ಪುಟ:ಕಾನನ ಮಾರ್ಚ್ 2011.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಡೆಮ್ಮೆ ಬೇಟೆ

ಗುಂಗುರು ತಲೆಯ, ದಪ್ಪ ತುಟಿಯ, ಬಡಕಲು ದೇಹದ ನರರು. ನೋಡಲು ಸ್ವಲ್ಪ ಪೂರ್ವದಲ್ಲಿ ಆಫ್ರಿಕಾ ಖಂಡದಿಂದ ಭರತ ಖಂಡಕ್ಕೆ ವಲಸೆ ಬಂದ ನನ್ನ ಪೂರ್ವಜರ ಹಾಗೆ ಕಾಣುತ್ತಾರೆ. ಜೀವನ ಶೈಲಿ ಇನ್ನೂ ನಾಗರೀಕತೆಗೆ ಓಗ್ಗಿಲ್ಲಾ. ಸುತ್ತ ಮುತ್ತಾ 14 ಹಳ್ಳಿಯ ಜನ ಪಾರೆಸ್ಟ್ರುಗಳಿಗೆ ಹೆದರಿ ಬೇಟೆಯನ್ನೇ ನಿಲ್ಲಿಸಿ ಹಲವು ದಶಕಗಳೇ ಕಳೆದಿದ್ದರೂ, ಇವರು ಮಾತ್ರಾ ಚಾಟರ ಬಿಲ್ಲು, ಕಾಡಲ್ಲೆಲ್ಲಾ ತಂತಿಹುರುಳು, ಕಾಡುಕೋಳಿಗೆ ಕಲ್ಲುಹುರುಳು, ಇಲಿಬೇಟೆ, ಉಡಬೇಟೆ, ಹೀಗೆ ಹಲವು ಶಬ್ಧರಹಿತ, ಸಾಕ್ಷಿ-ಕುರುಹುರಹಿತವಾಗಿ ಬೇಟೆಯಾಡುವ ಕಲೆಯನ್ನ ಕರಗತ ಮಾಡಿಕೊಂಡು, ಕಾಡು ಸೋಸುವ ಕಾರ್ಯ ನಿರಾಳವಾಗಿ ನೆಡೆಸುತ್ತಿದ್ದಾರೆ.
ಆನೆವೋರ್ ತೋಟದ್ ಮೇಸ್ತ್ರಿ ಮೂಲೆಮುತ್ತಾ ಅವನಲ್ಲಾ. . . ಅವರ್ ಹೆಂಗಸರ್ ತಂಗಿನ ಕೊಟ್ಟಿರೋ ಸೊಳ್ಳೆಪುರದ ಭೂಪ ಮಾದೇವ. ಮೊನ್ನೆ ಬೇಸಿಗೆನಲ್ಲಿ ಮಟಮಟ ಮಧ್ಯಾನ್ಹ ಆ ಅರ್ಜುನನ್ಕುಂಟೆ ತಾವ ನೀರ್ಕುಡಿಯಾಕೆ ಬರೋ ಕಡವೆ ಹೊಡೆಯಾಕೆ ವಂಚಾಕ್ಕೋಂಡು, ತನ್ನ ನಾಲ್ಕು ಇಂಚು ಲೋಡ್ ಮಾಡಿರೋ ಕಳ್ಳಗನ್ನು ಹಿಡಿಕೊಂಡ್ ಕಾದಿದ್ದ.
