೮.ಜಾತಿಯ ಧರ್ಮ ಮತ್ತು ಆಚರಣೆ : ಒಟ್ಟು ಕುಟುಂಬ
“ ಭಾರತೀಯರಲ್ಲಿ ಧರ್ಮವು ಕೇವಲ ಒಂದು ತತ್ವವಲ್ಲ, ವಿವಿಧ ಜೀವನ ಮಟ್ಟಕ್ಕೆ ವಿವಿಧ ಧಾರ್ಮಿಕ ಮನೋಭಾವನೆಗೆ ಅನುಗುಣವಾಗಿ ರಚಿಸಿದ ಜನಜೀವನದ ರೀತಿಯ ಒಂದು ಮಾರ್ಗ ಸೂಚಿ ” ಎಂದು ಹ್ಯಾವೆಲ್ ಹೇಳುತ್ತಾನೆ. ಅತಿ ಪ್ರಾಚೀನ ಕಾಲದಲ್ಲಿ ಹಿಂದೂ ಆರ್ಯ ಸಂಸ್ಕೃತಿಯು ರೂಪುಗೊಂಡಾಗ ನಾಗರಿಕತೆಯಲ್ಲಿ ಬುದ್ದಿ ವಿಕಸನದಲ್ಲಿ ಧಾರ್ಮಿಕ ಉನ್ನತಿಯಲ್ಲಿ ಎಷ್ಟು ಭಿನ್ನತೆಯನ್ನು ಊಹಿಸಬಹುದೊ ಅಷ್ಟೂ ಭಿನ್ನವಿದ್ದ ಜನರ ಅವಶ್ಯಕತೆಗೆ ಒಂದು ಧರ್ಮವನ್ನು ರಚಿಸಬೇಕಾಗಿತ್ತು. ಕಾಡು ಜನರಿದ್ದರು, ವಸ್ತು ಪೂಜಕರಿದ್ದರು, ಕುಲದೇವತೆಯ ಆರಾಧಕರಿದ್ದರು ; ಎಲ್ಲ ಬಗೆಯ ಮೂಢ ನಂಬಿಕೆಯ ಜನರೂ ಇದ್ದರು ; ಆತ್ಮಜ್ಞಾನದಲ್ಲಿ ಅತ್ಯುನ್ನತ ಮಟ್ಟವನ್ನೇರಿದ ಮಹಾನುಭಾವಿಗಳೂ ಇದ್ದರು. ಈ ಅಂತರದ ಮಧ್ಯೆ ಎಲ್ಲ ಬಗೆಯ ಮತಾಚಾರಗಳೂ ಇದ್ದವು. ಕೆಲವರು ಶ್ರೇಷ್ಠ ಜ್ಞಾನ ಜಿಜ್ಞಾಸುಗಳಾಗಿದ್ದರೂ ಅನೇಕರಿಗೆ ಅದು ಸಾಧ್ಯವಿರಲಿಲ್ಲ. ಸಮಾಜ ಜೀವನವು ಬೆಳೆದಂತೆ ಮತಾ ಚರಣೆಯಲ್ಲಿ ಒಂದು ಬಗೆಯ ಸ್ತಿಮಿತ ಸ್ಥಿತಿಯು ಬಂದಿತಾದರೂ ಸಾಂಸ್ಕೃತಿಕ ಮಾನಸಿಕ ವ್ಯತ್ಯಾಸಗಳು ಅನೇಕ ಉಳಿದವು. ಯಾವ ಮತವನ್ನೂ ಬಲಾತ್ಕಾರದಿಂದ ತುಳಿಯಬಾರದು, ನಾಶಮಾಡಬಾರದು, ಎಂಬುದು ಹಿಂದೂ ಆರ್ಯ ಧರ್ಮದ ನೀತಿ, ಪ್ರತಿಯೊಂದು ಪಂಗಡಕ್ಕೂ, ತನ್ನ ಮಾನಸಿಕ ಬೆಳವಣಿಗೆ ಮತ್ತು ಶಕ್ತಿಯ ಮಟ್ಟ ಕ್ಕನುಗುಣವಾಗಿ ತನ್ನ ಆದರ್ಶವನ್ನು ಸಾಧಿಸಿಕೊಳ್ಳಲು ಪೂರ್ಣ ಸ್ವಾತಂತ್ರ್ಯ, ವಿತ್ತು. ಸಮನ್ವಯದ ಪ್ರಯತ್ನ ಎಷ್ಟೋ ನಡೆದರೂ ತಿರಸ್ಕಾರ ಬುದ್ಧಿಯಾಗಲಿ, ತುಳಿಯುವ ಬುದ್ಧಿ ಯಾಗಲಿ ಇರಲಿಲ್ಲ.
