ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Fv ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, MMMMMMMMMMMMMMMMMMMMMMMMMMM/ ಹೋಗಿ ಸೊರಕಿರಣಲೆಯಿಂದ ಗರಿಶೀದು ಈ ಪರ್ವತದ ವನದಲ್ಲಿ ಬಿದ್ದು ಮೂರ್ಛಾಗತನಾಗಿ ಆರು ದಿವಸಗ ಳು ಚೈತನ್ಯಗುಂದಿದ್ದು ಆಮೇಲೆ ಎಚ್ಚತ್ತು ನಾನಾದಿಕ್ಕುಗಳನ್ನು ನೋಡುತ ಆ ದಿಕ್ಕುಗಳನ್ನರಿಯದೆ ಆಮೇಲೆ ಸಮುದ್ರವನ್ನೂ ನದಿಗಳನ್ನೂ ಕೊಳಗಳನ್ನೂ ಸಮಸ್ತ ವನಗಳನ್ನೂ ಅರಣ್ಯಗಳನ್ನೂ ನೋಡಿ ನೆನಪುಂಟಾಗಿ ಬುದ್ದಿ ತೋರಿ ನಾನಾ ಪಕ್ಷಿಗಳಿ೦ದಿಟ್ಟಣಿಸಿದ ಗುಹೆಗಳುಳ್ಳ ಈ ಪರ್ವತವನ್ನು ನೋಡಿ ಇದು ತೆಂಕಣ ಸಮುದ್ರತೀ ರದಲ್ಲಿರುವ ವಿಂಧ್ಯಪರ್ವತವೆಂದು ನಿಶ್ಚಯಿಸಿದೆನು ; ದೈವಾನುಕೂಲದಿಂದ ನಾನು ಅಂತರಿಕ್ಷಮಾರ್ಗದಿಂದ ಬಿದ್ದ ಸ್ಥಳ ವು ನಿಶಾಕರನೆಂಬ ಮುನೀಶ್ವರನ ಪುಣ್ಯಾಶ್ರಮವಾಗಿತ್ತು; ಆ ಆಶ್ರಮವು ಸಮಸ್ತ ದೇವತೆಗಳಿಗೂ ಪುಣವಾದ ಥಾದ್ದು; ನಿಶಾಕರವನಿಯು ಆ ಆಶ್ರಮದಲ್ಲಿ ಅತ್ಯಂತ ಉಗ್ರವಾದ ತಪಸ್ಸನ್ನು ಮಾಡಿದನು ; ಆ ಸ್ಥಳದಲ್ಲಿ ಆ ಮು ನಿಯು ಎರಡುಲಕ್ಷದ ಒಂದುಸಾವಿರ ವರುಷಗಳ ಪರ್ಯ೦ತರ ಇದ್ದನು ; ಆತನು ಯಾವಾಗಲೂ ಸ್ವರ್ಗಲೋಕಕ್ಕೆ ಹೋಗಿ ತಿರಿಗಿ ಬರುವನಾದ್ದರಿಂದ ಆಗ ಸ್ವರ್ಗ ಲೋಕಕ್ಕೆ ಹೋಗಿದ್ದನು ; ನಾನು ಪರ್ವತಾಗ್ರದಿಂದ ಮೆಲ್ಲಗೆ ಅತಿ ಪ್ರ ಯಾಸದಿಂದ ಸಂಚರಿಸುವದಕ್ಕೆ ದುರ್ಘಟವಾದ ದರ್ಭೆಯ ಮನೆಗಳ ಮಾರ್ಗವಾಗಿ ಭೂಮಿಗೆ ಬಂದೆನು ; ಆಮೇಲೆ ನಿಶಾಕರಮುನಿಯನ್ನು ನೋಡಬೇಕೆಂದು ಮನಸ್ಸಿನಲ್ಲಿ ಅಭಿಲಾಷೆ ಹುಟ್ಟಿತು ; ಮೊದಲು ನಾನೂ ಜಟಾಯುವು ಆತನ ಸವಿತಾಪಕ್ಕೆ ಹೋಗಿಬರುತ್ತಿದ್ದೆವು ; ಆತನ ಆಶ್ರಮದ ಸಮೀಪದಲ್ಲಿ ಯಾವಾಗಲೂ ಪರಿಮಳವುಳ್ಳ ತಂಘಳಿಯು ತೀಡ ತಿರುವದು ; ಅಲ್ಲಿ ಪುಷ್ಪಗಳಿಲ್ಲದ ಮರಗಳಲ್ಲ; ಯಾವಾಗಲೂ ಫಲವಿಲ್ಲದ ವೃಕ್ಷಗಳಲ್ಲ; ಅಂಥಾ ಆಶ್ರಮ ಕ್ಕೆ ಹೋಗಿ ಆ ಮುನೀಶ್ವರನನ್ನು ಕಾಣಬೇಕೆಂಬ ಬುದ್ಧಿಯಿಂದ ಒಂದು ಮರದಡಿಯನ್ನು ಸೇರಿಕೊಂಡು ಆತನ ಬರವನ್ನು ನೋಡಿಕೊಂಡಿದ್ದು ಆ ಮುನೀಶ್ವರನನ್ನು ಕಂಡೆನು ; ಆತನು ಯಜ್ಞಪುರುಷನ ಮರಾದೆಯಲ್ಲಿ ಪ್ರ ಜ್ವಲಿಸುತ್ತಿದ್ದ ತೇಜಸ್ಸುಳ್ಳವನಾಗಿ ಸುನವಾಡಿ ಎಡಗಣ ದಿಕ್ಕಾಗಿ ಕುಳಿತುಕೊಂಡಿದ್ದನು ; ಆ ಮುನಿಯನ್ನು ಕ ಏಡಿಗಳು ಜಮೃಗಗಳು ಹಲಿಗಳು ನಿಂಹಗಳು ಸರ್ಪಗಳು ಮೊದಲಾದ ಸಮಸ್ತ ಅರಮೃಗಗಳ ಬ್ರ ಹ್ಮದೇವನನ್ನು ಸಮಸ್ತ ಪ್ರಜೆಗಳ ಸುತ್ತುವರಿದಿರುವಂತೆ ಸುತ್ತುವರಿದುಕೊಂಡಿದ್ದು ಆ ಮುನಿಯು ತನ್ನ ಆ ಶ್ರಮದ ಒಳಗೆ ಹೋದಮೇಲೆ ಅರಸನಕಡೆ ಬಂದ ಪ್ರಧಾನರು ಅರಸನು ಅರಮನೆಯ ಒಳಗೆ ಹೋದಮೇಲೆ ಆತನಿಂದ ಕಳುಹಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಹೋಗುವ ತೆರದಲ್ಲಿ ತಮ್ಮ ಸ್ಥಳಗಳಿಗೆ ಹೋಗುವವು ; ಅಂಥಾ ಸಮಯವನ್ನು ನೋಡಿಕೊಂಡಿದ್ದು ಒಂದುದಿನ ನಾನು ಆತನ ಆಶ್ರಮಕ್ಕೆ ಹೋಗಿ ಕಾಣಿಸಿಕೊಂ ಡೆನು ; ಆತನು ನನ್ನನ್ನು ಕಂಡು ಅತಿ ಹರ್ಷಪಟ್ಟ ಒಂದು ಕ್ಷಣಮಾತ್ರದಲ್ಲಿ ಹೊರಟುಬಂದು ನನ್ನನ್ನು ಕುರಿತು - ಎಲೈ ಪ್ರಾಣೀ, ನಿನ್ನ ಗರಿಗಳು ಶೀದು ನೀನು ವಿವರ್ಣವಾಗಿ ಬಂದದ್ದರಿಂದ ನಿನ್ನ ಸ್ವರೂಪವನ್ನು ಆರಿ ಯದೇ ಹೋದೆನು ; ನಿನ್ನ ಗರಿಗಳು ಯಾವಕಾರಣ ತಿಂದುಹೋದವು ? ನಿನ್ನ ಶರೀರದಲ್ಲಿ ಎಲ್ಲಿ ನೋಡಿದರೂ ಘಾಯಗಳಾಗಿವೆ ; ಮೊದಲು ವಾಯುವೇಗವುಳ್ಳವರಾಗಿ ಅಣ್ಣತಮ್ಮಂದರಾದ ನೀವಿಬ್ಬರೂ ಒರುವಿರಿ ; ನೀವೀರ್ವ ರೂ ಸಮಸ್ತ ಹದ್ದುಗಳಿಗೂ ಅರಸರು ; ಕಾಮರೂಪಿಗಳಾಗಿ ಯಾವ ರೂಪಾಗಬೇಕೆಂದರೂ ಆಗುವಿರಿ ! ಎಲ್ಲಿ ಸಂಗಾತಿಯೇ, ನಿಮ್ಮಿಬ್ಬರೊಳಗೆ ನೀನು ಹಿರಿಯನು ; ಜಟಾಯುವು ನಿನ್ನ ತಮ್ಮನು ; ನೀವಿಬ್ಬರೂ ಮನುಷ್ಯ ಸ್ವರೂಪದಿಂದ ನನ್ನ ಪಾದಸೇವೆಯನ್ನು ಮಾಡಿ ಹೋಗುತ್ತಿದ್ದಿರಿ! ಎಲೈ ಸಂಪಾತಿಯೆ, ನಿನ್ನ ಗರಿಗಳು ಯಾಕೆ ಹೋ ದವು ? ನಿನಗೇನು ವ್ಯಾಧಿ ಸಂಭವಿಸಿತು ; ನಿನ್ನ ಶತ್ರುಗಳಾರಾದರು ನಿನ್ನ ಗರಿಗಳನ್ನು ಕತ್ತರಿಸಿಹಾಕಿದರೇ ? ನೀನು ವಿವರ್ಣ ವಾದ ವರ್ತಮಾನವನ ಸವಿಸ್ತಾರವಾಗಿ ಹೇಳು' ಎಂದು ಕೇಳಿದನು. “ ನಾನು ಆ ಮುನಿಯನ್ನು ಕುರಿತು ನಾನು ಮಾಡಿದ ಮಹಾ ಘೋರವಾದ ದುಷ್ಕರ್ಮವನ್ನು ಹೇಳುತ “ಎಲೈ ನಿಶಾಕರಮುನಿಯೆ, ನಾನು ಘಾಯುಪಡೆದು ಗರಿಶೀದಿರುವದರಿಂದ ನಿನ್ನ ಕೂಡೆ ಹೇಳುವದಕ್ಕೆ ಅಂಜತೇನೆ ; ನಾನೂ ಜಟಾಯುವು ಛಲವಹೊತ್ತು ಅಜ್ಞಾನದಿಂದ ನಮ್ಮ ಸಾಮರ್ಥ್ಯಗಳನ್ನರಿಯಬೇಕೆಂದು ಕೈಲಾಸಪರ್ವತಕ್ಕೆ ಹೋಗಿ ಸಮಸ್ತ ಮುನಿಗಳ ಸನ್ನಿಧಾನದಲ್ಲಿ ನಾವಿಬ್ಬರೂ ಒಂದೇಭಾರಿ ಅಂತರಿಕ್ಷಲೋಕಕ್ಕೆ ಹೋಗಿ ಸೂರನ