ಪುಟ:ಹಳ್ಳಿಯ ಚಿತ್ರಗಳು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

೧೩

ಅಂಗಾಂಗಗಳ ವರ್ಣನೆಯೆಲ್ಲ ಬಂದಿತು. ಹಾಗೂ ಹೀಗೂ ಏನೇನೋ ಹೇಳುತ್ತಾ 'ಹಾಳು ಸ್ತ್ರೀ ವರ್ಣನೆ ಬೇಡ. ಮುಂದಕ್ಕೆ ಓದು' ಎಂದೆ. ನನ್ನ ಸ್ನೇಹಿತನು ೧೦-೧೨ ಪದ್ಯವನ್ನು ಬಿಟ್ಟು ಈ ಪದ್ಯವನ್ನು ಓದಿದ.

ರಾಜಸೂಯದ ಕರ್ತುವೋಲ್ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದು ದಳಕಾವೇಷ್ಟಿ ತತ್ವದಲಿ |
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ ||

ಪದ್ಯವನ್ನು ಕೇಳಿ ನನಗೆ ಸಿಡಿಲು ಬಡಿದಂತೆ ಆಯಿತು. ಮೈಯೆಲ್ಲಾ ಬೆವತಿತು, ಬಾಯೊಣಗಿತು; ತೊದಲಿತು. ವೀರರನ್ನು ನೋಡಿ ಉತ್ತರನು. “ನಾನು ಜೀವಗಳ್ಳರಿಗೆ ಗುರು; ದಮ್ಮಯ್ಯ, ಕಾಪಾಡು ; ನಾನು ನಿನ್ನ ಮಗ” ಎಂದು ಬೃಹನ್ನಳೆಯ ಕಾಲನ್ನು ಹಿಡಿದು ರೋದಿಸಿದಂತೆ ನಾನು ಕಾತರನಾದೆ. ಜೊತೆಗೆ ಹೆಮ್ಮೆ ಬೇರೆ ಬಾಧಿಸುತ್ತಿದ್ದಿತು.. ನನ್ನ ಸ್ನೇಹಿತನು. “ಹೂ, ಅಪ್ಪಣೆಯಾಗಲಿ” ಎಂದ. "ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಸ್ಸು" ಎಂಬಂತೆ "ಮುಂದಲ ಪದ್ಯಕ್ಕೂ ಇದಕ್ಕೂ ಸಂಬಂಧವಿದೆ. ಅದನ್ನೂ ಓದು” ಎಂದೆ. ಅವನು ನಿರ್ದಯದಿಂದ ಈ ಪದ್ಯವನ್ನು ಕಿರಚಿದ.

ಜನಪ ಕೇಳುಪಲಾಲಿತಾಂ
ಜನವೆನೆ ಜಿತಾಕ್ಷ ನಿಪಕ್ಷವಾದುವು
ವಿನುತ ಕರ್ಣ ಪ್ರಣಯಿಗಳು ವೃಷಸೇನ ವೈರದಲಿ |
ಜನ ವಿಡಂಬನ ತಾರಕಾಮಂ
ಡನ ಕದರ್ಥಿಕ ಕುಮುದಮೆನೆ ಲೋ
ಚನ ಯುಗಳನೊಪ್ಪಿದುವು ಪಾಂಚಾಲನಂದನೆಯಾ ||

ಕುರುವಿನ ಮೇಲೆ ಬರೆ ಎಳೆದಂತಾಯಿತು; ನನ್ನ ಕುರುಕ್ಷೇತ್ರವನ್ನು ಕಂಡಂತಾಯಿತು. ಗಂಜಿ ಹೋಗದ ಬಾಯಿಯಲ್ಲಿ ಕಡುಬು ತುರುಕಿದಂತಾಯಿತು. ನನಗೆ ಒಂದು ಪದವೂ ಅರ್ಥವಾಗಲಿಲ್ಲ. ಸೂರ್ಯನನ್ನು ನುಂಗಲು ಮೇಲಕ್ಕೆ ಹಾರಿದ ಆಂಜನೇಯನ ದವಡೆಗೆ ಕಮಲಮಿತ್ರನು