ಸಮಾಜರಚನೆಯಲ್ಲೂ ಇದೇ ಬಗೆಯ ಇನ್ನೂ ಕಠಿಣ ಸಮಸ್ಯೆಯು ಎದ್ದಿತು. ಪ್ರತಿಯೊಂದು ಪಂಗಡಕ್ಕೂ ತನ್ನ ಜೀವನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಲು ಸ್ವಾತಂತ್ರ್ಯ ಕೊಟ್ಟ ರೂ ಪ್ರತಿಯೊಂದು ಪಂಗಡವೂ ಇತರ ಎಲ್ಲ ಪಂಗಡಗಳೊಂದಿಗೆ ಒಂದು ಸಂಸ್ಕೃಷ್ಟ ಜೀವನ ನಡೆಸುವಂತೆ ಈ ಭಿನ್ನ ಭಿನ್ನ ಸಂಗಡಗಳನ್ನು ಒಂದು ಸಮಾಜವಾಗಿ ಹಣೆ ಯುವುದು ಹೇಗೆಂಬುದು ಮುಖ್ಯ ಸಮಸ್ಯೆಯಾಯಿತು. ಅಷ್ಟು ಸಮಂಜಸವಲ್ಲದಿದ್ದರೂ ಅನೇಕ ದೇಶಗಳಲ್ಲಿ ಈಗ ತಲೆದೋರಿರುವ ಅಲ್ಪಸಂಖ್ಯಾತರ ಪ್ರಶ್ನೆಗೆ ಈ ಸಮಸ್ಯೆಯನ್ನು ಹೋಲಿಸಬಹುದು. ಪ್ರತಿಯೊಬ್ಬ ರಾಷ್ಟಕವನ್ನೂ ಹದಿನಾರಾಣೆ : ಅಮೆರಿಕನ್ ' ಮಾಡುವ ಮೂಲಕ ಅಮೆರಿಕ ತನ್ನ ಸಮಸ್ಯೆ ಬಗೆಹರಿಸಲು ಯತ್ನ ಮಾಡಿದೆ. ಎಲ್ಲರಿಗೂ ಒಂದು ಮಾದರಿ ಯನ್ನು ತೋರಿಸಿದ್ದಾರೆ. ಪ್ರಾಚೀನವೂ ಜಟಿಲವೂ ಆದ ಇತಿಹಾಸ ಪರಂಪರೆಯುಳ್ಳ ಇತರ ದೇಶ ಗಳಿಗೆ ಈ ಸಮಸ್ಯಾ ಪರಿಹಾರವು ಅಷ್ಟು ಸುಲಭವಲ್ಲ. ಕೆನಡದಲ್ಲಿ ಸಹ ತಮ್ಮ ಧರ್ಮ ಮತ್ತು ಭಾಷೆಯ ರಕ್ಷಣೆಯಲ್ಲಿ ಉಜ್ವಲ ಅಭಿಮಾನಿಗಳಾದ ಫ್ರೆಂಚರು ಇದಾರೆ. ಯೂರೋಪಿನಲ್ಲಿ ಈ ಅಂತ ರದ ಮಟ್ಟವು ಉನ್ನತವೂ ಇದೆ, ಆಳವೂ ಇದೆ. ಆದರೂ ಅದೆಲ್ಲ ಒಂದೇ ಸಂಸ್ಕೃತಿ ಮತ್ತು ಒಂದೇ ಹಿನ್ನೆಲೆಯುಳ್ಳ ಯೂರೋಪಿಯನರಲ್ಲಿ ಮಾತ್ರ. ಯೂರೋಪಿಯನರಲ್ಲದವರು ಬಂದೊಡನೆ ಅವರಿಗೆ ಈ ಯೂರೋಪಿನ ಆಯಕಟ್ಟಿನಲ್ಲಿ ಸ್ಥಾನವಿಲ್ಲ. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ನೀಗಳು ಹದಿನಾರಾಣೆ ಅಮೆರಿಕನರಾದರೂ ಅವರ ಜನವೇ ಬೇರೆ. ಇತರರಿಗೆ ಸಾಮಾನ್ಯವಾಗಿ ದೊರಕುವ ಅನೇಕ ಸೌಲಭ್ಯಗಳೂ ಅವಕಾಶಗಳೂ ಅವರಿಗೆ ನಿಷೇಧ, ಇತರ ಕಡೆಗಳ ಉದಾಹರಣೆ ಇನ್ನೂ ಹೊಲಸು. ಸೋವಿಯಟ್ ರಷ್ಯ ಮಾತ್ರ ಬಹು ಜನಾಂಗ ರಾಜ್ಯವನ್ನು ಕಟ್ಟಿ ತನ್ನ ಅಲ್ಪ ಸಂಖ್ಯಾ ತರ ಮತ್ತು ಜನಾಂಗಗಳ ಪ್ರಶ್ನೆಯನ್ನು ಬಿಡಿಸಿರುವಂತೆ ತೋರುತ್ತದೆ.
ಇಷ್ಟು ಅನುಭವ, ಪ್ರಗತಿ ನಮಗಿದ್ದರೂ ಈ ಸಮಸ್ಯೆಗಳು ಈಗಲೂ ನಮ್ಮ ತಲೆಕೆಡಿಸುತ್ತಿರು ವಾಗ ಭಿನ್ನ ಬಗೆಯ ಭಿನ್ನ ಜೀವನದ ಅನೇಕ ಪಂಗಡಗಳ ಜನರನ್ನು ಒಂದು ನಾಗರಿಕತೆಯ, ಒಂದು ಸಮಾಜದ ಎಲ್ಲೆ ಕಟ್ಟಿನೊಳಗೆ ತರುವ ಪ್ರಯತ್ನದಲ್ಲಿ ಪ್ರಾಚೀನ ಕಾಲದ ಹಿಂದೂ ಆರರಿಗೆ ಆಗ ಎಷ್ಟು ಕಷ್ಟವಾಗಿರಬೇಕು ? ಸಾಮಾನ್ಯವಾಗಿ ಇಂತಹ ಸಮಸ್ಯೆಗಳನ್ನು ಬಿಡಿಸುವ ಬಗೆ ಎಂದರೆ ಆಗ ಮತ್ತು