ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

19. ತತ್ರೋಷ್ಣಸಿಗ್ದೌ ವಾತಘ್ನಾ | ಶೀತಮೃದುಪಿಚ್ಛಿಲಾಃ ಪಿತ್ತಘ್ನಾಃ |

ವೀರ್ಯ ತೀಕ್ಷ್ಣ ರೂಕ್ಷವಿಶದಾಃ ಶ್ಲೇಷ್ಮಘ್ನಾಃ | ಗುರುಪಾಕೋ ವಾತಪಿತ್ತಘ್ನಃ |

ಕರ್ಮಗಳು ಲಘುಪಾಕಃ ಶ್ಲೇಷ್ಮಘ್ನ | (ಸು. 154 )

      ಅವುಗಳಲ್ಲಿ ಉಷ್ಣ ಮತ್ತು ಸ್ನಿಗ್ದ, ವಾತವನ್ನು ನಾಶಮಾಡುತ್ತವೆ. ಶೀತ, ಮೃದು ಮತ್ತು ಪಿಚ್ಚಿಲ, ಪಿತ್ತವನ್ನು ನಾಶಮಾಡತಕ್ಕವು. ತೀಕ್ಷ್ಣ,ರೂಕ್ಷ, ಮತ್ತು ವಿಶದಗಳು ಶ್ಲೇಷ್ಮವನ್ನು ನಾಶಮಾಡತಕ್ಕವು. ಗುರುಪಾಕದಿಂದ ವಾತಪಿತ್ತಗಳು ಮತ್ತು ಲಘುಪಾಕದಿಂದ  ಶ್ಲೇಷ್ಮವು ನಾಶವಾಗುತ್ತವೆ.

20. ತೇಷಾಂ ಮೃದುಶೀತೋಷ್ಣಾಃ ಸ್ಪರ್ಶಗ್ರಾಹ್ಯಾಃ | ಪಿಚ್ಛಲವಿಶದೌ

          ಚಕ್ಷುಃಸ್ಪರ್ಶಾಭ್ಯಾಂ | ಸ್ನಿಗ್ಧರೂಕ್ಷೌಚಾಕ್ಷುಷೌ | ಶೀತೋಷ್ಣೌಸುಖ

ಅಪ್ಪವೀರ್ಯ ದುಖೋತ್ಪಾದನೇನ | ಗುರುಪಾಕಃ ಸೃಷ್ಟವಿಣ್ಮೋತ್ರತಯಾ ಕಫೋ ಗಳು ಹ್ಯಾಗೆ

ಗ್ರಾಹ್ಯ       ತ್ಲ್ಕೇಶೇನಚ | ಲಘುರ್ಬದ್ಧವಿಣ್ಮೂತ್ರತಯಾ ಮಾರುತಕೋಪೇನ ಚ |
          ತತ್ರ ತುಲ್ಯಗುಣೇಷು ಭೂತೇಷು ರಸವಿಶೇಷಮಪಲಕ್ಷಯೇತ್ |
          ತದ್ಯಧಾ | ಮಧುರೋ ಗುರುಶ್ಚ ಪಾರ್ಥಿವಃ | ಮಧುರಃ ಸ್ನಿಗ್ಧಶ್ಚಾಪ್ಯ
          ಇತಿ | (ಸು 154.) .
   ಅವುಗಳಲ್ಲಿ ಮೃದು ಶೀತ ಮತ್ತು ಉಷ್ಣ ಈ ಗುಣಗಳನ್ನು ಸ್ಪರ್ಶನದಿಂದ ತಿಳಿಯ ತಕ್ಕದ್ದು, ಪಿಚ್ಛಲ ಮತ್ತು ವಿಶದ ಗುಣಗಳನ್ನು ನೋಡಿಯೂ ಮುಟ್ಟಿಯೂ ತಿಳಿಯತಕ್ಕದ್ದು, ಸ್ನಿಗ್ಧ ಮತ್ತು ರೂಕ್ಷ ಗುಣಗಳು ನೋಡಿ ತಿಳಿಯಲು ಸಾಧ್ಯವಾದವು, ಮತ್ತು ಶೀತ ಮತ್ತು ಉಷ್ಣ ಗಳು ಸುಖದುಃಖಗಳನ್ನುಂಟುಮಾಡುವದರಿಂದ ತಿಳಿದುಬರುತ್ತವೆ. ಗುರುಪಾಕವನ್ನು ಮಲ ಮೂತ್ರಗಳ ಸಡಿಲುವಿಕೆಯಿಂದಲೂ ಕಫವೃದ್ಧಿಯಿಂದಲೂ ತಿಳಿಯಬೇಕು. ಮತ್ತು ಲಘುಪಾಕ ವನ್ನು ಮಲಮೂತ್ರಬದ್ಧತೆ ಮತ್ತು ವಾಯುಪ್ರಕೋಪದಿಂದ ತಿಳಿಯಬೇಕು. ಭೂತಗಳಲ್ಲಿ ಗುಣಗಳು ಸದೃಶವಾಗಿರುವಲ್ಲಿ, ರಸಭೇದವನ್ನು ನೋಡಿಕೊಳ್ಳಬೇಕು, ಹ್ಯಾಗಂದರೆ ಪೃಧ್ವೀ ಸಂಬಂಧವಾದದ್ದು ಸೀ ಮತ್ತು ಗುರು, ಜಲಸಂಬಂಧವಾದದ್ದು ಸೀ ಮತ್ತು ಸ್ನಿಗ್ಧ, ಹೀಗೆ-
     ಷರಾ ತೀತೋಷ್ಣ ಇತ್ಯಾದಿ ವಾಕ್ಯಕ್ಕೆ ತೀಕ್ಣೋ ಮುಖದುಃಖೋತ್ಪಾದನೇನ ಚ' ಎಂಬ ಪಾರಾಂತರವಿದೆ ಅಂದರೆ 'ಮತ್ತು ಮುಖದಲ್ಲಿ ಉಂಟಾಗುವ ಅಸುಖದಿಂದ ತೀಕ್ಷವನ್ನು ತಿಳಿಯತಕ್ಕದ್ದು' ಎಂತ ಈ ಪಾರವೇ ಸರಿ ಎಂತ ಕಾಣುತ್ತದೆ |

21. ದೇಹದ ಗುಣಾ ಯ ಉಕ್ತಾ ದ್ರವ್ಯೇಷು ಶರೀರೇಷ್ವಪಿ ತೇ ತಧಾ |

    ಸ್ಥಿತ್ಯಾದಿ 
   ದ್ರವ್ಯಾಶ್ರಯ           ಸ್ಥಾನವೃದ್ಧಿಕ್ಷಯಾಸ್ತಸ್ಮಾದ್ದೇಹಿನಾಂ ದ್ರವ್ಯಹೇತುಕಾಃ ||
                                           (ಸು. 154.)
         ದ್ರವ್ಯಗಳಲ್ಲಿ ಯಾವ ಗುಣಗಳು ಹೇಳಲ್ಪಟ್ಟವೋ, ಆ ಗುಣಗಳು ಶರೀರಗಳಲ್ಲಿಯೂ ಹಾಗೆಯೇ ಇರುವದರಿಂದ, ದೇಹಧಾರಿಗಳ ಯಧಾಸ್ಥಿತಿ, ವೃದ್ಧಿ ಮತ್ತು ಕ್ಷಯಗಳಿಗೆ ದ್ರವ್ಯ ಗಳೇ ಹೇತುಗಳಾಗಿರುತ್ತವೆ.