ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೮೭

ಹವು ಒಂದು ದೊಡ್ಡ ಅಪಮಾನ, ಮಾನವನ ಭೋಗ ಜೀವನದಲ್ಲಿ ನಾಶದ ಬೀಜವಿದೆ ಎನ್ನುವ ಮಹಾ ಕಲ್ಪನೆಗೆ ಈ ಕೃತಿಯು ಒಂದು ಮೂರ್ತಸ್ವರೂಪ, ಯಾವ ಲಾಕ್ಷಣಿಕ ಆಡಂಬರವೂ ಇಲ್ಲದೆ, ಮುಖ್ಯ ಸಾಧನವನ್ನು ಮಾತ್ರ ದೃಷ್ಟಿಯಲ್ಲಿಟ್ಟು, ಸ್ವಾಭಾವಿಕ ಸುನಮ್ಯತೆಯುಳ್ಳ ಈ ಘನವಾದ ಕೃತಿಗಳೊಂದಿಗೆ ನಮ್ಮ ಯುರೋಪಿಯನ್ ರೂಪಕಗಳು ನಿಸ್ಸಾರ, ಅರ್ಥಶೂನ್ಯ ಕೃತಿ ಗಳು ” ಎಂದು ಎಪ್ ಸೀನ್ ಬರೆದಿರುತ್ತಾನೆ.
ಜಾವಾ ಪಠ್ಯಾಯ ದ್ವೀಪದ ಬೋರೊಬುದೂರಿನ ಬೋಧಿಸ್ತವನ ಒಂದು ಶಿರಸ್ಸನ್ನು ಕೋಪನ್ ಹೇಗನ್‌ನ | ಪ್ರೋಟಿಕ್ ನಲ್ಲಿ ಇಟ್ಟಿರುತ್ತಾರೆ. ಬಾಹ್ಯ ಸೌಂದರವನ್ನು ನೋಡಿದರೆ ಸುಂದರವಿದೆ ; ಆದರೆ ಹೆವೆಲ್ ಹೇಳುವಂತೆ “ಬೋಧಿಸ್ತನನ ಶುದ್ಧಾತ್ಮವನ್ನು ಪ್ರತಿಬಿಂಬಿಸುವ ಕನ್ನಡಿಯಂತ ಒಂದು ಗಾಢವಾದ ಅರ್ಥವು ಅದರಲ್ಲಿದೆ.” ಆ ಮುಖದಲ್ಲಿ ಆಳವನ್ನರಿಯದ ಸುನೀಲಸಾಗರನ ಪ್ರಶಾಂತ ಮುದ್ರೆ ಇದೆ, ಶುಭನಭೋಮಂಡಲದ ನೀಲಿಮತೆಯ ಗಾಂಭೀರವಿದೆ, ಮಾನವ ಮನಸ್ಸಿಗೆ ನಿಲುಕದ ದಿವ್ಯಾನಂದವಿದೆ.” ಎಂದಿದ್ದಾನೆ. ,
ಭರತಖಂಡದ ಕಲೆಯಲ್ಲಿ ಕಾಣದ ಒಂದು ವೈಶಿಷ್ಟ್ಯವು ಜಾವಾದ ಭಾರತೀಯ ಕಲೆಯಲ್ಲಿ ಇದೆ. ಎರಡರಲ್ಲೂ ಅಗಾಧ ಗಾಂಭೀರ ಮುದ್ರೆ ಇದೆ. ಆದರೆ ಎಲಿಫೆಂಟಾ ಮತ್ತು ಮಾಮಲ್ಲ ಪುರದ ಹಿಂದೂ ದೇವಾಲಯಗಳಲ್ಲಿನ ವಿರಕ್ತ ಭಾವನೆ ಜಾವಾದ ದೈವಿಕ ಆದರ್ಶದಲ್ಲಿ ಇಲ್ಲ. ಇಂಡೋ- ಜಾವಾ ಕಲೆ ಯಲ್ಲಿ ಹೆಚ್ಚು ಮಾನವ ಸೌಖ್ಯ ಮತ್ತು ಸಂತೋಷದ ಛಾಯೆ ಇವೆ. ಭರತಖಂಡದಲ್ಲಿ ತಮ್ಮ ಪೂರ್ವಿ ಕರು ಅನೇಕ ಶತಮಾನಗಳ ಕಾಲ ಕಷ್ಟ ಪರಂಪರೆಗಳನ್ನು ಅನುಭವಿಸಿದನಂತರ ಭಾರತೀಯ ವಲಸೆ ಗಾರರು ಈ ದ್ವೀಪಗಳಲ್ಲಿ ತಮ್ಮ ಸೌಖ್ಯದ ಬೀಡನ್ನು ಕಟ್ಟಿದರು. ಆ ಸುಖ ಮತ್ತು ಶಾಂತ ಜೀವನಕ್ಕೆ ಈ ಕಲೆಯು ಒಂದು ರೂಪುಕೊಟ್ಟಿದೆ.

