಂಗ್ ಸರ್ಕ್ಯೂಟ್ ಸಿದ್ಧಾಂತವು ಡಿಜಿಟಲ್ ಸರ್ಕ್ಯೂಟ್ ವಿನ್ಯಾಸದ ಅಡಿಪಾಯವಾಯಿತು. ಈಗ ಆಣ್ವಿಕ ಲಾಜಿಕ್ ಗೇಟ್ಗಳಲ್ಲಿ ಸಕ್ರಿಯ ಸಂಶೋಧನೆ ನಡೆಯುತ್ತಿದೆ.
ಲಾಜಿಕ್ ಗೇಟ್‌ಗಳು, ಅವುಗಳ ಚಿಹ್ನೆಗಳು ಮತ್ತು ಟ್ರುತ್ ಟೇಬಲ್ಗಳು
[ಸಂಪಾದಿಸಿ]ಈ ಲಾಜಿಗಿಕ್ ಗೇಟ್ಗಲ ಬಗ್ಗೆ ನಾವು ಕಲಿಯುವ ಮೊದಲು, ನಾವು ಟ್ರುತ್ ಟೇಬಲ್ಗಳ ಬಗ್ಗೆ ತಿಳಿದುಕೊಳ್ಳಬೇಕು. ಲಾಜಿಕ್ ಗೇಟ್ನ ಕಾರ್ಯವನ್ನು ತೋರಿಸಲು ಸಹಾಯ ಮಾಡಲು ಟ್ರುತ್ ಟೇಬಲ್ಗಳನ್ನು ಬಳಸಲಾಗುತ್ತದೆ. ವಿಭಿನ್ನ ಇನ್ಪುಟ್ ಸಂಯೋಜನೆಗಾಗಿ ಗೇಟ್ ನೀಡುವ ಔಟ್‌ಪುಟ್ ಅನ್ನು ಇದು ತೋರಿಸುತ್ತದೆ.
ಮೂಲ ಲಾಜಿಕ್ ಗೇಟ್ಗಳು:
ನಾಟ್ ಗೇಟ್: ನಾಟ್ ಗೇಟ್ ಒಂದು ಎಲೆಕ್ಟ್ರಾನಿಕ್ ಸರ್ಕ್ಯೂಟ್ ಆಗಿದ್ದು ಅದರ ಒಂದು ಇನ್ಪುಟ್ ಕಮ್ಮಿಯಾಗಿದ್ದರೆ, ಹೆಚ್ಚಿನ ಔಟ್ಪುಟ್ (1) ಅನ್ನು ನೀಡುತ್ತದೆ, ಅದರ ಒಂದು ಇನ್ಪುಟ್ ಹೇಚ್ಚಾಗಿದ್ದರೆ, ಕಡಿಮೆಯ ಔಟ್ಪುಟ್ (0) ಅನ್ನು ನೀಡುತ್ತದೆ. ನಾಟ್ ಕಾರ್ಯಾಚರಣೆಯನ್ನು ತೋರಿಸಲು ಡಾಶ್ (') ಅನ್ನು ಬಳಸಲಾಗುತ್ತದೆ (ಉದಾಹರಣೆಗೆ, A')
ಒರ್ ಗೇಟ್: ಒರ್ ಗೇಟ್ ಒಂದು ಎಲೆಕ್ಟ್ರಾನಿಕ್ ಸರ್ಕ್ಯೂಟ್ ಆಗಿದ್ದು ಅದರ ಯಾವುದಾದರು ಒಂದು ಇನ್ಪುಟ್ ಹೆಚ್ಚಾಗಿದ್ದರೆ, ಹೆಚ್ಚಿನ ಔಟ್ಪುಟ್ (1) ಅನ್ನು ನೀಡುತ್ತದೆ ಇಲ್ಲದಿದ್ದರೆ ಕಡಿಮೆಯ ಓಟ್ಪುಟ್ (0) ಅನ್ನು ನೀಡುತ್ತದೆ. ಒರ್ ಕಾರ್ಯಾಚರಣೆಯನ್ನು ತೋರಿಸಲು ಪ್ಲಸ್ (+) ಅನ್ನು ಬಳಸಲಾಗುತ್ತದೆ (ಉದಾಹರಣೆಗೆ, A+B)
ಆಂಡ್ ಗೇಟ್: ಆಂಡ್ ಗೇಟ್ ಒಂದು ಎಲೆಕ್ಟ್ರಾನಿಕ್ ಸರ್ಕ್ಯೂಟ್ ಆಗಿದ್ದು ಅದರ ಎಲ್ಲಾ ಇನ್ಪುಟ್ಗಳು ಹೆಚ್ಚಾಗಿದ್ದರೆ ಮಾತ್ರ ಹೆಚ್ಚಿನ ಔಟ್ಪುಟ್ (1) ಅನ್ನು ನೀಡುತ್ತದೆ ಇಲ್ಲದಿದ್ದರೆ ಕಡಿಮೆಯ ಓಟ್ಪುಟ್ (0) ಅನ್ನು ನೀಡುತ್ತದೆ. ಆಂಡ್ ಕಾರ್ಯಾಚರಣೆಯನ್ನು ತೋರಿಸಲು ಡಾಟ್ (.) ಅನ್ನು ಬಳಸಲಾಗುತ್ತದೆ (ಉದಾಹರಣೆಗೆ, A.B)
ಈ ಮೂಲ ಲಾಜಿಕ್ ಗೇಟ್ಗಳನ್ನು ಉಪಯೋಗಿಸಿ ವಿವಿಧವಾದ ಗೇಟ್ಗಳನ್ನು ಪಡೆಯಬಹುದು.
ಉಲ್ಲೇಖಗಳು
[ಸಂಪಾದಿಸಿ]೧. ಲಾಜಿಕ್ ಗೇಟ್ , https://en.wikipedia.org/wiki/Logic_gate
೨. ಮೂಲ ಗೇಟ್ಸ್ ಮತ್ತು ಕಾರ್ಯಗಳು , http://www.ee.surrey.ac.uk/Projects/CAL/digital-logic/gatesfunc/
೩. ಲಾಜಿಕ್ ಗೇಟ್ , https://whatis.techtarget.com/definition/logic-gate-AND-OR-XOR-NOT-NAND-NOR-and-XNOR
೪. ಲಾಜಿಕ್ ಗೇಟ್ ವ್ಯಾಖ್ಯಾನ , https://techterms.com/definition/logicgate