________________
೭೨ ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ. • ಮಂಡಲಕ್ಕೆ ಸಮಾನವಾದ ಹೀರಸಮುದ್ರಕ್ಕೆ ಹೋಗಿ ಆ ಸಮುದಕ್ಕೆ ಮುತ್ತಿನ ಕಂಠಮಾಲೆಯೋ ಎಂಬಂತೆ ಒಪ್ಪುತ್ತಿರುವ ಕೆರೆಗಳನ್ನು ನೋಡಿದರೆ ಅದರ ಮಧ್ಯದಲ್ಲಿ ಅತಿಬಿಳುಪಾಗಿ ಅಂತ ಉನ್ನತವಾಗಿ ಅನೇಕ ದಿವ್ಯ ಗಂಧವುಳ್ಳ ಪುಪ್ಪಗಳುಳ್ಳ ಮರಗಳಿಂದ ಇಟ್ಟಣಿಸಿದ ಖಮಷಭಗಿರಿಯೆಂಬ ಪರ್ವತವಿರುವದು ; ಆ ಪರ್ವತದಲ್ಲಿ ಹು ಡುಕಿನೊಡಿ ಅಲ್ಲಿಂದ ಮುಂದೆ ಸುವರ್ಣಕಾಂತಿಯಳ್ಳ ಕೆಸರುಗಳಿಂದಲೂ ತಾವರೇ ಕಮಲಗಳಿಂದಲೂ ರಮಣೀ ಯುವಾದ ಸುದರ್ಶನವೆಂಬ ಒಂದು ಕೊಳವಿರುವದು; ಆ ಕೊಳದಲ್ಲಿ ಯಾವಾಗಲು ರಾಜಹಂಸ ಪಕ್ಷಿಗಳಿರುವವು ; ಆ ಕೊಳಕ್ಕೆ ನಿತ್ಯದಲ್ಲಿ ಜಲಕ್ರೀಡಾರ್ಥವಾಗಿ ದೇವತೆಗಳು ಯಕ್ಷರು ಕಿನ್ನರರು ಅಪ್ಪರ,ಯರು ಮೊದಲಾ ದವರು ಹೋಗಿ ಅತಿ ಹರ್ಷದಿಂದ ಜಲಕ್ರೀಡೆಯನ್ನಾಡುವರು ! ಎಲೈ ಕಪಿಗಳಿರಾ, ಕ್ಷೀರಸಮುದ್ರವನ್ನು ದಾಟಿ ಮುಂದೆ ಸಮಸ್ತ ಪ್ರಾಣಿಗಳಿಗೂ ಭಯವನ್ನು ಕೆಡಿಸುವ ಸ್ವಾದದಕ ಸಮುದ್ರಕ್ಕೆ ಹೋಗಿ ಅಲ್ಲಿ ಬಡಬಾಗ್ನಿ ಯನ್ನು ನೋಡಿ ಅದ್ಭುತವಾದ ಆ ಸಮುದ್ರ ತೀರವನ್ನು ನೋಡಿ ಆ ಸಮುದ್ರದೊಳಗಿರುವ ಜಲಚರ ಪ್ರಾಣಿಗಳ ನ್ನು ಕೇಳಿ ; ಆ ಸಮುದ್ರದ ಬಡಗಣ ದಿಕ್ಕಿನಲ್ಲಿ ಮೂವತ್ತು ಗಾವುದ ದಾರಿಯಲ್ಲಿ ಸುವರ್ಣಮಯವಾದ ಸಲೆಗೆ ೪ುಳ ಕನಕಗಿರಿಯೆಂಬ ಒಂದು ಪರ್ವತವಿರುವದು ; ಆ ಪರ್ವತದಲ್ಲಿ ಚಂದ್ರಮಂಡಲದಂತೆ ಅಶ್ಚಂತ ಬಿಳುಪಾದ ತನು ಕಾಂತಿಯುಳ್ಳವನಾಗಿ ಕಮಲದ ಎಸಳಿನಂತೆ ವಿಶಾಲವಾದ ಕಣ್ಣುಗಳುಳ್ಳವನಾಗಿ ಸಮಸ್ತ ದೇವತೆಗಳಿಂದಲಿ ನಮಸ್ಕ ರಿಸಲ್ಪಡುವವನಾಗಿ ಎಳದಳರ ಕಾಂತಿಯಂತೆ ಕಾಂತಿಯುಳ್ಳ ವಸ್ತ್ರಗಳಿಂದ ಅಲಂಕರಿಸಲ್ಪಟ್ಟವನಾಗಿ ಭೂಮಿಯನ್ನು ಹೊತ್ತಿರುವ ಅನಂತಪದ್ಮನಾಭನನ್ನು ಕಾಣಿಸಿಕೊಂಡು ಆ ಗಿರಿಯು ಅಗ್ರಭಾಗದ ಜಗಲಿಯಮೇಲೆ ನೆಡಲ್ಪಟ್ಟ ರುವ ಸುವರ್ಣಮಯವಾದ ಧ್ವಜಸ್ಥಂಭವನ್ನು ನೋಡಿ ಅಲ್ಲಿಂದ ಮುಂದೆ ಸಮಸ್ತ ದೇವತೆಗಳಿಂದಲೂ ಸೇವಿಸಲ್ಪಟ್ಟ ಸುವರ್ಣಮಯವಾದ ಉದಯಗಿರಿಗೆ ಹೋಗಿ ನೂರುಗಾವುದ ಪರಿಮಾಣವುಳ ಆ ಪರ್ವತದಲ್ಲಿ ಸ್ವರ್ಗಲೋಕ ವನ್ನು ತುಡುಕುವಂಥಾವಾಗಿ ಸುವರ್ಣಮಯವಾಗಿರುವ ದಿವ್ಯ ಕಡುಗಲ್ಲನ್ನು ನೋಡಿ ; ಮತ್ತು ಅಲ್ಲಿ ತಾಳವೃಕ್ಷ ತಮಾಲವೃಕ್ಕೆ ಗೊರಟೇ ವೃಕ್ಷಗಳ ಸುವರ್ಣ ಕಾಂತಿಯುಳ್ಳ ಪುಷ್ಪಗಳಿಂದ ಮನೋಹರವಾದದ್ದಾಗಿ ಒಂದು ಗಾವುದ ದಾರಿ ಅಗಲವುಳ್ಳದ್ದಾಗಿ ಹತ್ತು ಗಾವುದ ದಾರಿ ನೀಟವುಳ್ಳದ್ದಾಗಿ ಸುವರ್ಣಮಯವಾದ ಒಂದು ಕೊಡುಗಲ್ಲಿರುವದು ; ಪುರ್ವದಲ್ಲಿ ತ್ರಿವಿಕ್ರಮಾವತಾರದಲ್ಲಿ ನಾರಾಯಣನು ಬಲಿಚಕ್ರವರ್ತಿಯಲ್ಲಿ ಮರಡಿ ಭೂಮಿಯನ್ನು ಬೇಡಿಕೊ೦ ಡು ಭೂಮಿಯನ್ನೆಳೆಯುವದಕ್ಕೆ ಒಂದು ಪದವನ್ನು ಆ ಕೋಡುಗಲ್ಲಿನಮೇಲಿಟ್ಟು ಎರಡನೇ ಪಾದವನ್ನು ಮಹಾ ಮೇರು ಪರ್ವತದ ಕೊಡುಗಲ್ಲಿನಮೇಲಿಟ್ಟನು ; ಆ ಕೋಡುಗಲ್ಲಿಗೆ ಎಡಗಣ ಭಾಗದಲ್ಲಿ ಸೂನು ಜಂಬೂದ್ವೀಪ ವನ್ನು ಸುತ್ತಿಬರುವನು ; ಆಕೊಡಗಲ್ಲು ನೋಡುವ ಪುಣಾತ್ಮರ ದೃಶ್ಮಿಗೆ ಮನೋಹರವಾಗಿರುವದು; ಅಲ್ಲಿ ವೈಖಾನಸ ವಾಲ'ರೆಂಬ ಮಹರ್ಷಿಗಳರುವರು ; ಅವರು ಸೂರಪ್ರಭೆ ಯಂತೆ ಪ್ರಕಾಶಮಾನವಾಗಿ ಬೆಳಗುತ್ತಿ ರವರು ; ಅಲ್ಲಿಂದ ಮುಂದೆ ಸುದರ್ಶನವೆಂಬ ದೀಪವಿರುವದು ; ಅದರಿಂದ ಸಮಸ್ತ ಪ್ರಾಣಿಗಳಿಗೂ ಕಣ್ಣು ದೃಷ್ಟಿ ಯುಂಟಾಗುವಕಾರಣದಿಂದ ಅದಕ್ಕೆ ಸುದರ್ಶನವೆಂಬ ಹೆಸರಾಯಿತು ! ಈ ವುರಾದೆಯಲ್ಲಿ ಮಹಾಮೇರು ಪರ್ವತ ದ ಗುಹೆಗಳಲ್ಲಿಯೂ ಜರಿಗಳಲ್ಲಿಯೂ ವನಗಳಲ್ಲಿ ರಾವಣನನ್ನ ನೀತಾದೇವಿಯನ್ನೂ ಅರಸಿನೋಡೀ ; ಕಾಂ ಚನಶೈಲದ ಕಾಂತಿಯಿಂದಲೂ ಮಹಾತ್ಮನಾದ ಸೂರ್ಯನ ಕಾಂತಿಯಿಂದ ಪ್ರಾತಃಕಾಲವು ಕೆಂಪಾಗಿ ತೋರುವ ದು ; ಸುದರ್ಶನ ದೀಪವು ಭೂಮಂಡಲಕ್ಕೆ ಮಾಡಲಾಗಿರುವದು ; ಆ ದೀಪದ ಮೂಡಲಾಗಿ ಸೂರ್ಯೋದಯ ವಾಗುವ ಉದಯಗಿರಿಯ ಗುಹೆಗಳಲ್ಲಿಯೂ ಜರಿಗಳಲ್ಲಿಯೂ ಅರಸಿನೋಡೀ; ಅದಕ್ಕೆ ಮೂಡಣ ದಿಕ್ಕಿನಲ್ಲಿ ಚಂದ್ರ) ಸೂರ್ಯರ ಸಂಚಾರವಿಲ್ಲದಕಾರಣದಿಂದ ಯಾವ ಪ್ರಾಣಿಗಳಿಗೂ ಹೋಗುವದಕ್ಕೆ ಅಶಕ್ಯವಾಗಿರುವದು ! ಈಪ್ರಕಾ ರವಾಗಿ ನಾನು ಹೇಳಿದ ಪರ್ವತಗಳಲ್ಲಿಯ ಮಧ್ಯದಲ್ಲಿರುವ ದೇಶಗಳಲ್ಲಿಯೂ ಸೀತಾದೇವಿಯನ್ನು ಅರಸಿನೊ ಡೀ ! ಇವೇ ವಾನರರಿಗೆ ಸಂಚಾರಯೋಗ್ಯವಾದ ದೇಶಗಳು ; ಇನ್ನು ಸೂರ್ಯಪ್ರಭೆಯಿಲ್ಲದ ದೇಶಗಳನ್ನು ಅರಿಯು ಬಾರದು ; ಈಗ ಹೇಳದ ದೇಶಗಳೊಳಗಾಗಿ ರಾವಣನಿರುವ ಸ್ಥಳವನ್ನೂ ಸೀತಾದೇವಿಯಿರುವ ಸ್ಥಳವನ್ನೂ ವಿ ಚಾರಿಸಿ ನಿಶ್ಚಯಿಸಿಕೊಂಡು ಒಂದು ತಿಂಗಳೊಳಗಾಗಿ ಎನ್ನಿ; ಒಂದು ತಿಂಗಳೊಳಗಾಗಿ ಯಾವ ಕಪಿನಾಯಕನು