ಪುಟ:ಭಾರತ ದರ್ಶನ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೫೭

ಈಗಲೂ ಇಂಡಿಯಕ್ಕೆ ಹಿಂದ್ ಎಂದು ಕರೆಯುತ್ತಾರೆ. ಪಶ್ಚಿಮ ಏಷ್ಯದ ದೇಶಗಳಲ್ಲಿ, ಇರಾಣ, ತುರ್ಕಿ, ಇರಾಕ್, ಆಫ್ಘಾನಿಸ್ಥಾನ, ಈಜಿಪ್ಟ್ ಮುಂತಾದ ದೇಶಗಳಲ್ಲಿ ಈಗಲೂ ಹಿಂದ್ ಎಂದೇ ಕರೆಯುತ್ತಾರೆ. ಪ್ರತಿಯೊಬ್ಬ ಭಾರತೀಯನನ್ನೂ (ಹಿಂದಿ' ಎಂದೇ ಕರೆಯುತ್ತಾರೆ, (ಹಿಂದಿ'ಗೆ ಯಾವ ಮತದ ಸಂಬಂಧವೂ ಇಲ್ಲ. ಮುಸ್ಲಿ೦ ಆಗಲಿ, ಕ್ರಿಶ್ಚಿರ್ಯ ಆಗಲಿ, ಹಿಂದೂ ಆಗಲಿ ಎಲ್ಲ ಭಾರತೀಯರೂ ಹಿಂದಿ'ಗಳು, ಭಾರತೀಯರನ್ನೆಲ್ಲ ಹಿಂದೂಗಳು ಎಂದು ಅಮೆರಿಕನ್ನರು ಕರೆಯುವುದು ದೊಡ್ಡ ತಪ್ಪಲ್ಲ. ಅದರ ಬದಲು ಹಿಂದಿ' ಎಂದು ಕರೆದರೆ ಸರಿಹೋಗುತ್ತದೆ. ಆದರೆ ಸಂಸ್ಕೃತ ಭಾಷೆಯ ದೇವನಾಗರಿ ಲಿಪಿ ದೃಷ್ಟಿ ಯಿಂದ ಹಿಂದಿ ' ಎಂದರೆ ಒಂದು ಲಿಪಿ ಎಂಬ ಭಾವನೆ ಬಂದಿರುವುದು ದುರದೃಷ್ಟ, ಆದ್ದರಿಂದ : ಹಿಂದಿ ' ಎಂಬ ಶಬ್ದವನ್ನು ಅದರ ಸಹಜ ಅರ್ಥ ದಲ್ಲಿ, ವಿಶಾಲಭಾವನೆಯಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ಪ್ರಾಯಶಃ ಇಂದಿನ ವಾಗ್ಯುದ್ದಗಳು ತಣ್ಣಗಾದ ಮೇಲೆ 'ಹಿಂದಿ' ಯನ್ನು ಅದರ ನಿಜವಾದ ನ್ಯಾಯವಾದ ಅರ್ಥದಲ್ಲಿ ಉಪಯೋಗಿಸಲು ಸಾಧ್ಯವಾಗಬಹುದು, ಈಗ 'ಇ೦ಡಿರ್ಯ' ಎ೦ಬುದರ ಬದಲು ಹಿಂದೂಸ್ತಾನಿ ಎಂಬ ಶಬ್ದ ಬಳಕೆ ಯಲ್ಲಿದೆ. ಅದೂ 'ಹಿಂದೂಸ್ಥಾನದಿಂದಲೇ ಬಂದಿರುವುದು, ಆದರೆ ಅದನ್ನು ಬಾಯಿ ತುಂಬ ಹೇಳ ಬೇಕಾಗುತ್ತದೆ. ಅಲ್ಲದೆ ಅದಕ್ಕೆ ಹಿಂದಿ'ಯಂತೆ ಯಾವ ಐತಿಹಾಸಿಕ ಅಥವ ಸಾಂಸ್ಕೃತಿಕ ಸಂಬಂಧವೂ ಇಲ್ಲ. ಪುರಾತನ ಕಾಲದ ಭಾರತೀಯ ಸಂಸ್ಕೃತಿಗೆ ಹಿಂದೂಸ್ಥಾನಿ' ಎಂದು ಹೇಳುವದು ನಿಜವಾಗಿಯೂ ಹಾಸ್ಯಾಸ್ಪದ.

ನಮ್ಮ ಸಾಂಸ್ಕೃತಿಕ ಸಂಪ್ರದಾಯವನ್ನು ಇಂಡಿಯನ್, ಹಿಂದಿ, ಹಿಂದೂಸ್ಥಾನಿ, ಅಥವ ಬೇರೆ ಯಾವ ಹೆಸರಿನಿಂದಲೇ ಕರೆಯಲಿ, ಮುಖ್ಯವಾಗಿ ಭಾರತೀಯ ದರ್ಶನ ದೃಷ್ಟಿಯಿಂದ ಉದ್ಭವಿಸಿದ ಸಂಯೋಜಕ ಅ೦ತ ಕ್ರಿಯೇ ಭಾರತೀಯ ಸಂಸ್ಕೃತಿಯ ಮತ್ತು ಜನತೆಯ ಪ್ರಗತಿಗೆ ಮುಖ ಕಾರಣವಾಗಿತ್ತು. ಪರದೇಶದವರಿಂದ ಬಂದ ಪ್ರತಿ ಒಂದು ದಾಳಿಯಿಂದಲೂ ಈ ಸಂಸ್ಕೃತಿಯ್ಯ ಸತ್ವ ಪರೀಕ್ಷೆಯಾಗುತ್ತಿತ್ತು. ಅ೦ತರ್ಗತ ಮಾಡಿಕೊಳ್ಳುವ ಒಂದು ಹೊಸ ಸಂಶೋಧನಾ ಶಕ್ತಿಯಿಂದ ಆ ದಾಳಿಯನ್ನು ಎದುರಿಸಿ ಜೀರ್ಣಿಸಿಕೊಳ್ಳುತ್ತಿತ್ತು. ಇದರಿಂದ ಒಂದು ನವ ಚೈತನ್ಯವೂ ದೊರೆಯು ತಿತ್ತು. ಸಾಂಸ್ಕೃತಿಕ ಹಿನ್ನೆಲೆ ಮತ್ತು ಮೂಲ ತಳಹದಿ ಒ೦ದೆ ಇರುತ್ತಿದ್ದರೂ ಸಂಸ್ಕೃತಿ ಸಂಪರ್ಕದ ಹೊಸ ಹೂಗಳು ಅರಳುತ್ತಿದ್ದವು. ಸಿ. ಇಎಮ್, ಜೋಡ_“ಕಾರಣವೇನೆ ಇರಲಿ, ಭಿನ್ನ ತೆಯಲ್ಲಿ ಐಕ್ಯತೆ ಅನೇಕ ಭಿನ್ನ ಭಾವನೆಗಳಲ್ಲಿ ಮತ್ತು ಜನಗಳಲ್ಲಿ ಒಂದು ಸಮರಸತೆಯನ್ನುಂಟುಮಾಡುವ ಶಕ್ತಿ ಮತ್ತು ಇಚ್ಛ ಭಾರತೀಯರ ವೈಶಿಷ್ಟ, ಈ ವೈಶಿಷ್ಟ್ಯವೇ ಭಾರತವು ಮಾನವ ಕುಲಕ್ಕೆ ಕೊಟ್ಟ ಮಹಾಪ್ರಸಾದ” ಎಂದಿದಾನೆ.

೪. ಅತಿ ಪ್ರಾಚೀನ ಸಾಕ್ಷ್ಯಗಳು : ವೇದ ಮತ್ತು ಪುರಾಣಗಳು


ಸಿಂಧೂನದಿಯ ನಾಗರಿಕತೆಯ ಭೂಶೋಧನೆಗೆ ಮೊದಲು ವೇದಗಳೇ ಭಾರತೀಯ ಸಂಸ್ಕೃತಿಯ ಅತಿ ಪ್ರಾಚೀನ ಸಾಕ್ಷ್ಯಗಳೆಂಬ ನಂಬಿಕೆ ಇತ್ತು. ವೇದಗಳ ಕಾಲನಿರ್ಣಯದಲ್ಲಿ ಯೂರೋಪಿನ ವಿದ್ವಾಂ ಸರುಗಳು ಅವು ಇತ್ತೀಚಿನವೆಂದೂ, ಭಾರತೀಯ ವಿದ್ವಾಂಸರು ಬಹಳ ಹಿಂದಿನವೆಂದೂ ಹೇಳುತ್ತ ಬಹಳ ಜಿಜ್ಞಾಸೆ ನಡೆಯುತ್ತಿತ್ತು. ಆದಷ್ಟು ಹಿಂದೆ ಹೋಗಿ ನಮ್ಮ ಪುರಾತನ ಸಂಸ್ಕೃತಿಯ ಪ್ರಾಮು ಖ್ಯತೆ ಹೆಚ್ಚಿಸಬೇಕೆಂಬ ಭಾರತೀಯರ ಆಶೆ ವಿಚಿತ್ರವಾಗಿದೆ. ಪ್ರೊಫೆಸರ್ ವಿಂಟರ್ ನಿಟ್ಸ್ ವೇದಗಳ ಕಾಲ ಕ್ರಿಸ್ತಪೂರ್ವ ೨೦೦೦ ಅಥವ ೨೫೦೦೦ ಎಂದಿದ್ದಾನೆ. ಇದು ಮೊಹೆಂಜೊದಾರೊ ಯುಗದ ಸಮಾಪಕ್ಕೆ ಬರುತ್ತದೆ.


ಸಾಮಾನ್ಯವಾಗಿ ಋಲ್ವೇದದ ಋಕ್ಕುಗಳ ಕಾಲ ಕ್ರಿಸ್ತಪೂರ್ವ ೧೫೦೦ ಎಂದು ಈಗ ಎಲ್ಲರೂ ಒಪ್ಪುತ್ತಾರೆ. ಆದರೆ ಮೊಹೆಂಜೊದಾರೊ ಭೂಶೋಧನೆಯಾದಮೇಲೆ ವೇದಗಳು ಇನ್ನೂ ಹಿಂದಿನವು ಎಂದು ಹೇಳುವ ಚಟ ಕೆಲವರಿಗೆ ಹಿಡಿದಿದೆ. ಕಾಲ ಯಾವುದೇ ಇರಲಿ ಈ ಸಾಹಿತ್ಯ ಗ್ರೀಸ್ ಅಥವ