ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು. ಎಂಬಿಬ್ಬರು ಆಳಿದರು. ಹವಿಷ್ಕನು ತ೦ದೆಯಿಂದ ಬಂದ ರಾಜ್ಯವನ್ನು ಅವನಿಗೆ ತಕ್ಕಂತೆ ಚನ್ನಾಗಿಯೇ ನಡಿಸಿಕೊಂಡಿದ್ದನು. ಈತನಾದರೂ ತ೦ದೆಯಂತ ಬು ರೈಾನುಯಾಯಿಯಾಗಿದ್ದು ಬೌದ್ಧರಿಗೆ ಕೈ ತುಂಬ ನೆರ ವಾದನು. ವಸುದೇವನಿ೦ದ ಇವರ ಅಳಿಕೆಗೆ ಇಳಿಗಾಲ ಒದಗಿತು. ಈತನ ಹೆಸರು ಹಿಂದೂ ಜನರಂತೆ ಇದ್ದುದರಿಂದ ಈತನ ಕಾಲಕ್ಕೆ ಪರದೇಶದಿಂದ ಬಂದವರ ಮೇಲೆಯ ಹಿಂದೂ ಸಂಸ್ಕೃತಿಯ ನೆರಳು ಎಷ್ಟು ಮೂಡಿತಂ ಬುದು ಸ್ಪಷ್ಟವಾಗುತ್ತದೆ. ವಸು ದೇವನ ಕಾಲದ ನಾಣ್ಯಗಳ ಮೇಲೆ ಶಿವ ಹಾಗೂ ನಂದಿಯ ಮೂರ್ತಿಗಳಿದ್ದು ಮಧುರೆಯ ನೆರೆಯಲ್ಲಿ ದೊರೆತಿವೆ. * ದಕ್ಷಿಣ ಹಿಂದೂ ದೇಶ: ಉತ್ತರಹಿ೦ದು ನ್ಯಾನವೆಲ್ಲವೂ ಶಕ, ಯುವ ನರ ಕೈಗೆ ಸಿಕ್ಕು ಬಳಲುತ್ತಿರುವಾಗ್ಗೆ ದಕ್ಷಿಣಹಿಂದೂ ದೇಶದ ಸ್ಥಿತಿಯು ಹೇಗಿತ್ತೆಂಬದನ್ನು ನೋಡೋಣ. ದಕ್ಷಿಣದೇಶದೊಳಗೆ ಬಹು ದಿನಗ ೪೦ದಲೂ ಚೇರ, ಚೋಳ, ಪಾಂಡ್ಯ, ಸಿಂಹಳ, ಪಲ್ಲವ, ಕದಂಬ ಮದ ಲಾದ ರಾಜರುಗಳು ಒಂದು ಬಗೆಯಿ೦ದ ಯಾರ ಅಂಕೆಗೂ ಈಲಾಗದೆ ಚಿಕ್ಕ ರಾಜ್ಯವಾದರೂ ಸ್ವತಂತ್ರವಾಗಿ ಆಳುತ್ತಿದ್ದರು. ಇವರಲ್ಲಿ ಇಡೀ ದಕ್ಷಿಣದೇಶವನ್ನೇ ಆಗಲಿ ಉತ್ತರಹಿ೦ದು ನ್ಯಾನವನ್ನೇ ಅಗಲಿ ಜಯಿಸಿ ಏಕಚತಾಧಿಸ ರಾಗಿ ಅಳುವಂಧ ಯಾವ ಪುರುಷರೂ ಹುಟ್ಟಲಿಲ್ಲ. ಚೇರ ಚೋಳ, ಪಾ೦ಡ್ಯ, ಪಲ್ಲವ, ಗಂಗ ಮೊದಲಾದವರು ಇಡೀ ಹಿಂದೂ ದೇ ದಮೇಲೆ ತಮ್ಮ ಅಧಿಪತ್ಯವನ್ನು ನಡಿಸದಿದ್ದರೂ ಅವರು ಆ ಶೋಕನಂಥ ವರಿಗೂ ಬಾಗದೆ ತಮ್ಮ ಸೀಮೆಯಲ್ಲಿ ಸಿಂಹದಂತೆ ವಿರಾಜಿಸುತ್ತಿದ್ದುದು ತಿಳಿಯುತ್ತದೆ. ಈ ರಾಜರೆಲ್ಲರೂ ಒಂದೇ ಬುಡಕಟ್ಟಿಗೆ ಸೇರಿದವರಾ ದರೂ, ರಾಜ್ಯದ ದೆಸೆಯಿಂದ ಅವರಿವರಲ್ಲಿ ಅನೇಕ ಕಾಳಗಗಳು ನಡೆ ರವು, ಬರಗಾಲದಿಂದ ವಿಜಯನೆಂಬೆ ಬ್ಬ ಸಾಹಸಿಗನು ತನ್ನ ದೇಶ ಬಿಟ್ಟು ಅನೇಕ ಜನರೊಡನೆ ಸಿಂಹಲಗ್ತಿ (ಪಕ್ಕೆ ಸಮುದ್ರ ಮಾರ್ಗವಾಗಿ ಹೋಗಿ ಅಲ್ಲಿ ತನ್ನ ದೊಂದು ರಾಜ್ಯ ಕಟ್ಟಿಕೊಂಡನೆಂದೂ, ಪಾಂಡವರ ವಂಶಸ್ಥಳಾದ ಒಬ್ಬ ರಾಜಕುಮಾರ್ತಿಯು ಪಾಂಡ್ಯ ರಾಜ್ಯವನ್ನು ದಕ್ಷಿಣ ದೇಶದಲ್ಲಿ ಸ್ಟಾಪಿಸಿದಳೆಂದೂ, ಓದಿದರೆ ನಮಗೆ ನಮ್ಮಲ್ಲಿಯ ಜನರ ನಾಹ ಸದ ಬಗ್ಗೆ ಕೌತುಕವೆನಿಸುತ್ತದೆ. ಚೋಳರಾಜ್ಯವು ಬಹು ಪ್ರಾಚೀನ