ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

LXXXIV ಉಪೋದ್ಘಾತ

ಕ್ಕಿಂತ ಬಲವಾಗಿರುವದು. ಒಂದು ತನ್ನ ಸ್ಥಾನವನ್ನು ಬಿಟ್ಟು ಪಕ್ಕದಲ್ಲಿ ಬಡಿಯುವದು, 
ಒಂದು ಉಯ್ಯಾಲೆಯಂತೆ ಒಂದು ಪೆಟ್ಟು ಆಚೆಗೆ ಒಂದು ಪಟ್ಟು ಈಚೆಗೆ ಆಗಿ ಹೊಡಿಯುತ್ತಿರುವದು, ಒಂದು ಸ್ತಬ್ದವಾಗಿರುವದು, ಒಂದರ ಬಡಿತಗಳಲ್ಲಿ ಮುಸಿವಿಲ್ಲದಿರುವದು, ಒಂದು ಬಲವಾಗಿ ಚುಚ್ಚುತ್ತಿರುವದು, ಒಂದರ ಬಡಿತಗಳ ನಡುವೆ ಒಂದೊಂದು ಲೋಷ ಕಾಣುವದು ಅಥವಾ ಒಂದೊಂದು ಮಾತ್ರ ಸ್ಥಾನ ಬಿಟ್ಟಿರುವದು, ಮುಂತಾದ ಬಹು ವಿಧವಾದ ಭೇದಗಳು ದೋಷಗಳ ಭೇದಗಳಿಗೆ ಸರಿಯಾಗಿ ಕಾಣುವವು ಇವ್ರಗಳಿಂದ ರೋಗಿಗೆ ವಾತಾದಿ ದೋಷ ಗಳೊಳಗೆ ಯಾವದು ಉಪದ್ರವಕರವಾಗಿದೆ ಎಂಬದನ್ನು ತಿಳಿದು, ಆ ದೋಷವು ಯಾವ ಅಂಗ ವಿಶೇಷದಲ್ಲಿ ಯಾವ ರೀತಿಯಾಗಿ ಉಪದ್ರವ ಕೊಡುತ್ತದೆಂಬದನ್ನು ರೋಗಿಯ ಹೇಳಿ ಕೆಗಳಿಂದಲೂ. ಮಲಮೂ‍ತ್ರಾದಿಗಳ ಪರೀಕ್ಷೆಯಿಂದಲೂ ಸುಲಭವಾಗಿ ಗೊತ್ತು ಮಾಡ ಬಹುದು. ದೃಷ್ಟಾಂತವಾಗಿ ಒಬ್ಬ ನಲ್ಲ ಮಧ್ಯಮ ಬೆರಳಿನ ಅಡಿ ನಾಡಿಯು ಸ್ತಬ್ದವಾಗಿದೆ ಅಧವಾ ಸ್ಟಾನ ಬಿಟ್ಟು ಇದೆ ಎಂತ ಕಂಡರೆ, ಅವನಲ್ಲ ಎತ್ರವು ತನ್ನ ಕೆಲಸವನ್ನು ಸರಿಯಾಗಿ ಮಾಡದೆ, ಅಥವಾ ಅನ್ಯಸ್ಥಾನಕ್ಕೆ ಹೋಗಿ, ಉಪದ್ರವ ಕೊಡುತ್ತದೆಂಬದು ಸ್ಪಷ್ಟ ಆ ದೋಷಯುಕ್ತವಾದ ಪಿತ್ತಕ್ಕೆ ವಾಯುವಿನ ಸಹಾಯವಾಗಲೀ ಕಫದ ಸಹಾಯವಾಗಲೀ ಉಂಟೋ ಎಂತ ತಿಳಿದರ, ತಕ್ಕವಾದ ಕಷಯಾದಿ ಪ್ರತಿಕ್ರಿಯಯನ್ನು ಕಲ್ಪಿಸುವದಕ್ಕೆ ಬಹಳ ಅನುಕೂಲವಾಗುತ್ತದೆ. ಪಿತ್ತವೂ ವಾಯುವೂ ಕೂಡಿಕೊಂಡರೆ ಪಿತ್ತಕ್ಕೆ, ಪಿತ್ತವೂ ಕಫವೂ ಕೂಡಿಕೊಂಡರೆ ಕಫಕ್ಕೆ, ವಾಯುವೂ ಕಫವೂ ಕೂಡಿಕೊಂಡರ ವಾತಕ್ಕೆ, ಮುಖ್ಯವಾಗಿ ಪ್ರತಿಕ್ರಿಯೆ ಮಾಡಬೇಕಾಗಿ ವಿಧಿಯುಂಟು ಹೀಗೆ, ಯಾವನಾದರೂ ತನಗೆ ಉಪದ್ರವಕಾರಿ ಯಾಗಿರುವ ದೋಷವನ್ನು ಮತ್ತು ತಾನು ಸಾಧಾರಣವಾಗಿ ಸೇವಿಸುವ ಅನ್ನಪಾನವಿಹಾ ರಾದಿಗಳ ಗುಣದೋಷಗಳನ್ನು ಅರಿತವನಾದರೆ, ಅವನ ದೋಷವಿಕಾರವನ್ನು ಸಾಧಾರಣ ಸಂಗತಿಯಲ್ಲಿ ಪಧ್ಯದಿಂದಲೇ ಗೆಲ್ಲುವದಕ್ಕಾಗುತ್ತದೆ ಶಾರೀರಶಾಸ್ತ್ರವನ್ನು ಸರಿಯಾಗಿ ಕಲಿತವ ನಿಗೆ ನಾಡಿಯು ಅತಿಸೂಕ್ಷಮ್ಮವಾಗಿರುವದು, ಅತಿಮಂದವಾಗಿರುವದು, ಅತಿವೇಗವ್ರಳದ್ದಾಗಿ ರುವದು, ಮುಖ ಕಾಣಿಸದೆ ಜಾರುತ್ತಿರುವದು, ಬಲಹೀನವಾಗಿರುವದು, ಮೃದುವಾಗಿ ಒತ್ತಿ ದರೆ ಬೊಗ್ಗುವದು, ಕರ್ಕಶವಾಗಿರುವದು, ಕ್ರಮವಾದ ಲೋಪಗಳುಳ್ಳದ್ದಾಗಿರುವದು, ಸಪೂರವಾಗಿರುವದು, ಮೂಂತಾದ ಬಹುವಿಧವಾದ ಲಕ್ಷಣಗಳು ರೋಗಿಯ ಸ್ಥಿತಿಯನ್ನೂ ಅವನಿಗೆ ಹ್ಯಾಗೆ ಚಿಕಿತ್ಸೆ ಮಾಡತಕ್ಕದ್ದೆಂಬದನ್ನೂ ಚನ್ನಾಗಿ ತಿಳಿಸುವವು ತನ್ನ ದೇಹದ ಸ್ಥಿತಿಯನ್ನು ಸುಯಾಗಿ ವರ್ಣಿಸಲಿಕ್ಕ ಲಜ್ಜೆ ಪಡುವ ಸ್ತ್ರೀಯರ, ಅಧವಾ ತಿಳಿಯದ ಹೆಡ್ಡರ. ಅಧವಾ ಮಕ್ಕಳ, ರೋಗನಿದಾನಕ್ಕೆ ನಾಡೀಪರೀಕ್ಷೆಯು ಬಹಳ ಪ್ರಯೋಜನಕರವಾಗಿರುತ್ತದೆ. ಇದಲ್ಲದೆ ಕೆಲವು ರೋಗಿಗಳು ತಮಗೆ ಇಂಧಾ ದೋಷ ಉಂಟೆಂತ ಏನೋ ಕಾರಣ ದಿಂದ ನೆನಸಿಕೊಂಡಿದ್ದು, ಆ ಕಲ್ಪನೆಗೆ ಬಲವಾಗುವ ಹಾಗಿನ ಕೆಲವು ಲಕ್ಷಣಗಳನ್ನೇ ಹೇಳಿ ದರೂ, ಅವರ ಪ್ರಬಲವಾದ ದೋಷ ಬೇರೆಯೇ ಆಗಿರುವದುಂಟು, ಅಂಧಾ ಸಂಗತಿಯಲ್ಲಿ ಚಿಕಿತ್ಸಕರಿಗೆ ನಾಡೀಪರೀಕ್ಷೆ ತಿಳಿಯದಿದ್ದರೆ, ರೋಗ ಒತ್ತಟ್ಟು, ಚಿಕಿತ್ಸೆ ಒತ್ತಟ್ಟು ಆಗಿ ಅನ ರ್ಧವುಂಟಾಗಬಹುದು
 32. ಹೃದಯಕ್ಕೂ ಧಮನಿಗೂ ನಡುವೆ ಇರುವ ಬಾಗಲಿನ ತೆರೆಯುವಿಕೆ-ಮುಚ್ಚು ವಿಕೆಗಳಿಗನುಸಾರವಾಗಿ ಉಂಟಾದ ನಾಡೀಬಡಿತಗಳು ಎಲ್ಲಾ ಕಡೆಗಳಲ್ಲಿಯೂ ಏಕರೀತಿ