- 45 - ಆ 11 ಚರ್ಮ, ರಕ್ತ, ಮಾಂಸ, ಮೇದಸ್ಸು, ನಾಭಿ, ಹೃದಯ, ಕ್ಲೋಮ, ಯಕೃತ್, ಪ್ಲೀಹ, 2 ವೃಕ್ಕಗಳು, ವಸ್ತಿ, ಮಲಾಧಾನ, ಆಮಾಶಯ, ಪಕ್ವಾಶಯ, ಉತ್ತರ ಗುದ, ಕೆಳಗಿನ ಗುದ, ಸಣ್ಣ ಕರುಳು, ದೊಡ್ಡ ಕರುಳು, ವಪೆ, ವಪಾವಹನ, ಇವು ಇಪ್ಪತ್ತು ತಾಯಿಯ ಸಂಬಂಧದಿಂದ ಹುಟ್ಟು ವಂಥವುಗಳಾಗಿ ವರ್ಣಿಸಲ್ಪಟ್ಟಿವೆ (ಚ 326 ) ಚರಕನ 2 ಪಟ್ಟಿಗಳಲ್ಲಿಯೂ ಫುಪ್ಪ ಸವು ಕಾಣುವದಿಲ್ಲ ಮತ್ತು ಸುಶ್ರುತನ ಅಂಗಗಳ ಪಟ್ಟಿಯಲ್ಲಿ ಕ್ಲೋಮ ಕಾಣುವದಿಲ್ಲ (4ನೇ ಸಂ ನೋಡು) ಈ ಕೆಳಗಣ ವಿವರಣದಲ್ಲಿ ಎರಡೂ ಪ್ರತ್ಯೇಕವಾಗಿ ಕಾಣಿಸಲ್ಪಟ್ಟಿವೆ ಹೃದಯಾದ್ಘಾಮತೋsಧತ್ವ ಫುಪ್ಪಸೋ ರಕ್ತ ಫೇನಜಃ | ಅಧಸ್ತು ದಕ್ಷಿಣೇ ಭಾಗೇ ಹೃದಯಾತ್ಕ್ಲೋಮ ಶಿಷ್ಯತಿ || ಒಲವಾಹಿಸಿರಾ ಮೂಲಂ ತೃಷ್ಣಾಚ್ಛಾದನಕೃನ್ಮತಂ (ಭಾ ಪ್ರ 14) ಈ ಸಂದೇಹದ ಮತ್ತು ವೃಕ್ಕ, ಉಂಡುಕಗಳನ್ನು ಕುರಿತು ಕಾಣುವ ಸಂದೇಹದ ನಿವೃತ್ತಿಗೆ 4ನೇ ಸಂಖ್ಯೆಯ ಅಡಿಯ ಷರಾ ನೋಡು “ವಪಾವಹನ' ಎಂಬದು ಚರಕನ ಎರಡು ಪಟ್ಟಿ ಗಳಲ್ಲಿಯೂ ಕಾಣುತ್ತದೆ ಸುಶ್ರುತನ ಅಂಗಗಳ ಪಟ್ಟಿ ಯಲ್ಲಿ ಅದು ಇಲ್ಲ (ಮೇದಸ್ತುವಪಾವಸಾ' ಎಂತ ಅಮರವು ಹೇಳುತ್ತದಾದ್ದರಿಂದ ಮೇದಸ್ಸೆಂದರೂ ವಪೆಯೆಂದರೂ ಒ೦ದೇ ಎಂಬ ಅರ್ಧವನ್ನಾಧರಿಸಿ, ಇತ್ತಲಾಗಿನ ನಿಘಂಟುಕಾರರು ವಪಾ' ಎಂದರೆ ಮೇದಃ ಎಂತ ಅರ್ಥ ಬರದಿದ್ದಾರಾಗಿ ಕಾಣುತ್ತದೆ ಆದರೆ 48ನೇ ಸಂಖ್ಯೆಯಲ್ಲಿ ಮೇದಃ, ವಸಾ, ಮಜಾ ಎಂಬವು ಬೇರೆ ಬೇರೆ ಚರಬಿಗಳಾಗಿ ವರ್ಣಿಸಲ್ಪಟ್ಟವೆ ಅದಲ್ಲದೆ ಚರಕನ 2ನೇ ಪಟ್ಟಿಯಲ್ಲಿಯೇ (ಮೇದಃ' ಪ್ರತ್ಯೇಕವಾಗಿ ಕಾಣುತ್ತದೆ ಶಬ್ದ ಕಲ್ಪದ್ರುಮದಲ್ಲಿ ಚರ ಕನ 2ನೇ ಪಟ್ಟಿಯನ್ನೆತ್ತಿ ಬರೆದು, ವಪಾ' ಎಂಬದು ಹೃದಯದಲ್ಲರುವ ಧಾತು ಎಂತ ಅರ್ಥ ಹೇಳಲ್ಪಟ್ಟದೆ ಇದಕ್ಕೆ ಆಧಾರ ಕಾಣಲಿಲ್ಲ ಮೇಲಿನ ಅಮರದ ವಾಕ್ಯಕ್ಕೆ ಕನ್ನಡದಲ್ಲಿ ಅರ್ಥ ಬರೆದ ಒಂದು ಟೀಕೆಯಲ್ಲಿ ವಪೆ' ಎಂಬದು ಹೊಕ್ಕುಳ ಕೆಳಗಡೆ ಬಟ್ಟೆಯೋಪಾದಿಯಾಗಿರುವ ಪೊರೆಯ ಮಾಂಸದ ಹೆಸರು” ಎಂತ ವಿವರಿಸಲ್ಪಟ್ಟಿರುತ್ತದೆ.
