ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪y೩ ಯನ್ನು ಮಾಡುವ ಆಕರುವ, ದಾರಿಯನ್ನು ಗುಡಿಸುವ ಅಬೇವಿ, ಕಲೀಫರ ಸೇವಕರಲ್ಲಿ ಒಬ್ಬನಾದ ಕಾಸೀನು, ಇವರುಗಳ ಜ್ಞಾಪಕವು ನನಗೆ ತೋರುತ್ತಿರುವುದು. ಇವರಿಬ್ಬರಾದರೂ ವ್ಯಸನಪಡತಕ್ಕವ ರಲ್ಲ. ಎಲ್ಲರೂ ಸುಲ್ತಾನರಿಗಿಂತಲೂ ಅಧಿಕವಾದ ಆನಂದವನ್ನು ವಹಿಸಿ ಕೊಂಡಿರುವರು. ಅವರು ಸದಾ ಸಂಗೀತಸಾಹಿತ, ನೃತ್ಯ, ಗೀತ ವಾದ್ಯಗಳ ಸೊಬಗನ್ನು ಅನುಭವಿಸುತ್ತ, ಈ ನಗರದಲ್ಲಿರುವ ಸಮಸ್ತವಾದ ವಿನೋದ ಗಳನ್ನು ಅನುಭವಿಸುತ್ತಿರುವರು. ಇಂಥವರಲ್ಲಿರುವ ಒಂದು ಸಗುಣವನ್ನು ನಾನು ಮೆಚ್ಚಿಕೊಂಡನು. ಅದೇನೆಂದರೆ :-ಈ ನಿಮ್ಮ ಸೇವಕನಾದ ನಾನು ಯಾವಾಗಲೂ ಹೀಗೆ ಮಾತನಾಡುವುದರಲ್ಲಿ ನಿತಭಾಷಿಯನಿಸಿ ಕಂಡಿರುವನೋ, ಹಾಗೆ ಅವರು ಇರುವರಲ್ಲದೆ, ಹಿಂದುಮಾತನ್ನಾದರೂ, ಹೆಚ್ಚಾಗಿ ಆಡಲಾರರೆಂಬುದೊಂದೆ, ಅವರು ಮಾಡುವ ಸಕಲ ಕಾರ್ಯ ಗಳನ್ನು ನನಗೆ ತಿಳಿಸಿ, ಅದರ ಗುಣಾಗುಣಗಳನ್ನು ನನ್ನಿಂದ ಕೇಳಿ ತಿಳಿದು ಕೊಳ್ಳುತ್ತಿದ್ದರು. ಇಂರಂದು ಹೇಳಿ ಸಹರಜಾದಿಯು ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು, ೧೬೪ ನೆಯ ರಾತ್ರಿ | ಕಥೆ. - ಪಹರಜೆದಿಯುಸುಲ್ತಾನರನ್ನು ಕುರಿತು, ಆ ಕುಂಟಹುಡುಗನು ಇಂತಂದನೆಂದು ಹೇಳತೊಡಗಿದಳು. ಅಯಾ ! ಬಹಳವಾಗಿ ಹೇಳಿದುದ ರಿಂದ ಫಲವೇನು, ಅವರು ತಾವು ಆನಂದಭರಿತರಾಗುವಂತೆ ತಮ್ಮ ಸಂಗಡ ಸೇರಿದ ಇತರರನ್ನು ಸಂತೋಷಸಾಗರದಲ್ಲಿ ಮುಳುಗಿಸುವರು. ನೀವು ನಿಮ್ಮ ಸಹಿಕರ ಮನಗೆಹೋದರೆ, ನಿಮ್ಮ ವ್ಯಥೆಯು ಇನ್ನೂ ಅಧಿಕ ವಾಗಬಹುದು. ಆದುದರಿಂದ ನೀವು ನಾನು ಹೇಳುವ ಮಾತನ್ನು ಅಂಗೀ ಕರಿಸಿ, ನನ್ನ ಮನೆಗೆ ಬರುವುದಾದರೆ, ನಿಮಗೆ ಸದಾ ಆನಂದ ಉಂಟಾಗುವುದ ರಲ್ಲಿ ಯAವ ಸಂಶಯವೂ ಇಲ್ಲ. ನೀವು ನಾನುಹೇಳಿದ ಮಾತುಗಳನ್ನು ನಿಜವೆಂದು ನಂಬಿ, ನನ್ನ ಮನೆಗೆ ಬಂದು ನೋಡಿದರೆ, ಅದರ ಆನಂದವನ್ನು ನೀನೆ ಕೊಂಡಾಡುತ್ತಿರುವೆಯಾ ! ಎಂದು ಈ ನಾಯಿಂದನು ಬಾಯ ಬಡಿದನು. ಆ ಮಾತುಗಳನ್ನು ಕೇಳಿದಕೂಡಲೆ, ನನಗೆ ಅತ್ಯಂತವಾದ