________________
ಕಿ ೩ ೦ ಧಾ ಕಾ ೦ ಡ೫೫ ನೇ ಅ ಧ್ಯಾ ಯ , ಧರ್ಮವೆತ್ತಣಿದು ! ಅವನ ವಂಶದಲ್ಲಿ ಹುಟ್ಟಿದರೂ ಸತ್ತುತ್ರನಾದವನು ಅವನಿಂದ ಬದುಕಬೇಕೆಂದು ಅವನ ಸಮಿಾ ಪಕ್ಕೆ ಹೋಗುವನೇ ! ಲೋಕದಲ್ಲಿ ಧರ್ಮಿಷ್ಟನಾದ ದೊರೆಯು ತನ್ನ ಮಗನು ಸದ್ದುಣಸಂಪನ್ನನಾಗಲೀ ದುರ್ಗು ಣವುಳ್ಳವನಾಗಲೀ ಅವನಿಗೆ ಪಟ್ಟವನ್ನು ಕಟ್ಟವನು ; ಸುಗ್ರೀವನು ತನ್ನ ಶತ್ರುವಿನ ಮಗನಾದ ನನ್ನನ್ನು ಹ್ಯಾಗೆ ಜೀವಸಹಿತವಾಗಿ ಬಿಡುವನು ! ಆತನಿಗೆ ಮಿತ್ರನಲ್ಲದೆ ವಿರೋಧಿಯಾಗಿ ಆತನಿಗಿಂತಲು ಶಕ್ತಿ ಕಡೆಮೆಯುಳ್ಳವನಾಗಿ ಬಂಧುಬಳಗವಿಲ್ಲದವನಾಗಿ ಅನಾಥನಾದ ನಾನು ಕಿಸಿಂಧಪಟ್ಟಣಕ್ಕೆ ಹೋಗಿ ಹ್ಯಾಗೆ ಬದುಕುವೆನು | ಸುಗ್ರೀವನು ಯಾವ ಉಪಾಯದಿಂದಲಾದರು ನನ್ನನ್ನು ಬಂಧನಮಾಡುವನಲ್ಲದೆ ಸುಮ್ಮನಿರನು ; ರಾಜ್ಯ ನಿಮಿತ್ತವಾಗಿ ನನ್ನಲ್ಲಿ ಅಸೂಯೆಯನ್ನೂ ಶತ್ರುತ್ವವನ್ನೂ ಬೆಳಸುವನಲ್ಲದೆ ನನ್ನ ಮೇಲೆ ದಯೆಮಾಡುವದಕ್ಕಿಲ್ಲ; ನಾನು ಕಿಂಧಾ ಪಟ್ಟಣಕ್ಕೆ ಹೋಗಿ ಆತನ ಬಂಧನಕ್ಕೊಳಗಾಗಿ ದುಃಖಪಡುವದಕ್ಕಿಂತಲು ಈ ಸಮುದ್ರ ತೀರದಲ್ಲಿ ಶರೀರವನ್ನು ಬಿಡುವದೆ ಲೇಸು !--ಎಲೈ ಕಪಿಗಳರ, ನೀವೆಲ್ಲರು ನನ್ನ ಶರೀರತ್ಯಾಗಕ್ಕೆ ಅಪ್ಪಣೆಕೊಟ್ಟು ನನ್ನಿಂದ ಕಳುಹಿ ಸಿಕೊಂಡು ಕಿನ್ನಿ೦ಧಪಟ್ಟಣಕ್ಕೆ ಹೋಗಿ ಸುಖವಾಗಿರಿ ; ನಾನು ಈ ಸಮುದ್ರ ತೀರದಲ್ಲಿ ಪ್ರಾಯೋಪವೇಶವಾ ಡಿ ಶರೀರವನ್ನು ಬಿಡುತ್ತೇನೆ ; ದರ್ಭೆಗಳನ್ನು ತಂಕಣಗ್ರವಾಗಿ ಹಾಕಿಕೊಂಡು ಆ ಹಾಸಿಗೆಯ ಮೇಲೆ ಕುಳಿತು ಏಣಗಳು ಶರೀರವನ್ನು ಬಿಟ್ಟು ತೊಲಗುವ ಪರ್ಯಂತರ ಉದಕಾಹಾರಗಳನ್ನು ಬಿಟ್ಟರುವೆನು ! ಎಲೈ ಕನಾ ಯಕರುಗಳರ, ನೀವು ಕಿಂಧಾಪಟ್ಟಣಕ್ಕೆ ಹೋಗಿ ಸುಗ್ರೀವನಿಗೆ ಅಂಗದಕುಮಾರನು ನಮಸ್ಕಾರ ಹೇಳಕಳು ಹಿಸಿದನು ; ಚನ್ನಾಗಿದ್ದಾನೆ' ಎಂದು ಹೇಳ ಬಲವಂತರಾದ ರಾಮಲಕ್ಷ್ಮಣರಿಗೂ ನಾನು ನಮಸ್ಕರ ಹೇಳಿಕಳುಹಿಸಿ ದೆನೆಂದು ಹೇಳಿ ನನ್ನ ತಾಯಾದ ತಾರಾದೇವಿಯು ದುಃಖಪಡದಹಾಗೆ ಸಂತವಿಟ್ಟು ನನಗೆ ಇಷ್ಟು