ವಿಷಯಕ್ಕೆ ಹೋಗು

ಪುಟ:ಕಮಲಕುಮಾರಿ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ 

ಕಮಲಕುಮಾರಿ
ಒಂದನೆಯ ಪ್ರಕರಣ
ತಾಯಿಯೂ ಮಗಳೂ


ಜ್ಯೇಷ್ಠ ಮಾಸ. ಹಗಲಿನ ಎರಡು ಪ್ರಹರಗಳು ಕಳೆದಿವೆ. ಮಹಾನಗರಿಯಾದ ಡಿಲ್ಲಿಯು ದಿವಾಕರನ ಪ್ರಖರಕಿರಣಗಳಿಂದ ವಿದಗ್ಧಪ್ರಾಯವಾಗಿದೆ. ಮನೆಯಿಂದ ಹೊರಕ್ಕೆ ಕಾಲಿಡಲು ಆರಿಗೂ ಸಾಹಸವಿಲ್ಲ. ರಾಜಪಥವು ಉತ್ತಪ್ತವಾಗಿದೆ; ಮನೆಗಳ ಗೋಡೆಗಳೂ ಉತ್ತಪ್ತವಾಗಿವೆ; ಕ್ಷೀಣಿಸಲಿಲೆಯಾದ ಯಮುನಾ ನದಿಯ ನಿರ್ಮಲೋದಕವೂ ಉತ್ತಪ್ತವಾಗಿದೆ "ಪಾಯಸ' ಕ್ಕಂದು ಮಡಗಿದ್ದ ಅನ್ನಭಾಗವು ಒಣಗುತ್ತಿದೆಯಾದರೂ -ಕಾಗೆಗಳ ಸುಳಿವೇ ತೋರದು, ಅವುಗಳೆಲ್ಲ ವೃಕ್ಷಶಾಖೆಗಳ ಸ್ನಿಗ್ಧಛಾಯೆಯಲ್ಲಿ ಪ್ರಚ್ಛನ್ನಗೊಂಡಿವೆ, ಇಂತಹ ಸಮಯದಲ್ಲಿ ಸೌಧಕಿರೀಟಿನಿಯಾದಾ ರಾಜನಗರಿಯ ಉತ್ತರಪ್ರಾಂತದಲ್ಲಿಯದೊಂದು ಕುಟೀರದ್ವಾರದಲ್ಲಿ, ದೀನೆಯಾದ ಮಲಿನೆಯಾದೊಬ್ಬ ವೃದ್ಧೆಯು ವಿಷಣ್ಣ ಭಾವದಿಂದ ಕುಳಿತುಕೊಂಡಿರುವಳು ಘೋರದಾರಿದ್ರ್ಯದುಶ್ಚಿಂತೆಗಳೇ ಅವಳ ಜತೆಯ ಬಂಧುಗಳು ಕಂಕಾಲಸಾರವಾದಾಕೆಯ ಲಲಾಟದಲ್ಲಿ ವಿಧಾತನು ತನ್ನ ಲೋಹಲೇಖನಿಯಿಂದ ದಾರಿದ್ರ್ಯದ ಭೀಷಣಚಿತ್ರವನ್ನು ಅಂಕಿಸಿರುವನು. ಆಕೆಯ ಜ್ಯೋತಿರ್ಹೀನವಾದ ಚಕ್ಷುಗಳು, ಈ ಜೀವನಪಥದಲ್ಲಿ, ಆಕೆಗೆ ಕೇವಲ ವಿಷಾದಮಯವಾದ ದೃಶ್ಯಗಳನ್ನೇ ಕಾಣಿಸಿರುವುವು, ವೃದ್ಧೆಯು ಸ್ಥಿರದೃಷ್ಟಿಯಿಂದ ಪಥದಕಡೆ ನೋಡುತ್ತ ಅರಆಗಮನವನ್ನೂ ನಿರೀಕ್ಷಿಸಿಕೊಂಡಿದ್ದಳು. ಮಧ್ಯೆಮಧ್ಯೆ ಆಕೆಯ ಹೃದಯಾಂತರ‍್ಯದಿಂದ ಒಂದೆರಡು ಧೀರ್ಘನಿಶ್ವಾಸಗಳೂ ಹೊರಡುತಲಿದ್ದುವು.

ವಿಶ್ವಪತಿಯ ಕಾರ್ಯಗಳೆಲ್ಲವೂ ಅದ್ಭುತವಾದುವು. ಅವನ ದಯೆಮಮತೆಗಳನ್ನು ಕುರಿತು ನಾವೇನನ್ನು ಹೇಳಬಲ್ಲೆವು? ಪ್ರಪಂಚದಲ್ಲಿ