ವಿಷಯಕ್ಕೆ ಹೋಗು

ಪುಟ:ಕಾನನ ಮಾರ್ಚ್ 2011.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕದಲ್ಲಿ 1966 ರ ಹುಲಿಗಣತಿ ಪ್ರಕಾರ 114 ಹುಲಿಗಳಿದ್ದು, 1969 ರಲ್ಲಿ 100 ಹುಲಿಗಳು, 1970 ರಲ್ಲಿ 70 ಹುಲಿಗಳು, 1972 ರಲ್ಲಿ 102 ಹುಲಿಗಳು, ಇನ್ನೂ ಉಳಿದ ನಾಲ್ಕು ದಶಕಗಳಲ್ಲಿ ಹುಲಿಯ ಸ್ಥಿತಿಯನ್ನು ಒಮ್ಮೆ ಉಹಿಸಿಕೊಳ್ಳಿ...! ಮತ್ತೆ ಇದೇ ಸಾಲಿನ ಜನಸಂಖ್ಯೆಯನ್ನು ಮತ್ತು ಅವನ ಬಳಕೆಯಲ್ಲಿರುವ ಸಂರಕ್ಷಿತಾರಣ್ಯವನ್ನು ಒರತುಪಡಿಸಿದ ಭೂ ಪ್ರದೇಶವನ್ನು ಗಮನಿಸಿದರೆ. . .! ಇದು ಬಹಳ ಕಳವಳಕಾರಕ ಅಂಶವೇ ಸರಿ. ಒಮ್ಮೆ ಗಮನಿಸಿ ಕರ್ನಾಟಕದಲ್ಲಿರುವ ಐದುಕೋಟಿ ಮೀರಿದ ಜನಸ೦ಖ್ಯೆಂjಲ್ಲಿ. . . ! ಸುಮಾರು 133 ಹುಲಿಗಳೆಲ್ಲಿ. . . ! ಮತ್ತೆ ಸೋಲಿಗರ ಹಿತರಕ್ಷಣೆಯೆ ? ಹುಲಿಗಳ ಸಂರಕ್ಷಣೆ ? ಎಂಬ ಪ್ರಶ್ನೆ ಬಂದಾಗ, ಸೋಲಿಗರು ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ 299 08 ಸಂಖ್ಯೆಯಲ್ಲಿ ವಾಸವಾಗಿದ್ದು, ಇದೇ ಅರಣ್ಯ ಪ್ರದೇಶಗಳಲ್ಲಿ ಹುಲಿಗಳು ಕೇವಲ ಸುಮಾರು 133 ಸಂಖ್ಯೆಯಲ್ಲಿ ವಾಸಿಸುತ್ತಿವೆ. ಮಾನವನ ಚಟುವಟಿಕೆಗಳ ಮಾರಕ ಪರಿಣಾಮಗಳಿಂದ ಸುತ್ತುವರೆಯಲ್ಪಟ್ಟಿರುವ ಹುಲಿಗಳು, ಅವುಗಳ ಹಿಂದಿನ ಅರಣ್ಯ ಪ್ರದೇಶ ಗಳ ವ್ಯಾಪ್ತಿಯು ಕೇವಲ ಐದು ಭಾಗಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಈಗ ಉಳಿಯುವ ಅಂತಿಮ ಪ್ರಯತ್ನದಲ್ಲಿವೆ

ಕಎಂಬುದು ಸೋಲಿಗ ಎಂಬ 'ಹಸಿದ ಹೊಟ್ಟೆ 'ಗಳಿಗೆ ಹುಲಿ ಸಂರಕ್ಷಣೆಯ ಬಗ್ಗೆ ಕಾಳಜಿ, ಕನಿಕರ ಎಲ್ಲಿಂದ ಬರಬೇಕು? ಸೋಲಿಗರು ಪರಂಪರಾನುಗತವಾಗಿ ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲಿನ ಅರಣ್ಯಗಳಲ್ಲಿ ವಾಸಿಸುತ್ತಿರುವ ಈ ಜನಾಂಗಗಳು ಅರಣ್ಯದ ಉತ್ಪನ್ನಗಳನ್ನು ನೇರವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಸಂಗತಿಗಳೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಅರಣ್ಯದಲ್ಲಿ ದೊರೆಯುವ ಜೇನು, ಹಣ್ಣು, ಕಾಯಿ ಮುಂತಾದವುಗಳನ್ನು ಸಂಗ್ರಹಿಸಿ ಮಾರಿ ಜೀವನ ನಡೆಸುತ್ತಿದ್ದಾರೆ ಎಂಬುದು ಸತ್ಯ. ಮತ್ತೆ ಅವರುಗಳು ಹೊಲ, ತೋಟಗಳಲ್ಲಿ ರಾಗಿ, ಕಾಫಿ, ಬಾಳೆ ಮುಂತಾದ ಕೃಷಿ ಬೆಳೆಗಳನ್ನು ತೆಗೆಯುತ್ತಾರೆ ಎಂಬುದು ಎಷ್ಟು ಸೂಕ್ತವೋ. ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳು ಇವರ ಜೀವನವನ್ನು ಉತ್ತಮ ಪಡಿಸುವಲ್ಲಿ ಸಕ್ರಿಯವಾಗಿ ಪ್ರಯತ್ನಗಳನ್ನು ಮಾಡುತ್ತಿವೆ ಎಂಬುದರಲ್ಲಿ ಸತ್ಯ ಸಂಗತಿಯಿದೆ. ನಾವು ಗಮನಿಸಿದ್ದೇವೆ, ಉದಾಹರಣೆಗೆ ಗಿರಿಜನರ ಅಭಿವೃದ್ಧಿಯಲ್ಲಿ ಡಾ