ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕ ೦ ಡ-೪೦ ನ ಅ ಧ್ಯಸ್ಥಿಯ . ೭೧ ಸೂರ್ಯರ ಮಕ್ಕಳಾದ ಕವಿನಾಯಕರನ್ನು ಕೂಡಿಕೊಂಡು ದೇಶಕಾಲಗಳನ್ನು ವಿಚಾರಿಸಿಕೊಂಡು ನೀತಿಯ ರಿತು ಕಾರ್ಯಾಕಾರ್ಯಗಳನ್ನು ತಿಳಿದುಕೊಂಡು ಮಹಾ ಬಲವಂತರಾಗಿ ಅತ್ಯಂತ ಶೀಘಗಮನವುಒಂದು ಲಕ್ಷ ಕಪಿಗಳನ್ನು ಕೂಡಿಕೊಂಡು ಸಮಸ್ತ ವನ ಪರ್ವತ ಸಹಿತವಾದ ಮೂಡಣ ದಿಕ್ಕಿಗೆ ಹೋಗಿ ಅಲ್ಲಿ ರಾವಣ ನಿರುವ ಸ್ಥಳವನ್ನು ಅರಸಿ ಸೀತಾದೇವಿಯನ್ನು ಕಂಡು ಬಾ ; ಆ ದಿಕ್ಕಿನಲ್ಲಿರುವ ಗಿರಿ ದುರ್ಗಗಳಲ್ಲಿಯೂ ವನಾಂತ ರಗಳಲ್ಲಿಯೂ ಹೊಕ್ಕು ಹೋಗಿ ಭಗೀರಥೀ ತೀರದಲ್ಲಿಯೂ ಕೌತಿಕೀ ತೀರದಲ್ಲಿಯ ಸರಯನದೀ ತೀರದಲ್ಲಿಯ ನೋಡಿ ಆಮೇಲೆ ಯಮುನಾತೀರಕ್ಕೆ ಹೋಗಿ ಆ ತೀರದಲ್ಲಿರುವ ಪರ್ವತಗಳಲ್ಲಿ ಹುಡುಕಿ ಮುಂದೆ ಸರಸ್ವತೀ ನದೀ ತೀರಕ್ಕೆ ಹೋಗಿ ನೋಡಿ ಆಮೇಲೆ ನಿಂಧನದಿಗೆ ಹೋಗಿ ಅಲ್ಲಿಂದ ಮುಂದೆ ವಜ್ರಮಣಿಯಂತೆ ನಿಮ್ಮಲೋದಕವುಳ ಕೊಣಾನದಿಗೆ ಹೋಗಿ ನೋಡಿ ಮುಂದೆ ಕಾಲಮತಿ ಬ್ರಹ್ಮಮಲಾ ವಿದೇಹ ಮಾಳವ ಕಾಶಿ ಕೋಸಲ ಮಾಗಧ ಪುಂಡ ಅಂಗದೇಶಗಳಿಗೆ ಹೋಗಿ ಅಲ್ಲಿ ದಶರಥರಾಯನ ಸೊಸೆಯಾಗಿ ಶ್ರೀರಾಮನ ಪಟ್ಟದ ಅರಸಿಯಾದ ಸೀತಾದೇ ವಿಯನ್ನು ಹುಡುಕಿನೋಡೀ! ಸಮುದ್ರ ತೀರದ ಪಟ್ಟಣಗಳಲ್ಲಿ ಮಂದರಗಿರಿಪರ್ವತದ ಕೆಡುಕಲ್ಲುಗಳಲ್ಲಿಯೂ ವಿಶಾಲವಾದ ಕಿವಿಗಳನ್ನೇ ಹೊದ್ದುಕೊಂಡಿರುವವರಾಗಿಯ ತುಟಿಯ ಸಮೀಪದಲ್ಲಿ ಕಿವಿಗಳುಳ್ಳವರಾಗಿಯ ಉ *ನ ಮುಖವುಳ್ಳವರಾಗಿ ಪುರುಷರನ್ನು