ಪುಟ:ಕಾನನ ಮಾರ್ಚ್ 2011.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಷ್ಟೆಲ್ಲ ಸೌಲಭ್ಯವಿರುವ ಬುಡಕಟ್ಟು ಜನಾಂಗಗಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ನೀರಾವರಿ ಮುಂತಾದ ಅನುಕೂಲಗಳಿಂದಾಗಿ ಉತ್ತಮ ಜೀವನವನ್ನು ನಡೆಸಬಹುದವಲ್ಲವೇ? ಇಷ್ಟೆಲ್ಲ ಇರುವ ಇವರಿಗೆ, ಸೋಲಿಗ ಜನಾಂಗ ಮತ್ತು ಅರಣ್ಯ ಪ್ರದೇಶವು ಪರಸ್ಪರ ಅವಲಂಬಿತವಾಗಿದೆ ಎಂಬ ಅಭಿಪ್ರಾಯದ ಕುರಿತು ಪರ-ವಿರೋಧಗಳನ್ನು ಸೃಷ್ಟಿಸಿ, ಅನ್ಯರು ಲಾಭ ಪಡೆಯುವ ಜನ ಬಹಳವಿದ್ದಾರೆ. ಬುಡಕಟ್ಟು ಜನಾಂಗಗಳು ಸ್ವಲ್ಪವೇ ಉಳಿದಿವೆ. . . ಅವರ ಹಿತರಕ್ಷಣೆ ಬೇಕು. . . ಸೋಲಿಗ ಸಮುದಾಯವನ್ನು ಅರಣ್ಯಗಳಿಂದ ಉಚ್ಚಾಟಿತಗೊಳಿಸುತ್ತಾರೆ. . . . ವನ್ಯ ಸಂಪ್ರದಾಯವನ್ನು ಆಳುಮಾಡುತ್ತಿದ್ದಾರೆ. . . . ಎಂಬ ಹಲವಾರು ಕಾರಣಗಳಿಂದ ಗಿರಿಜನರ ಹಾದಿಯನ್ನು ತಪ್ಪಿಸುತ್ತಿರುವ ಅನ್ಯರ ಹಸ್ತಕ್ಷೇಪದಿಂದಾಗಿಯೇ. .! ಸೋಲಿಗರ ಹಿತರಕ್ಷಣೆಗೆ ಅಥವಾ ಬುಡಕಟ್ಟು ಜನಾಂಗಗಳ ಉದ್ದಾರದ ಹಾದಿಗೆ ಕಲ್ಲುಹಾಕುತ್ತಿದ್ದಾರೆ. ಸೋಲಿಗರ ಹಿತರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಈ ಜನಸಮುದಾಯವು ಹುಲಿಗಳ ಉದ್ದಾರಕ್ಕೆ, ಅಥವಾ ಹುಲಿಗಳ ವಾಸಕ್ಷೇತ್ರಗಳ ಉಳಿವಿಗೆ ಏಕೆ ಮುಂದೆ ಬರುತ್ತಿಲ್ಲ. ?