ಉಪಕಾರವನ್ನು ಮಾಡೀ ! ತಾರಾದೇವಿಯು ನನ್ನ ಮೇಲೆ ಮಹಾ ಪ್ರೀತಿಯುಳ್ಳವಳು; ನಾನು ಇಲ್ಲಿ ಶರೀರವನ್ನು ಬಿಟ್ಟೆನೆಂಬ ಸುದ್ದಿ ಯನ್ನು ಕೇಳಿದರೆ ಜೀವವಿಡಿದಿರಲಾರಳು ” ಎಂದು ನುಡಿದು ತನಗಿಂತಲು ಹಿರಿಯರಾದ ಕವಿನಾಯಕರಿಗೆ ಅಭಿನಂದಿ ಸಿ ಹರ್ಷಗುಂದಿ ರೋದನವಾಡುತ ಭೂಮಿಯಮೇಲೆ ತೆಂಕಲಾಗ್ರವಾಗಿ ದರ್ಭೆಯು ಹಾಸಿಗೆಯುವಲೆ ಮರಣವ ನ್ನು ನಿಶ್ಚಯಿಸಿಕೊಂಡು ಕುಳತನು. ಆ ಕುಮಾರನನ್ನು ಕಂಡು ಮಿಕ್ಕ ಕಪಿನಾಯಕರು ರೋದನವಾಡುತ ಉಪ್ಪವಾದ ಕಣ್ಣೀರನ್ನು ಬಿಡುತ ಮಹಾ ದುಃಖಾಕ್ರಾಂತರಾಗಿ ಸುಗ್ರೀವನನ್ನು ನಿಂದಿಸುತ ವಾಲಿಯನ್ನು ಕೊಂಡಾಡುತ ಅಂಗದನ ಸುತ್ತಲು ತಾವು ಪ್ರಾಯೋಪವೇಶವನ್ನು ಮಾಡಿ ಶರೀರವನ್ನು ಬಿಡಬೇಕೆಂದು ಸಮುದ್ರ ತೀರದಲ್ಲಿ ಸ್ನಾನಮಾಡಿ ನಿತ್ಯಕರ್ಮಗಳ ನ್ನು ತೀರಿಸಿಕೊಂಡು ತೆಂಕಣಸಮುದ್ರದ ಬಡಗಣತೀರದಲ್ಲಿ ತಮಗೆ ಆ ಪುಣ್ಯಸ್ಥಳದಲ್ಲಿ ಬರುವ ಮರಣವೇ ಉತ್ತ ನವೆಂದು ನಿಶ್ಚಯಿಸಿಕೊಂಡು ತೆಂಕಲಾಗ್ರವಾಗಿ ಹಾಕಿದ ದರ್ಭೆಯಮೇಲೆ ಮೂಡಲು ಮುಂತಾಗಿ ಕುಳಿತುಕೊಂ ಡು ದಶರಥರಾಯನ ಸ್ವರ್ಗಾರೋಹಣ ವೃತ್ತಾಂತವನ್ನೂ ಶ್ರೀರಾಮನ ವನವಾಸವೃತ್ತಾಂತವನ್ನೂ ಜನಸ್ಥಾನದಲ್ಲಿ ದ್ದ ಬಲವಂತರಾದ ರಾಕ್ಷಸರನ್ನು ಶ್ರೀರಾಮನು ಕೊಂದ ವೃತ್ತಾಂತವನ್ನೂ ರಾವಣನು ಸೀತಾದೇವಿಯನ್ನ ಪಹರಿಸಿ ಕೊಂಡು ಹೋದ ವೃತ್ತಾಂತವನ್ನೂ ರಾವಣನು ಜಟಾಯುವನ್ನು ಯುದ್ಧದಲ್ಲಿ ಕೊಂದ ವೃತ್ತಾಂತವನ್ನೂ ಶ್ರೀ ರಾಮನ ಕೋಪದ ಮಹಿಮೆಗಳನ್ನೂ ಆತನು ವಾಲಿಯನ್ನು ಕೊಂದ ವೃತ್ತಾಂತವನ್ನೂ ಒಬ್ಬರಿಗೊಬ್ಬರು ಹೇಳಿ ಕೊಳ್ಳುತ್ತಿರಲು ಅಷ್ಟು ಮಂದಿ ಕವಿನಾಯಕರೂ ಮರಣಕ್ಕೆ ನಿಶ್ಚಯಿಸಿಕೊಂಡು ರೋದನವಾಡುತ ಪ್ರಯೋಗ ವೇಶಕ್ಕೆ ಕುಳಿತಿರುವದನ್ನು ನೋಡಿ ವಿಂಧ್ಯಪರತವು ಮಳೆಗಾಲದಲ್ಲಿ ಗುಡುಗುತ್ತಿರುವ ಮೇಘಗಳುಳ್ಳ ಆಕಾಶ ಮಂಡಲದಂತೆ ಆ ಕಪಿಗಳ ರೋದನಧ್ವನಿಯಿಂದ ಪ್ರತಿಧ್ವನಿಗೂಡುತ್ತಿದ್ದ ಗುಹೆಗಳಿಂದ ತಾನೂ ರೋದನಮಾಡುತ್ತಿ ತ್ತೋ ಎಂಬಂತೆ ಒಪ್ಪುತಿತ್ತು !