ಪುಟ:ಭಾರತ ದರ್ಶನ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೬೧

ಅ೦ಕುರ, ತಮ್ಮ ಹೃದ್ಭಾವನೆಗಳಿಂದ ಅನ್ವೇಷಕರಾಗಿ ಹೊರಟ ಮಹರ್ಷಿಗಳು ಸತ್ ಮತ್ತು ಅಸತ್ಗಳ ಪರಸ್ಪರ ಸಂಬಂಧವನ್ನರಿತರು.
೫. ಅವುಗಳ ವಿಭಜನರೇಖೆ ಅಡ್ಡ ಬೆಳೆಯಿತು. ಅದರ ಮೇಲೆ ಏನು ? ಕೆಳಗೆ ಏನು ? ಸೃಷ್ಟಿ
ಕರ್ತರಿದ್ದರು. ಮಹಾಶಕ್ತಿಗಳು ಇದ್ದುವು; ಇಲ್ಲಿ ಸ್ವತಂತ್ರ ಕಾರ್ಯ. ಅಲ್ಲಿ ಮಹಾಶಕ್ತಿ.
೬. ಅದರ ಹುಟ್ಟು ಎಲ್ಲಿ, ಈ ದೃಷ್ಟಿ ಯ ಮೂಲವೆಲ್ಲಿ ಎಂಬುದನ್ನು ತಿಳಿದವರು ಯಾರು,
ತಿಳಿಸುವವರು ಯಾರು ?
ಪ್ರಪಂಚ ಸೃಷ್ಟಿಯಾದ ಮೇಲೆ ದೇವರುಗಳ ಸೃಷ್ಟಿಯಾಯಿತು. ಎಂದರೆ ಅದು
ಮೊದಲು ಸೃಷ್ಟಿಯಾದುದು ಹೇಗೆ ಎಂದು ತಿಳಿದವರು ಯಾರು ?
೭. ಈ ಸೃಷ್ಟಿಯ ಪ್ರಥಮ ಮೂಲಕರ್ತನು ಅದನ್ನು ಸೃಷ್ಟಿ ಮಾಡಿದನೋ ಮಾಡಲೇ ಇಲ್ಲವೊ.
ಅತ್ಯುನ್ನತ ಸ್ವರ್ಗದಲ್ಲಿದ್ದು ವಿಶ್ವವನ್ನೆಲ್ಲ ಆಳುವ ಆ ವಿಶ್ವ ಚಕ್ಷುವಿಗೆ ಪ್ರಾಯಶಃ ತಿಳಿದಿರ ಬಹುದು: ಪ್ರಾಯಶಃ ಅವನಿಗೂ ತಿಳಿಯದೆ ಇರಬಹುದು.