೧೯. ಇಂಡಿಯದ ವಿದೇಶ ವ್ಯಾಪಾರ


ಕ್ರಿಸ್ತಶಕೆಯ ಮೊದಲನೆ ಹತ್ತು ಶತಮಾನಗಳಲ್ಲಿ ಭಾರತದ ಹೊರವ್ಯಾಪಾರವು ಅಪಾರವಾಗಿತ್ತು. ಭಾರತೀಯ ವರ್ತಕರು ಅನೇಕರು ಅನೇಕ ದೇಶ ವಿದೇಶಗಳ ವ್ಯಾಪಾರವನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಂಡಿದ್ದರು. ಪೂರ್ವ ತೀರಗಳ ಸಮುದ್ರಗಳಲ್ಲೆಲ್ಲ ವ್ಯಾಪಿಸಿ, ಭೂಮಧ್ಯ ಸಮುದ್ರದವರೆಗೂ ಈ ವ್ಯಾಪಾರ ಹಬ್ಬಿತ್ತು. ಭಾರತೀಯ ಮತ್ತು ಚೀನಾ ನೌಕೆಗಳಲ್ಲಿ ಇಂಡಿಯದಿಂದ ಅಥವ ಇಂಡಿ ಯದ ಮೂಲಕ ಮೆಣಸು ಮತ್ತು ಇತರ ಸಾಂಬಾರ ವಸ್ತುಗಳು ಪಶ್ಚಿಮದೇಶಗಳಿಗೆ ಹೋಗುತ್ತಿದ್ದವು. ಗಾತ್ ದೇಶದ ಅಲಾರಿಕ್ನು ರೋಮ್ ನಗರದಿಂದ ಮೂರುಸಾವಿರ ಪೌಂಡು ಮೆಣಸನ್ನು ತೆಗೆದು ಕೊಂಡು ಹೋದನಂತ, ಅನೇಕ ಭೋಗ್ಯ ವಸ್ತುಗಳಿಗಾಗಿ ರೋಮಿನಿಂದ ಇ೦ಡಿಯ ಮತ್ತು ಪೂರ್ವ ದೇಶಗಳಿಗೆ ಹೊನ್ನಿನ ಹೊಳೆ ಹರಿಯುತ್ತಿದೆ ಎಂದು ರೋಮನ್ ಲೇಖಕರು ವ್ಯಸನಪಡುತ್ತಿದ್ದರಂತೆ,
ಇತರ ಕಡೆಗಳಂತೆ ಇಂಡಿಯದಲ್ಲಿ ಸಹ ಆಗಿನಕಾಲದಲ್ಲಿ ಈ ವ್ಯಾಪಾರವು ಸ್ಥಳದಲ್ಲಿ ದೊರಕುವ ಮತ್ತು ತಯಾರಿಸುವ ವಸ್ತುಗಳನ್ನು ಅದಲು ಬದಲು ಮಾಡುವ ವಿನಿಮಯ ಪದ್ಧತಿಯಲ್ಲಿ ನಡೆಯು ತಿತ್ತು. ಭಾರತವು ಬಹು ಫಲವತ್ತಾದ ದೇಶ ; ಇತರ ದೇಶದಲ್ಲಿ ದೊರೆಯದ ಎಷ್ಟೋ ವಸ್ತುಗಳು ಇಲ್ಲಿ ದೊರೆಯುತ್ತಿದ್ದವು. ಸಮುದ್ರ ಮಾರ್ಗಗಳೆಲ್ಲ ಭಾರತದ ಅಧೀನವಿದ್ದುದರಿಂದ ಆ ಸಾಮಾನು ಗಳೆಲ್ಲ ಭಾರತದಿಂದ ಹೊರದೇಶಗಳಿಗೆ ಹೋಗುತ್ತಿದ್ದವು. ಆ ವಸ್ತುಗಳನ್ನು ಪೂರ್ವ ದ್ವೀಪಗಳಿಂದ ತಂದು ಸಟ್ಟಾ ವ್ಯಾಪಾರಮಾಡಿ ಭಾರತೀಯ ವರ್ತಕರು ಲಾಭ ಪಡೆಯುತ್ತಿದ್ದರು. ಅಲ್ಲದೆ ಇನ್ನೂ ಕೆಲವು ಅನುಕೂಲಗಳಿದ್ದವು. ಇತರ ದೇಶಗಳು ಆರಂಭಿಸುವ ಮುಂಚೆ ಅನೇಕ ಶತಮಾನಗಳ ಹಿಂದಿನಿಂದ ಭಾರತದಲ್ಲಿ ಬಟ್ಟೆ ಯು ತಯಾರಾಗುತ್ತಿದ್ದಿತು. ಬಟ್ಟೆ ಕೈಗಾರಿಕೆ ಪ್ರಮುಖ ಉದ್ಯಮ ವಾಗಿತ್ತು. ಇಂಡಿಯದಿಂದ ಬಟ್ಟೆ ಯು ಬಹುದೂರದ ದೇಶಗಳಿಗೆ ಹೋಗುತ್ತಿತ್ತು. ಕ್ರಿಸ್ತಪೂರ್ವದ ಶತಮಾನದಿಂದ ಇಂಡಿಯಾದೇಶಕ್ಕೆ ಬರುತ್ತಿದ್ದ ಚೀನಾ ರೇಷ್ಮೆಯಷ್ಟು ನಯವಿರದಿದ್ದರೂ, ಬಹು