ನನ್ನ ಸಂಸಾರ 17
- \ \ # \ \ \ \ \ f4 # \ # * * * \ \ \
1 1 1 1 1 1 1 1 1 1 1 1 #\ # \ \ \ * \ \ # \ \ \ * • • • /\ , 17
- * * * * *
ದಿನವೂ ಬಿಡಲಾರದಿದ್ದವಳು ಇಂದು ಅವರನ್ನು ಅಗಲಿರಬೇಕಾಗಿ ಬಂದಿತು. ಆದರೆ ಆ ನನ್ನ ದುಃಖವು ಬಹು ಕ್ಷಣಿಕವಾದುದಾಗಿದ್ದಿತು. ನಮ್ಮ ಯಜಮಾನರು ನನಗೆ ಎಷ್ಟೋ ಸಮಾಧಾನಗಳನ್ನು ಹೇಳಿ ನನ್ನ ವ್ಯಸನವನ್ನು ಕಮ್ಮಿ ಮಾಡಿದರು. ನಾನು ಕ್ರಮವಾಗಿ ಮನೆಗೆಲಸಗಳನ್ನು ಮಾಡುತ್ತಾ, ಮನೆಯವರೆಲ್ಲರಿಂದಲೂ ಒಳ್ಳೆಯವಳೆಂದು ಹೇಳಿಸಿಕೊಳ್ಳುತ್ತಿದ್ದೆನು. ನನಗೆ ಪತಿಗೃಹದಲ್ಲಿ ವಾಸಮಾಡುವದೂ ಅಲ್ಲಿ ಕಷ್ಟಪಟ್ಟು ಗೃಹಕಾರ್ಯಗಳನ್ನು ಚಟುವಟಿಕೆಯಿಂದ ಮಾಡುವುದೂ ಸ್ವರ್ಗಸುಖಕ್ಕೆ ಸಮಾನವಾದ ಸುಖವೇ ಸರಿ. ನಮ್ಮ ಮನೆಯಲ್ಲಿ ಈಗ ನಮ್ಮ ಅತ್ತಮ್ಮನವರೂ ನಮ್ಮ ಭಾವನವರೂ (ಯಜಮಾನರ ಅಣ್ಣಂದಿರು) ನಮ್ಮ ಅಕ್ಕ (ಭಾವನವರ ಕುಟುಂಬ) ಮತ್ತು ಅವರ ಮಕ್ಕಳು, ನಮ್ಮ ತಾತನವರು, (ಇನ್ನು ಮೇಲೆ ನಮ್ಮ ತಾತನವರೆಂದರೆ ನೀಲಕಂಠಶಾಸ್ತ್ರಿಗಳು) ನಾವಿಬ್ಬರು, ಇಷ್ಟು ಮಂದಿ ಇದೇವೆ. ನಾನೇ ನಮ್ಮ ಅತ್ತೆಗೆ ಕಿರೀಸೊಸೆಯಾದ್ದರಿಂದಲೂ ಕೆಲಸಗಳನ್ನು ಚೆನ್ನಾಗಿ ಮಾಡುತ್ತಿದ್ದುದರಿಂದಲೂ ನನ್ನನ್ನು ಕಂಡರೆ ಅವರಿಗೆ ದಿನೇದಿನೇ ಪ್ರೀತಿಯು ಹೆಚ್ಚುತ್ತಿತ್ತು. ಕಡಮೆಯವರೂ ನನ್ನ ವಿಷಯದಲ್ಲಿ ಎಷ್ಟೋ ಪ್ರೀತಿಯನ್ನಿಟ್ಟುಕೊಂಡಿದ್ದರು. ನಾನು ಪ್ರತಿದಿನವೂ ಬೆಳಗಿನ ಐದು ಘಂಟೆಗೇ ಎದ್ದು ಕಸ, ಮುಸರೆ, ಉಪಕರಣಗಳ ಕೆಲಸಗಳನ್ನು ಏಳು ಘಂಟೆಯೊಳಗಾಗಿ ಮಾಡಿಕೊಂಡು ಆ ಮೇಲೆ ಊಟದ ಎಲೆಯನ್ನು ಹಚ್ಚುತ್ತ ಕುಳಿತುಕೊಳ್ಳುವೆನು, ಮಧ್ಯಾಹ್ನ ಊಟವಾದ ನಂತರ ಎಲೆ ಎತ್ತಿ ಗೋಮಯವನ್ನು ಹಚ್ಚಿ ನಮ್ಮ ಅತ್ತೆಯವರೊಡನೆ ಕೊಳಕ್ಕೆ ಹೋಗಿ ಸೀನೀರನ್ನು ತುಂಬಿಕೊಂಡು ಮನೆಗೆ ಬರುವೆನು. ಬಳಿಕ ಒಂದೆರಡು ಘಳಿಗೆ ವಿಶ್ರಮಿಸಿಕೊಂಡ ಬಳಿಕ ನಮ್ಮ ಯಜಮಾನರು ನನಗೆ ಯಾವುದಾದರೂ ಪುಸ್ತಕವನ್ನು ತಂದು ಕೊಟ್ಟು ಒಂದೆರಡು ಪಾಠಗಳನ್ನು ಹೇಳಿ ಕೊಡುವರು. ಸಾಯಂಕಾಲವಾದ ನಂತರ ದೇವರ ಮನೆಗೆ ದೀಪವನ್ನು ಹತ್ತಿಸಿ ದೇವರ ಸ್ತೋತ್ರಗಳನ್ನು ಹೇಳುತ್ತಿದ್ದು ಮನೆಯವರಿಗೆಲ್ಲರಿಗೂ ಊಟವಾದ ನಂತರ ನಾನೂ ಊಟಮಾಡಿ ರಾತ್ರಿ ಹತ್ತು ಘಂಟೆಯಾದ ಬಳಿಕ ಮಲಗುತ್ತಿದ್ದೆನು. ರಾತ್ರಿ ಮಲಗುವುದಕ್ಕೆ ಮುಂಚೆ ನಮ್ಮ ಯಜಮಾನರು ಯಾವುದಾದರೂ ಅಪೂರ್ವವಾದ, ಸತೀಧರ್ಮ ಬೋಧಕವಾದ ಉಪಾಖ್ಯಾನಗಳನ್ನು ಓದಿ ಹೇಳುತ್ತಿದ್ದರು. ನಾವು ಬಳಿಕ ದೈವಭಕ್ತಿಯುತವಾದ ನಿರ್ಮಲ ಮನಸ್ಸಿನಿಂದ ನಿದ್ದೆ ಮಾಡುವೆವು.
ಈ ರೀತಿಯಾಗಿ ನಾವು ಸುಖದಿಂದ ಆರು ತಿಂಗಳುಕಾಲ ಅನ್ಯೋನ್ಯವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದೆವು. ಇಷ್ಟು ಹೊತ್ತಿಗೆ ನಾನು ಅಂತರ್ವತ್ನಿ ಗರ್ಭಿಣಿಯಾಗಿರುವೆನೆಂಬ ವಿಷಯವು ನಮ್ಮ ತಾಯಿತಂದೆಗಳಿಗೆ ತಿಳಿದು ಅವರು ನನ್ನನ್ನು