ಕಾಡಿನ ಕಡೆಯ ಲಂಟಾನ ಜಿಡ್ಡಿನಿಂದ ಯಾವುದೋ ಪ್ರಾಣಿ ಸರಸರ ತರಗೆಲೆ ಸದ್ದು ಮಡಿಕೊಂಡು ಬರುತ್ತಾ ಇತ್ತು. ಇವನು ಗನ್ನನ್ನು ಹೆಗಲಿಗೇರಿಸಿ, ಪೊದೆಯ ಕಡೆ ತದೇಕಚಿತ್ತವಾಗಿ ಕಾಯುತ್ತಾ ಕುಳಿತ. ಬೇಟೆಯಲ್ಲಿ ಬಹಳವಾಗಿ ಪಳಗಿದ್ದ ಇವನು ಅದು ಕಡವೆ ಅಥವಾ ನಾಗರಹೊಳೆಯಿಂದಾ ಇತ್ತೀಚೆಗೆ ಇತ್ತ ಕಡೆ ಬಂದಿರುವ ಕಾಡಮ್ಮೆ ಇರಬೇಕು ಎಂದು ಯೋಚಿಸತೊಡಗಿದ. ಮೊನ್ನೆ ತಾನೆ ತಟ್ಟಗುಪ್ಪೆತಾವ ಹೊಲಕ್ಕೆ ಆನೆ ಬರದೇ ಇರಲಿ ಎಂದು ಬೇಲಿ ತಂತಿಗೆ ಕೊಟ್ಟಿದ್ದ ಕರೆಂಟ್ಗೆ ಕಾಡೆಮ್ಮೆ ಬಿದ್ದೋಗಿದ್ದೂ, ಆ ಊರಿನ ಸಕಲ ಕಿಲಸ್ತರು ಹೊಲದಲ್ಲಿ ಸತ್ತು ಬಿದ್ದಿದ್ದ ಕಾಡೆಮ್ಮೆಯನ್ನ ಹುರಿದು ತಿಂದು ಹಬ್ಬಮಾಡಿದ್ದೂ, ಪಿಲಿಪ್‌ಸ್ವಾಮಿಯಿಂದ ಕೇಳಿ ತಿಳಿದಿದ್ದ. ಕಾಡೆಮ್ಮೆಯನ್ನು ನೆನೆದು ಬಾಯಲ್ಲಿ ನೀರೂರಿದ್ದರಿಂದ, ಪೊದರಿನಿಂದ ತಲೆ ಕಾಣಿಸಿದ್ದೇ ತಡ ಇಕ್ಕಡಿಸಿ ಬಿಟ್ಟ!.
ಹೋಗಿ ನೋಡುತ್ತಾನೇ. . . ಮೈಯೆಲ್ಲಾ ತಣ್ಣಗಾಗಿ ಹೋಯ್ತು ಅದನ್ನು ನೋಡಿ! ಕೊರಮರದೊಡ್ಡಿಯ ಕಾಡುದನ?. “ಕೆಟ್ಟೋಯ್ತಲ್ಲಾ ಕೆಲಸ ಏನು ಮಾಡೋದು?” ಎಂದು. ಸರಸರ ಅಂತಾ ಮನೆಗ್ಬಂದು, ಬೆಟ್ಕುಡ್ಲು, ಚೂರಿ, ಮಚ್ಚು ಎಲ್ಲಾ ತಗೊಂಡೋಗಿ ಗುಂಡು ತಗುಲಿದ ಜಾಗವೆಲ್ಲಾ ಕೊಯ್ದು ಗುಂಡು ತಕ್ಕೊಂಡು ಮನೆಗ್ ಬಂದೋನು ತೆಪ್ಪಗಾಗಿಬಿಟ್ಟ!.
ಹಸುಪಡ್ಡೆ ರಾತ್ರಿಯೆಲ್ಲಾ ಮನೆಗೆ ಬರಲಿಲ್ಲಾ ಯಾಕೆ? ಎಂದು ಕುಳ್ಳಿರನೋರ್ ಅಮ್ಮ ಊರೆಲ್ಲಾ ಹುಡುಕುತಾ. . . ಇರಬೇಕಾದರೆ, ನೇರ ಬಂದು ಇವನನ್ನೇ ಕೇಳಿದಳಂತೆ!.

'ಏನೋ ಮಾದೇವಣ್ಣಾ,
ನಮ್ ಅಸುಪಡ್ಡೇ ಏನಾರಾ ನೋಡ್ದಾ? ರಾತ್ರಿಯೆಲ್ಲಾ ಮನೇಕೇ ಬಂದಿಲ್ಲಪ್ಪೋ'

ಇವನ ಎದೆ ದಸಕ್ ಅಂತು!.