ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ೫೭ ನೇ ಅ ಧ ಯ , F4 ಗುರುಭಕ್ತನಾದ ಶ್ರೀರಾಮನು ಎಲ್ಲಿದಾನೆ ; ನಾನು ಆತನಿರುವಲ್ಲಿಗೆ ಹೋಗುವದಕ್ಕಾಗದು ; ಅತ್ಯಂತ ಉನ್ನತವಾದ ಈ ವಿಂಧ್ಯಪರ್ವತದ ಕೊಡುಗಲ್ಲಿನಮೇಲಿರುವ ಸೂರನ ಪ್ರಭೆಯಿಂದ ನನ್ನ ಗರಿಗಳು ನೀದುಹೋದದ್ದರಿಂದ ಈ ಪರ್ವತದಿಂದಿಳಿದು ಹೋಗುವದಕ್ಕೂ ನನಗೆ ಸಾಮರ್ಥ್ಯವಿಲ್ಲ ಎಂದು ನುಡಿದನು. - ೫೭ ನೆ ಆ ಧೈ ಯ . ಅ೦ ಗ ದ ನು ಸ೦ ಪಾ ತಿ ಗೆ ತ ಮ್ಮ ವೃ ತಾ೦ ತ ನ ನ್ನು ಹ೪ ದ್ದು , ಈ ಮರದೆಯಲ್ಲಿ ಸಂಪಾತಿಯು ತನ್ನ ತಮ್ಮನಾದ ಜಟಾಯುವಿನ ಮರಣವಾರ್ತೆಯನ್ನು ಕೇಳಿ ದುಃ ಖಾತಿಶಯದಿಂದ ಸ್ವರಗುಂದಿ ಮಲ್ಲಗೆ ಮಾತಾಡುತ್ತಿರಲು ಕಪಿನಾಯಕರು ಭಯಪಟ್ಟು ಸಂಪಾತಿಯ ವಾಕ್ಯವನ್ನು ನಂಬದೆ ತಮ್ಮೊಳಗೆ ತಾವೇ ಆಲೋಚನೆಯನ್ನು ಮಾಡುತ ಒಬ್ಬರಿಗೊಬ್ಬರು 1 ಭಯಂಕರವಾದ ಈ ಗೃಧ್ರರಾ ಜನು ನಮ್ಮೆಲ್ಲರನ್ನೂ ಭಕ್ಷಣಮಾಡುವನು ; ನಾವು ಪ್ರಾಯೋಪವೇಶಕ್ಕೆ ಕುಳಿತು ಹಸಿವು ತೃಪೆಗಳಿಂದ ಕಂಗೆಟ್ಟು ದುಃಖದಿಂದ ಶರೀರವನ್ನು ಬಿಡುವದಕ್ಕಿಂತಲೂ ಈ ಗೃಧ್ರರಾಜನಿಂದ ಒಂದೇಭಾರಿ ಹತವಾದೆವಾದರೆ ಕೃತಾರ್ಥರಾ ಗುವವು ; ಈಗಲೇ ನಮ್ಮ ಕಾರ್ಯವು ಸಾಧ್ಯವಾದೀತು ಎಂದು ನಿಶ್ಚಯಿಸಿದರು. ಆ ಸಮಯದಲ್ಲಿ ಅಂಗದನು ಸಂಪಾತಿಯನ್ನು ಕುರಿತು ಈ ಎಲೈ ಪಕ್ಷಿರಾಜನೇ, ನನ್ನ ಮುತ್ತೈಯ್ಯನು ಯಕ್ಷ ರಜಸ್ಸೆಂಬ ಕವಿನಾಯಕನು ; ಆತನು ಮಹಾ ಸಮರ್ಥನು ; ಮಜಾ ಬಲವಂತನು ; ಮಹಾ ಪುನು; ಆತನಿಗೆ ಎಂ ಲಿ ಸುಗ್ರೀವರೆಂಬ ಇಬ್ಬರು ಕುಮಾರರು ಜನಿಸಿದರು ; ಅವರಿಬ್ಬರೂ ಲೋಕದಲ್ಲಿ ಮಹಾ ಪ್ರಸಿದ್ದರು; ಅವರಿಬ್ಬ ರಲ್ಲಿ ವಾಲಿಯು ಜೈಪುತ್ರನು; ಸಮಸ್ತ ಕಪಿರಾವನ ಕಟ್ಟಿಯಾಳಿದ ಮಹಾ ಪರಾಕ್ರಮಿಯು ; ನಾನು ಆತನ ಮಗನು ! ಆಕ್ಷಕುವಂಶದಲ್ಲಿ ಜನಿಸಿ ಲೋಕನಾಯಕನಾದ ಶ್ರೀರಾಮನು ತನ್ನ ತಮ್ಮನಾದ ಲಕ್ಷಣನ ತನ್ನ ಪಟ್ಟದರಾಣಿಯಾದ ಸೀತಾದೇವಿಯನ್ನೂ ಕೂಡಿಕೊಂಡು