ಪುಟ:ಅರಮನೆ.pdf/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ಪ್ರವೇಶ ಮಾಡಿದ ಪರಿಯನ್ನು ಪದ ಮಾಡಿ ಕೊಂಡಾಡುತಲಿದ್ದರು. ಸದರಿ ಅರಮನೆಂರೊಳಗ ಮುಂದೊಂದು ದಿವಸ ತಾನು ಸಜೀವ ಸಮಾಧಿ ಹೊಂದಲೋಸುಗ ಅಲ್ಲೆಲ್ಲೋ ವಂದು ಕಡೀಕೆ ಬಳಗಟ್ಟೆ ವಡ್ಡರಿಂದ ಸಮಾಧಿ ಕಾಮಗಾರಿ ನಡೆಸಿದ್ದನು. ಬಂದು ಹೋಗುತಲಿದ್ದ ಭಕುತಾದಿ ಕಣ್ಣಿಗೆ ಕೇವಲ ಮೋಬಯ್ಯನ ಭವುತಿಕಕಾಯ ಮಾತ್ರಗೋಚರ ಮಾಡುತಲಿರಲಿಲ್ಲ.. ಅದರ ಬದಲಿಗೆ ಸಾಚ್ಚಾತ್ ಆದಿ ಸಗುತಿಯನ್ನೇ ತಾವು ತಮ್ಮ ಕಲ್ಪನದೊಳಗೆ ಆರೋಪ ಮಾಡಿಕೊಳ್ಳುತಲಿದ್ದರು. ಸಾಂಬವಿ ತಾನಿರುವಲ್ಲಿಂದಲೇ ತ್ರಿಲೋಕ ಸಂಚಾರ ಮಾಡುತಲಯಾಳೆ.. ಸಚರಾಚರಗಳ ತಲೆ ನೇವರಿಕೆ ಮಾಡುತಲಯ್ತಾಳೆ.. ಯಾವ ಮರದಂದು ತಾನು ಸಿವಾಸನವೇರಿದಳೋ... ಯಾವ ಚಣ ಅರಮನೇನ ಕಬ್ಬಾ ಮಾಡಿದಳೋ ಆ ಚಣದಿಂದಲೇ ಕುಂಪಣಿ ಸರಕಾರದ ಯಿರುದ್ದ ಸೆಡೊಡೆದು ನಿಂತವಳೆ ಮುಂದು ಮುಂತಾಗಿ ತಮಗೆ ತಾವ ಮಾತಾಡಿಕೊಳ್ಳುತಲಿದ್ದರು..... ತರಾವರಿ ಮುಪ್ಪಾನು ಮುದೇರೊಟ್ಟಿಗೆ ಮೋಬಯ್ಯ ಸೇರಿಕೊಂಡು ಯೇನೋ ಮಸಲತ್ತು ನಡೆಸಿರುವಂಗಯ್ದೆ ಯಂಬ ಅನುಮಾನ ಪಟುಗೊಂಡು ಬರುತಲಿದ್ದವರೂ ಅವರಿವರಲ್ಲಿಲ್ಲದೆ ಯಿರಲಿಲ್ಲ.. ಅಂಥ ಅರೆಬರೆ ಆಸ್ತೀಕ ಮಂದಿಯ ಪಂಚೇಂದ್ರಿಯಂಗಳಿಗೆ ಮೂಗುದಾಣ ಪೋಣಿಸುವ ಕ್ರಿಯಾಕಟ್ಟಲೆ ಅಲ್ಲಿ ಲಗು ಲಗೂನ ನಡದೇ ಬಿಡುತಲಿತ್ತು.. ಆಗ ಅಂಥವರು ಯೇನೋ ನೋಡಲಕೆ೦ದು ಬ೦ದವರು ಬ್ಯಾರೆ ನೋ ವ೦ದು ನೋಡಿದಾಂಗುತ್ತಿರುವುದಲ್ಲಾ.. ಯೇನೋ ಕೇಳಲಕೆಂದು ಬಂದವರು ಬ್ಯಾರೆ ಯೇನೋ ಕೇಳಿದಾಂಗ ಆಗುತ್ತಿರುವುದಲ್ಲಾ... ತಮಗ ಯಾರೋ ಮಾಯಾ ಮಂತರ ಮಾಡಿದಾಂಗುತ್ತಿರುವುದಲ್ಲಾ... ಯಂದು ಮುಂತಾಗಿ ತಮಗೆ ತಾವ ಅನಕಂತ ಹೋಗುತಲಿದ್ದರು. ಯಿದೆಂಗಾತದ.. ಅದೆಂಗಾತದ ಅಂತ ಕೇಳಬೇಕೆನ್ನುವವರಿಗೆ ಹಿರೀಕರು ಯಿದೆಲ್ಲ ಮೂಳೆ ತಡಿಕೆಯಂಥ ಹುಲುನರರಿಗೆ ಅಲ್ಲ ಆಗೋ ಯಿಷಯವಲ್ಲ... ನೀವೆಲ್ಲ ಅನುಭಾವದ ನೆಲೆಯೊಳಗೆ ನಿಂತು ಯೋಚಿಸುವುದನ್ನು ಮೊದಲು ಕಲ್ಲುಗೊಳ್ಳಿರಿ.. ಆಗ ಮೋಬಯ್ಯನ ದಿವ್ಯ ಸರೀರದೊಳಗ ವಸ್ತಿ ಮಾಡಿರೋ ಆದೆಸಗುತಿಯ ಸಾಕ್ಷಾತ್ಕಾರ ಆಗ್ತದ.. ಯಂದು ನಚ್ಚ ಜೆಪ್ಪಿ ಕಳುವುತ್ತಿದ್ದರು. ಯಿನ್ನು ಕೆಲವರು ಮುಂದಕ್ಕೆ ಹೋಗಿ ನಾಕುಮಂದಿ ನಂಬುವುದನ ನಂಬುವುದು ನಂಬಿದಾಂಗ ನಟನ ಮಾಡುವುದು ಜಾಣನ