ಭಕ್ಷಣೆವರಾಡುವವರಾಗಿಯ ಎಲೆಗಳಂತೆ ಮಂಡೇಕೂದಲುಳ್ಳವರಾಗಿ ಯ ಶರ್ಪದಂತೆ ತನುಕಾಂತಿಯುಳ್ಳವರಾಗಿ ಕಣ್ಣುಗಳಿಂದ ನೋಡುವದಕ್ಕೆ ಪ್ರಿಯವಾದ ಆಕಾರವುಳ್ಳವರಾಗಿ ಹಸಿ ಮಿಾನುಗಳನ್ನೇ ಆಹಾರಮಾಡಿಕೊಂಡಿರುವವರಾಗಿಯ ಉದಕದೊಳಗೆ ಸಂಚರಿಸಿಕೊಂಡು ನರವ್ಯಾಘ್ರವೆಂಬ ಹೆಸರುಳ್ಳವರಾಗಿಯ ಹುಲಿಯನುಖವುಳ್ಳವರಾಗಿಯೂ ಇರುವ ಕಿರಾತರಿರುವರು ; ಆ ಸ್ಥಾನಗಳಲ್ಲಿ ಅರಸಿನೋಡೀ ! ಮಾರ್ಗ ದಲ್ಲಿ ಓಡೆಗಳಿಂದ ದಾಟಬೇಕಾದ ನದಿಗಳೂ ತೆಪ್ಪಗಳಿಂದ ದಾಟಬೇಕಾದ ನದಿಗಳ ನೆಗೆದು ದಾಟಲು ಕೂ ಡುವ ನದಿಗಳ ಇರುವವು ; ಅಲ್ಲಿಂದ ಮುಂದೆ ಅಸಾ ಚಲವೆಂಬ ಪರ್ವತದಿಂದ ಮನೋಹರವಾಗಿ ರತ್ನಗಳಿಂದ ಪರಿಪುರ್ಣವಾದ ಯವದ್ವೀಪವಿರುವದು ; ಆ ದ್ವೀಪದಲ್ಲಿ ಸುವರ್ಣಕೋಟೆಗಳ ಸುವರ್ಣಕಾಂತಿ ಯುಳ್ಳ ಕಿರಣಗಳು ಪಸರಿಸುತ್ತಿರುವವು ; ಅಲ್ಲಿಂದ ಮುಂದೆ ತನ್ನ ಕೂಡುಕಲ್ಲುಗಳಿಂದ ಗಗನವನ್ನು ತುಡುಕುತ ಸಮಸ್ತ ದೇವತೆಗಳ ಗೂ ನಿಲುಗಡೇನಿನವಾದ ಶಿಶಿರವೆಂಬ ಪರ್ವತವಿರುವದು ; ಆ ಪರ್ವತದ ಕೊಡುಗಲ್ಲುಗಳಲ್ಲಿ ಸೀತಾದೇವಿಯನ್ನ ರಸಿ ನೋಡಿ ಅಲ್ಲಿಂದ ಮುಂದೆ ಹೋದರೆ ಸಮುದ್ರ ತೀರದಲ್ಲಿ ಅನೇಕ ವನಗಳ ಪರ್ವತಗಳ ಉಳ್ಳ ಪ್ರದೇಶದಲ್ಲಿ ಭಯಂಕರವಾದ ಧ್ವನಿಗಳಿಂದಲೂ ಬಿರುಘಳಿಯಿಂದ ಹುಚ್ಚಲ್ಪಟ್ಟ ತೆರೆಗಳಿಂದಲೂ ಮನೋಹರವಾಗಿ ಆಳವರಿಯು ಕೂಡದ್ದಾಗಿ ರಕೊದಕಪ್ರವಾಹವುಳ್ಳದ್ದಾಗಿ ನಿದ್ದ ಚಾರಣರಿಂದ ಸೇವಿಸಲ್ಪಟ್ಟ ಒಂದು ನದಿ ಇರುವದು ; ಅದರ ತೀರದಲ್ಲಿ ಮತ್ತು ಇರುವ ಅನೇಕ ವಿಚಿತ್ರವಾಗಿ ರಮಣೀಯವಾದ ತೀರ್ಥಗಳಲ್ಲಿಯೂ ಅರಸಿನೋಡೀ; ಪರ್ವ ತಗಳಲ್ಲಿ ಹುಟ್ಟಿ ಅತ್ಯಂತ ಆಳವಾದ ಜರಿಗಳುಳ್ಳ ನದೀತೀರಗಳಲ್ಲಿಯೂ ಸಮುದ್ರ ತೀರದಲ್ಲಿಯ ದೊಡ್ಡ ಶರೀರವುಳ್ಳ ರಾಕ್ಷಸರಿರುವರು ; ಅವರು ಬ್ರಹ್ಮದೇವನ ಶಾಪದಿಂದ ಬಹುಕಾಲವು ಹಸಿವಿನಿಂದ ಕಂಗೆಟ್ಟವರಾಗಿ ತಮ್ಮ ನೆಳಲನ್ನು ತಾವೇಭಕ್ಷಿಸುತ್ತಿರುವರು ; ಅಲ್ಲಿಂದ ಮುಂದೆ ಮಹತ್ತಾದ ಪರ್ವತಗಳಿರುವವು ; ಆ ದಾರಿಗೊಂಡು ಹೋಗಿ ಪ್ರಳಯ ಕಾಲದಮೇಘದ ಮುರಾದೆಯಲ್ಲಿರುವಂಥಾದ್ದಾಗಿ ರಕದಕವಳ ಲೋಹಿತಸಾಗರವೆಂಬ ತೀರ್ಥಕ್ಕೆ ಹೋಗಿ ಆ ತೀ ರ್ಥದ ಸಮೀಪದಲ್ಲಿದ್ದ ಕೂಟಕಾಲಿಯೆಂಬ ಹೆಸರುಳ್ಳದ್ದಾಗಿ ನಾನಾ ರತ್ನಗಳಿಂದ ಅಲಂಕರಿಸಲ್ಪಟ್ಟದ್ದಾಗಿ ವಿಶ್ವಕರ್ಮ ನಿಂದ ನಿರ್ಮಿಸಲ್ಪಟ್ಟದ್ದಾಗಿ ಕೈಲಾಸಾದಿಗೆ ಸಮಾನವಾದ ಗರುತ್ಮಂತನ ಅರಮನೆ ಇರುವದು ; ಅಲ್ಲಿಂದ ಮುಂದೆ ಸೂರೈನಿಗೆ ಕತಗಳಾದ ಮಂದರೆಂಬ ರಾಕ್ಷೆಸರು ಪರ್ವತದ ಕೊಡುಗಲ್ಲುಗಳನ್ನು ಕ್ರಮಿಸಿಕೊಂಡಿರುವರು ; ಅ ವರು ಪರ್ವತದಂತೆ ಘನಗಾತ್ರವಾದ ಶರೀರವುಳ್ಳವರಾಗಿ ಸೂರ್ಯಪ್ರಭೆಯನ್ನು ತಾಳಲಾರದೆ ಸೂರ್ಯೋದಯವಾ ಗುತಲೂ ನೀರೊಳಗೆ ಮುಳುಗಿಕೊಂಡಿದ್ದು ಸಾಯಂಕಾಲವಾದಮೇಲೆ ಎದ್ದು ಮೊದಲಿನಂತೆ ಪರ್ವತದ ಕೊಡು ಕಲ್ಲುಗಳನ್ನು ಕ್ರಮಿಸಿಕೊಂಡಿದ್ದು ಪ್ರಾತಃಕಾಲ ಮಧ್ಯಾನ್ಹಸಾಯಂಕಾಲಗಳಲ್ಲಿ ಬ್ರಾಹ್ಮಣರು ಕೊಡುವ ಆರ್ಘ ಸ್ತ್ರಗಳಿಂದ ಹತರಾಗಿ ಹುಟ್ಟುತ್ತಿರುವರು; ಅವರಿರುವ ಸ್ಥಾನಗಳಲ್ಲಿ ನೋಡಿ ಅಲ್ಲಿಂದ ಮುಂದೆ ಬಿಳುಪಾದ ಮೇಘ