ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

II, ಸಂಸಾರದ ಸುಖ ದುಃಖಗಳು ಭಕ್ತ ಜನರ ಯೋಗಕ್ಷೇಮವನ್ನು ನಿರಂತರವೂ ವಹಿಸಿರುವ ಭಗವಂತನು ಹೆಚ್ಚು ಕಾಲ ಸುಮ್ಮನಿರಲಿಲ್ಲ; ಮಹಮ್ಮದನಿಂದ ಮುಂದೆ. ನಡೆಯಬೇಕಾಗಿದ್ದ ದೇಶೋದ್ಧಾರ ಕಾರ್ಯಕ್ಕೆ ವಿವಾಹ ಹವಣರಿತು ಸಾಧನ ಸಂಪತ್ತನ್ನು ಒದಗಿಸುವ ಸೋಪಾನ ಮಾರ್ಗವನ್ನು ಸಿದ್ಧಗೊಳಿಸಿದನು. ಮಹ ಮ್ಮದನ ವಿವಾಹವೂ ಅದರಲ್ಲೊಂದು ಮೆಟ್ಟಿಲು, ಅವನ ದೂರ ಸಂಬಂಧಿ ಯಾದ ಖದೀಜಳೆಂಬ ರಮಣಿಯು ನಿಧಿಗಳ ನಾಯಕಿಯನ್ನು ವಷ್ಟು ಧನಾಥೆಯಾಗಿದ್ದಳು. ಮಹಮ್ಮದನು ಆಕೆಯ ಆಸ್ತಿ ಪಾಸ್ತಿಗಳ ಆಡಳಿತವನ್ನು ನೋಡಿಕೊಳ್ಳುವ ಕೆಲಸವನ್ನು ವಹಿಸಿ, ಆಕೆಯಲ್ಲಿ ಸೇವಾ ವೃತ್ತಿಯನ್ನು ಕೈಕೊಂಡನು. ಅವನು ತನ್ನ ಇಪ್ಪತ್ರೆ ದನೆಯ ವಯಸ್ಸಿನಲ್ಲಿ ತನ್ನ ಒಡತಿಯ ಕಾರ್ಯಕ್ಕಾಗಿ ಸಿರಿಯಾ ದೇಶಕ್ಕೆ ಹೋಗಿ ಬಂದನು. ಅವನ ಕಾರ್ಯ ಪಟುತ್ವವನ್ನೂ ಪ್ರಾಮಾಣಿಕತೆಯನ್ನೂ ವಿವೇಕವನ್ನೂ ಖದೀಜಳು ಬಹುವಾಗಿ ಮೆಚ್ಚಿದಳು. ಕಾಲ ಕ್ರಮದಲ್ಲಿ ಈ ಮೆಚ್ಚುಗೆಯೇ ಅನುರಾಗವಾಗಿ ಪರಿಣಮಿಸಿತು. ಆಕೆಯಲ್ಲಿ ಹಣ ದೊಡನೆ ಗುಣವೂ ಸಮ್ಮಿಳಿತವಾಗಿದ್ದಿತಲ್ಲದೆ ರೂಪ ಮಾಧುರ್ಯಕ್ಕೂ ಅಭಾವವಿರಲಿಲ್ಲ. ಆದರೆ, ವಯಸ್ಸನ್ನು ನೋಡಿದರೆ ಮಾತ್ರ, ದಾಂಪತ್ಯವು ಸಮಂಜಸವಾಗುವಂತೆ ಕಂಡುಬರಲಿಲ್ಲ; ಏಕೆಂದರೆ, ಮಹಮ್ಮದನು ಇನ್ನೂ ಯುವಕನು ; ಖದೀಜಳೊ ಅವನಿಗಿಂತಲೂ ಸುಮಾರು ಹದಿನೈದು ವರುಷ ದೊಡ್ಡವಳು. ಆದರೂ, ಮಹಮ್ಮದನು ಆಕೆಯ ಸದ್ಗುಣಗಳಿಗೆ ಮನ ಸೋತು ಆಕೆಯನ್ನು ವರಿಸಿದನು. ವಿಜೃಂಭಣೆ ಯಿಂದ ವಿವಾಹವು ಜರುಗಿತು. ದಂಪತಿಗಳಿಬ್ಬರೂ ಪರಸ್ಪರ ಪ್ರೇಮ ಮಯರಾಗಿದ್ದರು. ವಿವಾಹವಾದ ಮೇಲೆ ಹೊಟ್ಟೆಯ ಪಾಡಿಗಾಗಿ ದುಡಿಯಬೇಕಾದ ಆವಶ್ಯಕತೆಯು ಮಹಮ್ಮದನಿಗೆ ತಪ್ಪಿತು. ಅನುಕೂಲ ದಾಂಪತ್ಯವೂ ಒಂದು ಭಾಗ್ಯ ವಿಶೇಷವೇ ಸರಿ. ಮಹ ಮೃದನಿಗೆ ಭಗವಂತನು ಎರಡು ಕೈಗಳಿಂದಲೂ ಅದನ್ನು ಅನುಗ್ರಹಿ ಅನುಕೂಲ ಸಿದ್ದನು. ಖದೀಜಳು ತನ್ನ ಹೃದಯವನ್ನೇ ತನ್ನ ಪತಿಗೆ ದಾಂಪತ್ಯ ಕಾಣಿಕೆಯಾಗಿ ಒಪ್ಪಿಸಿದಳು. ಮಹಮ್ಮದನು ತನಗಿಂತ