ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊಸರು ಅds ಎತ್ತಿಕಟ್ಟಿ ಪರಸ್ಪರ ವೈಷಮ್ಯ ತರುವುದು ಬ್ರಿಟಿಷರ ಒಂದು ನಿರ್ದಿಷ್ಟ ಶಾಶ್ವತ ನೀತಿಯಾಯಿತು, ಮೊದಲು ಮೊದಲು ಈ ನೀತಿಯನ್ನು ತಾವೇ ಒಪ್ಪಿಕೊಂಡರು ಮತ್ತು ಸ್ನಾಮ್ರಾಜ್ಯ ಆಡಳಿತಕ್ಕೆ ಅದು ಸಹಜವೂ ಆಗಿತ್ತು. ರಾಷ್ಟ್ರೀಯ ಚಳವಳಿಯು ಬಲಗೊಂಡಂತ ಈ ನೀತಿಯು ಬಹು ನಯ ವಾಗಿ ಇನ್ನೂ ಉಗ್ರವಾಯಿತು, ಮತ್ತು ಮೇಲೆ ಈ ನೀತಿಯನ್ನು ನಿರಾಕರಿಸಿದರೂ ಒಳಗೊಳಗೇ ಅತಿಕ್ರೋಧದಿಂದ ಅದು ತುಂಬ ಹಾನಿಮಾಡಿತು. ಇಂದಿನ ನಮ್ಮ ಸಮಸ್ಯೆಗಳೆಲ್ಲ ಬ್ರಿಟಿಷರ ಆಳ್ವಿಕೆಯ ಮತ್ತು ಕುಟಿಲ ನೀತಿಯ ಪ್ರತ್ಯಕ್ಷ ಪರಿಣಾಮಗಳು : ರಾಜರುಗಳು, ಅಲ್ಪ ಸಂಖ್ಯಾತರ ಪ್ರಶ್ನೆ, ವಿದೇಶಿ ಮತ್ತು ಭಾರತೀಯರ ಅನೇಕ ಬಂಡವಾಳಶಾಹಿ ಹಕ್ಕುಗಳು, ಕೈಗಾರಿಕೋದ್ಯಮದ ಕೂಲೆ, ವ್ಯವಸಾಯದ ಅಲಕ್ಷ, ಸಮಾಜ ರಕ್ಷಣಾ ಶಾಖೆಗಳ ದುಃಸ್ಥಿತಿ, ಮತ್ತು ಇದೆಲ್ಲದರ ಮೇಲೆ ಜನರ ಕರುಣಾಜನಕ ಬಡತನ-ಎಲ್ಲವೂ ಆ ನೀತಿಯ ಫಲಗಳು, ಅವರ ವಿದ್ಯಾಭ್ಯಾಸ ನೀತಿ ಇನ್ನೂ ಅತ್ಯಾಶ್ಚರ್ಯಕರವಿದೆ, ಈ ಎಂಬಾ ತನು ಬರೆದಿರುವ “ಮೆಟ್ರಾಫ್ನ ಜೀವನ ಚರಿತ್ರೆ” ಎಂಬ ಗ್ರಂಥದಲ್ಲಿ “ಭಾರತೀಯರಲ್ಲಿ ನಿರಾತಂಕ ಜ್ಞಾನ ಪ್ರಚಾರದ ಭಯವು ಆಳರಸರಿಗೆ ಒಂದು ದೊಡ್ಡ ಭೂತವಾಯಿತು. ಮುದ್ರಣ ಮಂದಿರ ಮತ್ತು ಬೈಬಲ್‌ಗಳನ್ನು ಕಂಡು ಮೈ ನಡುಗಿದ್ದರು. ಆ ಭಯದಿಂದ ಅವರ ಮೈ ನವಿರೇಳುತ್ತಿತ್ತು, ಭಾರತದ ಜನರು ಜ್ಞಾನಾಂಧಕಾರದಲ್ಲಿ ಮುಳುಗಿ ಕ್ರೂರ ಮೃಗಗಳಂತೆ ಜೀವಿಸಬೇಕೆಂದೇ ನಮ್ಮ ಆಗಿನ ನೀತಿಯಾಗಿತ್ತು. ನಮ್ಮ ಸರಕಾರಗಳಾಗಲಿ, ಸ್ವತಂತ್ರ ಸರಕಾರಗಳಾಗಲಿ ಎಲ್ಲಾದರೂ ಸ್ವಲ್ಪ ಜ್ಞಾನಪ್ರಚಾರ ಮಾಡ ಹೊರಟರೆ ಕೂಡಲೆ ಅದನ್ನು ಪ್ರಬಲವಾಗಿ ವಿರೋಧಿಸಿ ತಡೆಗಟ್ಟಲಾಗು ತಿತ್ತು” ಎಂದು ಹೇಳಿದ್ದಾನೆ. ಸಾಮ್ರಾಜ್ಯತ್ವ ನಡೆಯಬೇಕಾದ್ದೇ ಹೀಗೆ, ಇಲ್ಲದೆ ಹೋದರೆ ಅದು ಸಾಮ್ರಾಜ್ಯವಾಗಿ ಉಳಿ ಯುವುದಿಲ್ಲ. ಆಧುನಿಕ ಕಾಲದ ಹಣಕಾಸಿನ ಸಾಮ್ರಾಜ್ಯ ಹಿಂದಿನ ಕಾಲದ ಸಾಮ್ರಾಜ್ಯವಾದಿ ಗಳಿಗೆ ತಿಳಿಯದ ಹೊಸಬಗೆಯ ಆರ್ಥಿಕ ಸುಲಿಗೆಯನ್ನು ಕಲಿಸಿದೆ. ಭಾರತದಲ್ಲಿನ ಹತ್ತೊಂಭತ್ತ ನೆಯ ಶತಮಾನದ ಬ್ರಿಟಿಷರ ಆಡಳಿತ ನೀತಿಯಿಂದ ಯಾವ ಭಾರತೀಯನಾದರೂ ನೊಂದು ರೊಚ್ಚಿಗೇಳಬೇಕು ; ಆದರೂ ಅನೇಕ ವಿಷಯಗಳಲ್ಲಿ ಬ್ರಿಟಿಷರಿಗಿದ್ದ ಅದ್ಭುತ ಶಕ್ತಿಗೆ ಅದೊಂದು ನಿದರ್ಶನ; ಅದರಲ್ಲೂ ನಮ್ಮ ಅನೈಕ್ಯತೆ ಮತ್ತು ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಲಾಭ ಪಡೆಯುವ ಶಕ್ತಿಗೆ, ದುರ್ಬಲರು, ಕಾಲಧರ್ಮಕ್ಕನುಗುಣವಾಗಿ ಮುಂದುವರಿಯಲು ಶಕ್ತಿ ಇಲ್ಲದವರು ತೊಂದರೆಗೀಡಾಗುವುದು ಖಂಡಿತ, ಮತ್ತು ತಮ್ಮನ್ನಲ್ಲದೆ ಪರರು ಯಾರನ್ನೂ ನಿಂದಿಸು ವಂತಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯವೂ ಮತ್ತು ಅದರ ಎಲ್ಲ ಪರಿಣಾಮಗಳೂ ಅನಿವಾರವಾದರೆ ಅದಕ್ಕೆ ಪ್ರಬಲವಾದ ವಿರೋಧ ಶಕ್ತಿ ಬೆಳೆಯುವುದೂ ಮತ್ತು ಈ ಎರಡು ಶಕ್ತಿಗಳಿಗೆ ಅಂತ್ಯ ಘರ್ಷಣೆಯಾಗುವುದೂ ಅನಿವಾರವಾಯಿತು. - ೫ ದೇಶೀಯ ಸಂಸ್ಥಾನಗಳ ಬೆಳವಣಿಗೆ - ರಾಜರುಗಳ ಅಥವಾ ದೇಶೀಯ ಸಂಸ್ಥಾನಗಳ ಸಮಸ್ಯೆಯು ಇಂದಿನ ನಮ್ಮ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಈ ಬಗೆಯ ಸಂಸ್ಥಾನಗಳು ಪ್ರಪಂಚದಲ್ಲಿ ಇನ್ನೆಲ್ಲಿಯೂ ಇಲ್ಲ, ವಿಸ್ತಾರ ದಲ್ಲಿ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ಒಂದೊಂದಕ್ಕೂ ವ್ಯತ್ಯಾಸ. ಅವುಗಳ ಸಂಖ್ಯೆ ೬೦೧, ಇವುಗಳಲ್ಲಿ ಹೈದರಾಬಾದ್, ಕಾಶ್ಮೀರ, ಮೈಸೂರು, ಬರೋಡ, ತಿರುವಾಂಕೂರು, ಗ್ಯಾಲೇರ, ಇಂದೂರು, ಕೊಚ್ಚನ್, ಜಯಪುರ, ಜೋಧಪುರ, ಬಿಕನೀರ್, ಭೋಪಾಲ್, ಪತಿಯಾಲ ಇವು ಹದಿನೈದು ದೊಡ್ಡ ಸಂಸ್ಥಾನಗಳೆಂದು ಹೇಳಬಹುದು. ಆಮೇಲೆ ಕೆಲವು ಮಧ್ಯಮವರ್ಗದವು, ಇನ್ನು ಳಿದ ನೂರಾರು ಸಂಸ್ಥಾನಗಳು ತೀರಾ ಸಣ್ಣವು, ಭೂಪಟದಲ್ಲಿ ಗುಂಡು ಸೂಜಿಯ ಮೊನೆಯನ್ನೂ 18