ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ವೈಜ್ಞಾನಿಕ ಸಮಾಜವಾದ ಪ್ರತಿಯೊಬ್ಬ ವ್ಯಕ್ತಿಗೂ ಆತನೆ ಹಿತವಾವುದೆಂಬುದು ಗೊತ್ತು. ಹಿತಗಳ ಬಗ್ಗೆ ವಿವೇಚನೆ ವ್ಯಕ್ತಿಗಳಲ್ಲಿ ಇದೆ, ವ್ಯಕ್ತಿಗಳು ಆರ್ಥಿಕ ಕ್ಷೇತ್ರದಲ್ಲಿ ಪ್ರವೇಶಿಸಿ ತಮ್ಮ ತಮ್ಮ ಆರ್ಥಿಕಾಭಿವೃದ್ಧಿಯನ್ನು ಮಾಡಿಕೊಳ್ಳುವರು. ಪ್ರತಿ ಯೊಬ್ಬನೂ ದುಡಿಯುತ್ತಾನೆ, ದುಡಿಮೆಗೆ ಅನುಸಾರವಾಗಿ ಪ್ರತಿಯೊಬ್ಬನೂ ಪ್ರತಿಫಲ ಪಡೆಯುತ್ತಾನೆ. ಹೀಗೆ ಪ್ರತಿಯೊಬ್ಬನೂ ಆತನ ಯೋಗ್ಯ ಶಾನುಸಾರ ದುಡಿಯುವುದರಿಂದ ಸಂಪತ್ತು ಅಭಿವೃದ್ಧಿಯಾಗುತ್ತದೆ, ಕೆಲವರು ನೇರವಾಗಿ ಉತ್ಪಾದನೆಯಲ್ಲಿ ತೊಡಗುತ್ತಾರೆ, ಕೆಲವರು ವ್ಯಾಪಾರದಲ್ಲಿ ತೊಡಗುತ್ತಾರೆ, ಇನ್ನು ಕೆಲವರು ಉತ್ಪಾದನೆಗೆ, ವ್ಯಾಪಾರಕ್ಕೆ ಅನುಕೂಲ ವಾಗುವ ರೀತಿಯಲ್ಲಿ ಉಸಕೆಲಸ ಅಥವ ಸಹಾಯಕ ಕೆಲಸಗಳಲ್ಲಿ ನಿರತ ರಾಗುತ್ತಾರೆ. ಒಟ್ಟಿನಲ್ಲಿ ಎಲ್ಲರೂ ಉತ್ಪಾದನೆಯಲ್ಲಿ ಸಂಪತ್ತಿನ ಅಭಿವೃದ್ಧಿ ಯಲ್ಲಿ ಸಮಭಾಗಿಗಳಾಗಿದ್ದಾರೆ, ಸಮಾಜದ ಆರ್ಥಿಕ ಜೀವನ ಸುಗಮವಾಗಿ ನಡೆಯಲು ಕಾರಣರಾಗಿದ್ದಾರೆ, ಎಲ್ಲರೂ ದುಡಿಮೆ ಮಾಡುವುದರಿಂದ, ದುಡಿ ಮೆಗೆ ತಕ್ಕ ಪ್ರತಿಫಲ ದೊರಕಿಸಿಕೊಳ್ಳುವುದರಿಂದ ಅವರವರು ಗಳಿಸಿರುವ ಸ್ವತ್ತು ಅವರವರಿಗೆ ಸೇರಿದ್ದು; ಅವರ ದುಡಿಮೆಯ ಫಲ, ಒಬ್ಬನಲ್ಲಿ ಹೆಚ್ಚು ಹಣ ಅಥವಾ ಬಂಡವಾಳವಿದ್ದರೆ ಅದು ಆತನ ದುಡಿಮೆಯ ಫಲ. ಆದ್ದರಿಂದ ಖಾಸಗೀ ಸ್ವಾಮ್ಯದಲ್ಲಿ ತಪ್ಪಿಲ್ಲ ಈ ಆಧಾರದಮೇಲೆಯೇ ಬಂಡವಾಳ ಆರ್ಥಿಕವ್ಯವಸ್ಥೆ ಜನನ ಹೊಂದಿ ಅಭಿವೃದ್ಧಿಗೆ ಬಂದಿರುವುದು. ಇನ್ನು ಮುಂದೆಯೂ ಸಹ ಇದೇ ರೀತಿಯಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿರುವುದು ಖಂಡಿತ. ಆದುದರಿಂದ ಸರ್ಕಾರವು ಆರ್ಥಿಕ ಕ್ಷೇತ್ರದಲ್ಲಿ ಯಾವ ರೀತಿಯಲ್ಲೂ ಪ್ರವೇಶಿಸಕೂಡದು ; ಸರ್ಕಾರದ ಪ್ರವೇಶದಿಂದ ಸುಗಮವಾಗಿ ನಡೆಯುತ್ತಿ ರುವ ಖಾಸಗೀ ಉದ್ಯಮ ಖಾಸಗೀ ಉತ್ಪಾದನೆ, ಬಂಡವಾಳ ಶೇಖರಣೆ, ಉದ್ಯಮಕ್ಕೆ ತಕ್ಕ ಲಾಭ, ಉದ್ಯೋಗದ ಪ್ರಾಪ್ತಿ, ಕೆಲಸಕ್ಕೆ ತಕ್ಕ ಕೂಲಿ, ಇವುಗಳಿಗೆ ಭಂಗ ಉಂಟಾಗುತ್ತದೆ. ಸರ್ಕಾರವು ದೂರಸರಿದು ನಿಲ್ಲಬೇಕು ; ಸಾರ್ವ ಜನಿಕ ಶಾಂತಿಯನ್ನು ಕಾಪಾಡುವುದು, ಒಪ್ಪಂದಗಳನ್ನು ಪ್ರತಿ ಯೊಬ್ಬರೂ ಪರಿಪಾಲಿಸುವಂತೆ ನೋಡಿಕೊಳ್ಳುವುದು, ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಕೊಡುವುದು ಸರ್ಕಾರದ ಮುಖ್ಯ ಕೆಲಸವಾಗಿರಬೇಕು,