ವಿಷಯಕ್ಕೆ ಹೋಗು

ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(v)

ವದು. ನಾವು ದುರ್ಬಲರಿದ್ದೆವು, ವಿಷಯಾಸಕ್ತರಾಗಿದ್ದೆವು, ನಮ್ಮ ನಮ್ಮೊಳಗೆ ಬಡಿದಾಡುತ್ತಿದ್ದೆವು, ಪರದೇಶಿಯರು ಬಂದು ನಮ್ಮನ್ನು ಒಯ್ದರು, ನಾವು ಸೋತೆವು, ಗುಲಾಮರಾದೆವು, ನಾವಿನ್ನೂ ಬಾಲ್ಯಾವಸ್ಥೆಯಲ್ಲಿಯೇ ಇರುವೆವು ನಮ್ಮ ಸಮಾಜರಚನೆಯು ದೋಷಮಯ ವಾದದ್ದು, ನಮ್ಮ ಉದ್ಧಾರವಾಗಬೇಕಾದರೆ ಪರದೇಶಿಯರ ವಾದಕ್ಕೆ ಶರಣು ಹೋಗಬೇಕು, ಅವರ ಗುರುತ್ವವನ್ನು ಅಮರಣಪರ್ಯಂತವಾಗಿ ಸ್ವೀಕರಿಸಬೇಕು; ಇವೇ ಮೊದಲಾದ ವಿಚಾರಗಳು ಚಿಕ್ಕಂದಿನಿಂದಲೂ ನಮ್ಮ ತಲೆಯಲ್ಲಿ ತಾಂಡವವನ್ನು ಆಡಿ ಕಿವಿಯಲ್ಲಿ ತಾಳ ಹೊಡೆದು ಕಣ್ಣುಗಳ ಮುಂದೆ ಕಟ್ಟಿದಂತಾಗಿ ಭ್ರಮರಕಿಟಕ ನ್ಯಾಯದಂತೆ ನಮ್ಮನ್ನು ಭ್ರಮೆ ಗೊಳಿಸುತ್ತವೆ. ನಾವು ಕ್ರಿಮಿ ಕೀಟಕಗಳೆ೦ಬ ಭಾವನೆಯೇ ನಮಲ್ಲಿ ತಳವೂರಿದೆ. ಇನ್ನು ಮೇಲೆ ಇರಾಗದು! ನಾವು ಉನ್ನತಿಯನ್ನು ಹೊಂದಬೇಕಾದರೆ ನಮ್ಮ ಪೂರ್ವಚರಿತ್ರೆಯನ್ನು ಹೊಸ ರೀತಿಯಲ್ಲಿ ಬರೆಯಲೇಬೇಕು. ಪ್ರಾಚೀನ ಆರ್ಯರ ಉಜ್ವಲ ಚರಿತ್ರೆ ಯನ್ನು ಪಠಿಸಲೇ ಬೇಕು.

ಇನ್ನೊಂದು ಮಹತ್ವದ ವಿಷಯ. ಚರಿತ್ರೆಯು ಶತ್ರುಗಳ ವಿಷಯದಲ್ಲಿ ದ್ವೇಷವನ್ನು ಹುಟ್ಟಿಸಬಾರದು. ಕರ್ತವ್ಯವನ್ನು ದ್ವೇಷವಿರ ಹಿತವಾಗಿ ನೆರವೇರಿಸಬೇಕು. ಗುಣಗಳು ತಮ್ಮಲ್ಲಿ ತಾವು ಕೆಲಸ ಮಾಡುತ್ತವೆ; ಎಲ್ಲ ಕಡೆಯಲ್ಲಿಯೂ ಪ್ರಕೃತಿಯ ಗುಣಗಳಿಂದ ಕರ್ಮಗಳು ಮಾಡಲ್ಪಡುತ್ತಿರುತ್ತವೆ; ಅಹಂಕಾರವಿಮಢಾತ್ಮನಾದ ಮನುಷ್ಯನು ಮಾತ್ರ ತಾನು ಕರ್ತನೆಂದು ತಿಳಿದು ಕೊಳ್ಳುತ್ತಾನೆಂಬ ವಿಚಾರ ಸರಣಿಯು ಚರಿತ್ರೆಯಲ್ಲಿ ಅಲ್ಲಲ್ಲಿ ಎದ್ದು ತೋರುತ್ತಿರಬೇಕು. ಸಂಸಾರ ವೆಂಬುದೊಂದು ನಾಟಕವು. ಜಗತ್ತೇ ರಂಗಭೂಮಿಯು, ನಾವೆಲ್ಲರೂ ಸೋಗುಗಳು, ಪರಮಾತ್ಮನು ಕತೆಗಾರನು, ಸೂತ್ರಧಾರನು. ಅವನ ಪ್ರೇರಣೆಯಂತೆಯೇ ನಾವೂ ನಮ್ಮ ಶತ್ರುಗಳೂ ಕುಣಿಯುತ್ತೇವೆ. ಯಾರ ಮೇಲೆ ನಾವು ಕೋಪಿಸಬಾರದು. ಯಾರನ್ನೂ ದ್ವೇಷಿಸಬಾರದು. ಶತ್ರುವು ಕೂಡ ಪ್ರಚ್ಛನ್ನ ಮಿತ್ರನು. ಶತ್ರುವಿನಂತೆ ನಟಿಸಿದ ಕೈಕೇಯಿಯ ವಿಷಯದಲ್ಲಿ ಶ್ರೀರಾಮಚಂದ್ರನು ತೋರ್ಪಡಿಸಿದ