೬. ಜೀವನಸ್ವೀಕಾರ ಮತ್ತು ನಿರಾಕರಣೆ

ಈ ರೀತಿ ಅತಿ ಪ್ರಾಚೀನಕಾಲದಲ್ಲಿ ಅವ್ಯಕ್ತವಾಗಿ ಆರಂಭವಾದ ಭಾರತೀಯ ಧ್ಯಾನದರ್ಶನ, ಜೀವನ, ಸಂಸ್ಕೃತಿ, ಸಾಹಿತ್ಯ ವಾಹಿನಿಗಳು ಮಹಾನದಿಗಳಾಗಿ ಮುಂದೆ ಮುಂದೆ ಹೋದಂತೆ ಪಾತ್ರ ವೈಶಾಲ್ಯವನ್ನೂ, ತುಂಬು ಜೀವನವನ್ನೂ ಪಡೆದು ಅನೇಕ ವೇಳೆ ಉಕ್ಕೇರಿ ಜನಜೀವನವನ್ನು ತಮ್ಮ ನವರಸದಿಂದ ಚೇತನಗೊಳಿಸಿವೆ. ಈ ಸಹಸ್ರಾರು ವರ್ಷಗಳ ಕಾಲಮಾನದಲ್ಲಿ ಕೆಲವು ವೇಳೆ ತಮ್ಮ ಮಾರ್ಗವನ್ನೇ ಬದಲಾಯಿಸಿವೆ ; ಬತ್ತಿದಂತೆಯೂ ಭಾಸವಾಗುತ್ತವೆ, ಆದರೂ ತಮ್ಮ ಮೂಲವೈಶಿಷ್ಟ ವನ್ನು ಕಾಪಾಡಿಕೊಂಡಿವೆ. ಜೀವನದಲ್ಲಿ ಒಂದು ದೃಢವಾದ ಆಸಕ್ತಿ ಇಲ್ಲದಿದ್ದರೆ ಅದು ಸಾಧ್ಯವಾಗು ತಿರಲಿಲ್ಲ. ಈ ಜೀವಧಾರಣಶಕ್ತಿಯೇ ಒ೦ದು ಗುಣವಲ್ಲ. ಭಾರತದಲ್ಲಿ ಅನೇಕ ವರ್ಷಗಳಿಂದ ಕಂಡು ಬಂದಿರುವಂತೆ ಜಡಜೀವನ, ಕ್ಷಯಪೀಡಿತಜೀವನಕ್ಕೂ ಕಾರಣವಾಗಿದೆ. ಆದರೂ ಮೇಲಿಂದ ಮೇಲೆ ಯುದ್ದಗಳ-ಕೋಭೆಗಳ ಆಘಾತದಿಂದ ಒಂದು ಸುಪ್ರತಿಷ್ಠಿ ತವೂ, ಉನ್ನತವೂ ಆದ ನಾಗರಿ ಕತೆ ಕುಸಿದು ಬೀಳುತ್ತಿರುವ ಈ ಕಾಲದಲ್ಲಿ ಅದು ನಾವು ಗಮನಿಸಬೇಕಾದ ಅತಿ ಮುಖ್ಯ ವಿಷಯ. ಎಲ್ಲವೂ ಕರಗಿ ನೀರಾಗುತ್ತಿರುವ ಈ ಮಹಾಯುದ್ಧದ ಮೂಸೆಯಿಂದ ಮಾನವಕುಲದ ಮಹತ್ಸಾಧನೆ ಗಳನ್ನೆಲ್ಲ ಉಳಿಸಿಕೊಂಡು, ಇದ್ದ ಲೋಪದೋಷಗಳನ್ನೆಲ್ಲ ನಿವಾರಿಸಿ, ಇಲ್ಲದುದನ್ನು ಸೇರಿಸಿ ಪಾಶ್ಚಾತ್ಯ ಪೌರ್ವಾತ್ಯಗಳೆರಡಕ್ಕೂ ಮೆಚ್ಚುಗೆಯಾಗುವ ಸರ್ವ ಸುಂದರ ಸಂಸ್ಕೃತಿಯೊಂದು ಒಡಮೂಡುವುದೆಂದು ನಮ್ಮ ಹಿರಿಯಾಸೆ. ಆದರೂ ವಸ್ತುಗಳ ಮತ್ತು ಮನುಷ್ಯ ಜೀವಿಗಳ ನಾಶಮಾತ್ರವಲ್ಲದೆ, ಜೀವನಕ್ಕೆ ಒಂದು ಅರ್ಥಕೊಡುವ ಅಗತ್ಯವಾದ ಪುರುಷಾರ್ಥಗಳ ಬಿಡುವಿಲ್ಲದ ಮತ್ತು ವ್ಯಾಪಕವಾದ ನಾಶ ಗಮನಾರ್ಹವಾಗಿದೆ. ಇಂದಿನ ಉನ್ನತ ಔದ್ಯೋಗಿಕ ನಾಗರಿಕತೆಯಿಂದ ನಾವು ಅನೇಕ ಮಾರ್ಗ ಗಳಲ್ಲಿ ಅದ್ಭುತ ಪ್ರಗತಿ ಪಡೆದು ಹಿಂದೆಂದೂ ಕಾಣದ ಶ್ರೇಷ್ಠ ಸುಖಜೀವನ ನಡೆಸುತ್ತಿದ್ದರೂ, ಅದರಲ್ಲಿ ಏನಾದರೂ ಒಂದು ಮುಖ್ಯ ಲೋಪವಿದೆಯೆ ? ಆತ್ಮನಾಶದ ಬೀಜ ಅದರಲ್ಲಿಯೇ ಅಡಗಿದೆಯೆ ?

ಪರರಾಷ್ಟ್ರದ ದಾಸ್ಯಕ್ಕೆ ಒಳಗಾದ ದೇಶ ಇಂದಿನ ಸ್ಥಿತಿಯನ್ನು ಮರೆತು ಗತಕಾಲದ ಕನಸುಗಳಲ್ಲಿ ಗತವೈಭವದ ಸ್ಮರಣೆಯಲ್ಲಿ ಮನಶ್ಯಾಂತಿ ಪಡೆಯಲು ಯತ್ನಿಸುತ್ತದೆ. ನಮ್ಮಲ್ಲಿ ಅನೇಕರು ಇದ ನ್ನೊಂದು ಅಪಾಯಕಾರಕ ಹುಚ್ಚು ಕಸಬನ್ನಾಗಿ ಮಾಡಿಕೊಂಡಿದ್ದಾರೆ. ಪ್ರಪಂಚದಲ್ಲಿ ಇತರ ಅನೇಕ ವಿಷಯಗಳಲ್ಲಿ ನಾವು ಬಹಳ ಹೀನಸ್ಥಿತಿಯಲ್ಲಿದ್ದರೂ, ಅಧ್ಯಾತ್ಮದಲ್ಲಿ ಮಾತ್ರ ನಾವು ಇನ್ನೂ ಅತ್ಯುನ್ನತ ಸ್ಥಿತಿಯಲ್ಲಿಯೇ ಇದ್ದೇವೆಂದು ಭಾವಿಸುವುದೂ ತಪ್ಪು. ದೇಶದಲ್ಲಿ ಸ್ವಾತಂತ್ರ್ಯ ಮತ್ತು ಅವಕಾಶ ಇಲ್ಲದಿರುವಾಗ, ಅಥವ ಉಪವಾಸ ಮತ್ತು ಸಂಕಟ ತಾಂಡವವಾಡುತ್ತಿರುವಾಗ ಆಧ್ಯಾತ್ಮಿಕವಾಗಲಿ, ಇತರ ಯಾವುದೇ ಉನ್ನತಿಯನ್ನೇ ಆಗಲಿ ಹೊಂದಲು ಸಾಧ್ಯವೇ ಇಲ್ಲ. ಅನೇಕ ಪಾಶ್ಚಾತ್ಯ