ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨) ಭಾರತೀಯ ಇತಿಹಾಸವು ತನಗೆ ಬೇಕಾದುದನ್ನು ಬೇಡಿಕೆ : { ಬೇಕು. ಅದರಿಂದ ತನ್ನ ಕುಟುಂಬ ಪೋಷಣೆಯ ಕಾರ್ಯವನ್ನು ನಡೆಸಬೇಕು. ಸಾಮಾಜಿಕದೃಷ್ಟಿ ಯಿ೦ದ ನೋಡಿದರೆ, ಗೃಹಸ್ಥಾಶ್ರಮವು ಎಲ್ಲ ಆಶ್ರಮಗಳಿಗೆ ಪೋಷಕವಾದುದ ರಿಂದ ಅದರ ಮಹತ್ವವು ಹೆತ್ತು. ಈ ಬಗೆಯಾಗಿ ಸರ್ವ ಆಶ್ರಮಗಳಿಗೆ ಆಧಾರವಾಗಿರುವ ಗೃಹಸ್ಥಾಶ್ರಮದೊಳಗೆ ಯಾವಾ ತನು ಧರ್ಮವನ್ನು ಬಿಡದೆ, ಅತ್ಯ೦ತ ಶ್ರದ್ದೆಯಿಂದಲೂ, ದಕ್ಷತೆಯಿಂದಲೂ ನ ಸಯುವನೋ ಅವನಿಗೆ ಧರ್ಮಾರ್ಧ ಕಾಮ-ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು ಕೈ ಸೇರುತ್ತವೆ. ಆದುದರಿಂದ ಗ್ರಹ ವ್ಯಾಶ್ರಮಿಯಾಗಿ ಭಗವಂತನ ಸೇವೆ ಯೆ೦ದು ಧರ್ಮಾಚರಣೆಯಿ೦ದಿರುವವನು ಧನೆಂದು ನಮ್ಮ ಪೂರ್ವಿ ಕರು ಎಷ್ಟೋ ಕಡೆಯಲ್ಲಿ ಅನೇಕ ಉದಾಹರಣೆ ಕೊಟ್ಟು ಹೊಗಳಿ ದ್ದಾರೆ. ಗೃಹಸ್ಥಾಶ್ರಮಿಯಾದ ಮನುಷ್ಟರು ತಮ್ಮ ನಿತ್ಯ ನೈಮಿತ್ತಿಕ ಕರ್ಮಗಳ ನಾ ತರಿಸುತ್ತಿದ್ದು, ಅತಿಧಿ 3ನ, ತಾಯಿ ತಂದೆಗಳ ಸೇವೆ, ಮೊದಲಾದವುಗಳನ್ನು ಮನಃಪೂರ್ವಕವಾಗಿ ನಡೆಯಿಸಿದರೆ, ಆತನಿಗೆ ಸಮನಾದ ಪುಣ್ಯವಂತನು ಬೇರೆ ಯಾವನೂ ಇರುವದಿಲ್ಲೆಂಬ ದಿವ್ಯ ಹಾಗೂ ಆದರ್ಶ ಭೂ ತವಾದ ಉದಾಹರಣೆಗಳನ್ನು ಓದಿದರೆ ಮೈ ಯು ಬ್ಬಿ ಹೋಗಿ, ಮನಸ್ಸು ಶುದ್ಧವಾಗುತ್ತದೆ. ವಾನಪ್ರಸ್ಥ ಮತ್ತು ಸನ್ಯಾಸ:- ಇ ಸೆರಡು ಆಶ್ರಮಗಳಲ್ಲಿ ಭಾರ ತೀಯರ ನಿಜವಾದ ಧೈಯವು ಯಾವುದು ? ಯಾವುದಕ್ಕಾಗಿ ಮನು ಷ್ಯನು ದೇಹ ತೊಟ್ಟು ಕೊಂಡು ಪ್ರಸ೦ಚದೊಳಗೆ ಮುಂದಡಿಯಿಡತಕ್ಕು ದೆಂಬುದು ಈ ಆಶ್ರಮ ಧರ್ಮದಲ್ಲಿ ಪ್ರತಿಬಿಂಬಿತವಾಗಿದೆ. ಆರ್ಯರ ಮನಸ್ಸಿನ ಒಲವು ಸ್ವಾಭಾವಿಕವಾಗಿಯೇ ಸಂಸಾರ ತ್ಯಾಗ ಅಥವಾ ಸನ್ಯಾಸದ ಕಡೆಗೆ. (ಕಣ್ಣಿಗೆ ಕಾಣಿಸುವ ಈ ಜಗತ್ತು ಕ್ಷಣಿಕವಾದು ದೆಂದೂ, ಇದರಲ್ಲಿ ರವೆಯಷ್ಟಾದರೂ ಸುಖವಿಲ್ಲೆ ಂದೂ, ಈ ಸುಳ್ಳು ಹಾಗೂ ನೀರಮೇಲಣ ಗುಳ್ಳೆಯ ೦ಧ ಪ್ರಪ೦ಚದ ಮೋಹಕ್ಕೆ ಶಿಲು ಕದೆ, ಈ ಜಗತ್ತೆಂಬ ಭ್ರಮೆ ಗೊಳಿಸುವ ಪೇಟೆಯ ಹಿ೦ದುಗಡೆಯಲ್ಲಿ ಮು೦ದುಗಡೆಯಲ್ಲಿ - ಎಲ್ಲೆ ಲ್ಲಿಯ ಇದ್ದರೂ ಇಲ್ಲದವನಂತೆ ಇರುವ ಭಗವಂತನನ್ನು ಎಂದಿಗೂ ಮರೆಯಲಾಗದೆಂದೂ ಅರ್ಯರ ಮುಖ್ಯ