ಚರ ಕನ 2 ಪಟ್ಟಿಗಳಲ್ಲಿಯೂ ವಪೆಯು ಸ್ಥೂಲಾಂತ್ರದನಂತರ ಉಕ್ತವಾಗಿದೆ ಹೃದಯ ಮತ್ತು ಶ್ವಾಸಕೋಶಗಳು ನಿಂತಿ ರುವ ಮೇಲಿನ ಅಂತಸ್ಥವಾದ ಎದೆಗೂ, ಆಮಾಶಯ ಯಕೃತ್-ಪ್ಲೀಹದಿಗಳು ನಿಂತಿರುವ ಹೊಟ್ಟೆಯಂಬ ಕೆಳಗಿನ ಅಂತಸ್ಥಕ್ಕೂ ಮಧ್ಯ ಹಾಸಿರುವ ಮಾಂಸಾದಿಗಳ ಹಾಳೆ ಹಾಗಿನ ಮುಚ್ಚಿಗೆಗೆ (123 ನೇ ಸಂ ನೋಡು) ಒಂದು ಕನ್ನಡ ಶಾರೀರಶಾಸ್ತ್ರಗ್ರಂಥದಲ್ಲಿ ವಪೆ' ಎಂಬ ಶಬ್ದವು ಉಪಯೋಗಿಸಲ್ಪಟ್ಟಿದೆ ಈ ಮುಚ್ಚಿಗೆಯು ನಾಭಿಯ ಕೆಳಗಿರುವದಲ್ಲ ವಾದರೂ, ಅದು ಸ್ಥೂಲಾಂತ್ರಕ್ಕೆ ಒತ್ತುವಷ್ಟು ಸಮೀಪವಿರುತ್ತದೆ. ಆದರೆ ಚರಕನ ಎರಡು ಪಟ್ಟಿಗಳಲ್ಲಿಯೂ ವಪಾವ ಹನವನ್ನು ಕಾಣಿಸಿ, 2ನೇ ಪಟ್ಟಿಯಲ್ಲಿ ಮಾತ್ರ ಚರ್ಮ-ರಕ್ತ-ಮಾಂಸ-ಮೇದಸ್ಸುಗಳೊಂದಿಗೆ (ವಪಾ' ಎಂಬದನ್ನು ಹೆಚ್ಚಾಗಿ ಸೇರಿಸಿರುವದನ್ನು ಆಲೋಚಿಸಿದರೆ, ಮೇಲೆ ಪ್ರಸ್ತಾಪಿಸಿದ ಅಂತಸ್ಥಗಳ ನಡುವಿರುವ ಮುಚ್ಚಿ ಗೆಗೆ 'ವಪಾವಹನ ಎಂತಲೂ, ಮೇಲಿನ ಅಂತಸ್ಥದ ಒಳಭಾಗದ ಅಡಿಯಂಚಾದ ಆ ಮುಚ್ಚಿಗೆಯ ಮೇಲಿನ ತಲದ ಮೇಲೆ ಇರುವ 'pluera' ಎಂಬ ವಸಾಯುಕ್ತವಾದ ಮತ್ತು ತೆಳುವಾದ ಪೊರೆಗೆ 'ವಪೆ'ಯೆಂತಲೂ, ಚರಕನ ನಿರ್ದೇಶವಾಗಿರಬಹುದೆಂತ ಕಾಣುತ್ತದೆ ಆ 'ಪ್ಲೂರಾ' ಎಂಬದನ್ನು ಬಟ್ಟೆಗೆ ಹೋಲಿಸಬಹುದು
113. ಧಾತುಗಳು ರಸಾಸೃ-ಮೇದೋಸ್ಥಿ-ಮಜ್ಜಾ-ಶುಕ್ರಾಣಿ ಧಾತವಃ | (ವಾ. 2.) ರಸ, ರಕ್ತ, ಮಾಂಸ, ಮೇದಸ್ಸು, ಎಲುಬು, ಮಜ್ಜಾ, ಶುಕ್ರ, ಇವು ಏಳು ಧಾತುಗಳು. ಷರಾ ( ಉತ್ತಮ ಶರೀರದಲ್ಲಿ ಆಯಾ ಜನರ ಕೈಯಂಜಲಿ ಪ್ರಕಾರ ನೀರು 10, ರಸ 9, ರಕ್ತ 8, ಪುರೀಷ 7, ಕಫ 6, ಪಿತ್ತ 5, ಮೂತ್ರ 4, ವಸೆ 3, ಮೇದಸ್ಸು 2, ಮಜ್ಜೆ 1, ಮೆದುಳು, ಶುಕ್ರ ಮತ್ತು ಕಫೌಜಸ್ಸು ಅರ್ಧರ್ಧ ಅಂಜಲಿ ಇರುತ್ತದೆಂತಲೂ, ಇದರ ಮೇಲೆ ಹೆಚ್ಚು ಕಡಿಮೆಗಳನ್ನು ಊಹಿಸತಕ್ಕದ್ದೆಂತಲೂ ಚರಕ ಹೇಳುತ್ತದೆ (ಸು 358 ) 114. ಮಲಗಳು ಮಲಾ ಮೂತ್ರ-ಶಕೃತ್-ಸ್ವೇದಾದಯಃ | (ವಾ. 2.) ಮೂತ್ರ, ಹೇಲು, ಬೆವರು ಇವೇ ಮೊದಲಾದವು ಮಲಗಳು.