ತಪೋವೇಷವನ್ನು ಧರಿಸಿಕೊಂಡು ದಂಡ ಕಾರಣ್ಯದಲ್ಲಿರುವ ಸಮಯದಲ್ಲಿ ರಾವಣನು ಮೋಸದಿಂದ ಸೀತಾದೇವಿಯನ್ನು ಅಪಹರಿಸಿಕೊಂಡು ಹೋಗುವಾಗ ಆ ದೇವಿಯು - ಎಲೈ ವನದೇವತೆಗಳರಾ_ವೃಕ್ಷಗಳಿರಾ-ಪಕ್ಷಿಗಳಿರಾ, ದಶರಥರಾಯನ ಸೊಸೆಯಾಗಿ ಶ್ರೀರಾಮನ ಪಟ್ಟದರಾಣಿಯಾದ ಸೀತಾದೇವಿಯೆಂಬ ನನ್ನನ್ನು ರಾವಣನು ಎತ್ತಿಕೊಂಡು ಹೋದರೆಂದು ಶ್ರೀರಾಮನ ಕಡೆ ಹೇಳಿ' ಎಂದು ಮೊರೆಯಿಡುತ ಹೋಗುತ್ತಿದ್ದಳಂತೆ ; ಆ ಮಾತನ್ನು ಕೇಳಿ ಜಟಾಯುವು ರಾವಣನು ಹಿಡಿದು ಕೊಂಡು ಹೋಗುತ್ತಿದ್ದ ಸೀತಾದೇವಿಯನ್ನು ಕಂಡು ಆತನಕೂಡೆ ಯುದ್ಧವನ್ನು ಮಾಡಿ ಆತನ ರಥವನ್ನು ಮುರಿದು ಆ ದೇವಿಯನ್ನು ಕೆಳಗಿಳಿಸಿ ವೃದ್ದನಾದಕಾರಣ ಸ್ವಲ್ಪ ಬಳಲಿ ಆ ಸಮಯದಲ್ಲಿ ರಾವಣನು ತನ್ನ ಅಳ್ಳೆಯಮೇಲೆ ತಿವಿ ಯಲು ಆತನ ಖಡ್ಗದಿಂದ ಘಾಯಪಡೆದು ಬಿದ್ದು ಪ್ರಾಣವನ್ನಿಡಿದುಕೊಂಡಿದ್ದು ಶ್ರೀರಾಮನು ಅಲ್ಲಿಗೆ ಬಂದಾಗ ನೀ ತಾದೇವಿಯ ವೃತ್ತಾಂತವನ್ನೂ ತಾನು ರಾವಣನಕಡೆ ಯುದ್ದಮಾಡಿದ ವೃತ್ತಾಂತವನ್ನೂ ಹೇಳ ತನ್ನ ಶರೀರವನ್ನು ಬಿಟ್ಟು ಉತ್ತಮವಾದ ಲೋಕವನ್ನು ಪಡೆದನು ; ಆಮೇಲೆ ಶ್ರೀರಾಮನು ತನ್ನ ತಂದೆಯಾದ ದಶರಥರಾಯನ ಸಖನೆಂದೆಣಿಸಿ ಜಟಾಯುವಿಗೆ ಅಗ್ನಿ ಸಂಸ್ಕಾರವನ್ನು ಮಾಡಿ ಅಲ್ಲಿಂದ ಹೊರಟು ಸೀತಾದೇವಿಯನ್ನರಸುತ ಮಹಾ ತೃನಾಗಿ ನನಗೆ ಚಿಕ್ಕಪ್ಪನಾದ ಸುಗ್ರೀವನಕೂಡೆ ಸ್ನೇಹವನ್ನು ಮಾಡಿಕೊಂಡು ತನ್ನ ಸಖನಾದ ಸುಗ್ರೀವನಿಗೆ ಪ್ರಯವನ್ನು ಮಾಡಬೇಕೆಂಬ ಬುದ್ದಿಯಿಂದ ಆತನನ್ನು ಕೂಡಿಕೊಂಡು ನನ್ನ ತಂದೆಯಾದ ವಾಲಿಯನ್ನು ಕೊಲ್ಲ ದು ಸುಗ್ರೀವನಿಗೆ ಕವಿರಾಜಾಧಿಪತ್ಯವನ್ನು ಕಟ್ಟಿದನು; ಸುಗ್ರಿವನು ತನಗೆ ಉಪಕಾರವನ್ನು ಮಾಡಿದ ಶ್ರೀರಾಮ ನಿಗೆ ಪ್ರತ್ಯುಪಕಾರವನ್ನು ಮಾಡಬೇಕೆಂಬ ಬುದ್ಧಿಯಿಂದ ಶ್ರೀರಾಮನ ಪಟ್ಟದರಾಣಿಯಾದ ಸೀತಾದೇವಿಯನ್ನ ರಸಿ ತರಹೇಳಿ ಕಳುಹಿಸಲು ನಾವಿಲ್ಲಿಗೆ ಬಂದು ಎಲ್ಲಾ ಪ್ರದೇಶಗಳಲ್ಲಿಯೂ ಸೀತಾದೇವಿಯನ್ನ ರಸ ನೋಡಿ ರಾತ್ರಿಯಲ್ಲಿ 24