ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ ಯಾತ್ರಾರ್ಥಿಯಾಗಿ ಹೋಗಿರಬಹುದು. ಇವರೆಲ್ಲರೂ ಸೇರಿ ಮೇಲೆ ಹೇಳಿದಂತೆ ಮಾತು ಕಥೆ ನಡೆಯಿಸಿದರೆಂದು ಸ್ಥಿರೀಕರಿಸುವುದು ಸುಲಭಸಾಧ್ಯದ ಕೆಲಸವಲ್ಲ. ಮೇಲೆ ಹೇಳಿರುವ ಆರ್ಯಾ ಶ್ಲೋಕವು ಭಾಮಿನೀವಿಲಾಸ ಮತ್ತು ರಸಗಂಗಾಧರ ದಲ್ಲಿ ಜಗನ್ನಾಥನದೆಂದು ಹೇಳಿರುವುದು. ಅಸ್ಸಯ್ಯದಿಕಿತನದೆಂದು ಜನಜನಿತ ಕಥೆಯು ಇರುವದು. - ಏಳನೆಯ ವಿಚಾರವಾದುದು ಗಂಗಾಲಹರಿ. ಇದರಲ್ಲಿ ೫೨ ಶ್ಲೋಕಗಳಿರು ವುದು ನಿಜವಾದರೂ ಕಥೆಯು ನಿಜವಾದುದಲ್ಲ. ಹೇಗೆಂದರೆ ಕಧೆಯಂತೆ ಗಂಗಾ ಹರಿಯು ಜಗನ್ನಾಥನ ಕೊನೆಯ ಗ್ರಂಥವಾಗಿರಬೇಕು. ರಸಗಂಗಾಧರದಲ್ಲಿ ಇದರ ಕೆಲವು ಶ್ಲೋಕಗಳು ಉದಾಹೃತವಾಗಿರುವುದರಿಂದ ಗಂಗಾಲಹರಿಯನ್ನು ಬರೆದ ಎಷ್ಟೋ ವರ್ಷಗಳನಂತರ ರಸಗಂಗಾಧರವನ್ನು ಬರೆದಿರಬೇಕೆಂದು ಸ್ಪಷ್ಟವಾಗುತ್ತದೆ. ಆದುದರಿಂದ ಮೇಲೆ ಹೇಳಿದವುಗಳೆಲ್ಲವೂ ಮನೋರಂಜಕವಾದುದರಿಂದ ಚಾರಿತ್ರಿಕ ದೃಷ್ಟಿಯಿಂದ ಕೊಂಚವೂ ಪ್ರಯೊಜನವಾಗದು. ಪಂಡಿತ ಜಗನ್ನಾಥನಿಗೆ ಪಂಡಿತ ರಾಜನೆಂಬ ಬಿರುದೂ, ದಿರಾಂಗ್‌ಖಾನನಿಗೂ, ಲಾಲಖಾನನಿಗೂ ಗುಣಸಮುದ್ರ ನೆಂಬ ಬಿರುದು (Ocean of Excellence) ಕೊಟ್ಟುದಾಗಿ ತಿಳಿಯಬರುತ್ತದೆ ಲಾಲಖಾನನು ಪ್ರಸಿದ್ಧನಾದ, ರ್ಟಾಸೇನನ ಮಗ, ಸಿಲಾಸನ ಅಳಿಯನಾಗಬೆಕು. ಜಗನ್ನಾಥನೂ, ದಿಂಗ್ ಖಾನನೂ ಬೆಳ್ಳಿಯ ನಾಣ್ಯಗಳಲ್ಲಿ ತುಲಾಭಾರವನ್ನು ತೂಗಿಸಿ ಕೊಂಡು ಪ್ರತಿಯೊಬ್ಬರೂ ೪೫೦೦ ರೂಪಾಯಿಗಳನ್ನು ಹೊಂದಿದರೆಂದೂ ತಿಳಿಯ ಬರುತ್ತದೆ, ಸಹಾಜಹಾನನ ಹಿರಿಯ ಮಗನಾದ ದಾರನು ದೆಹಲಿಯಲ್ಲಿದ್ದು ಕೊಂಡು ತಂದೆಯ ಆಡಳಿತವನ್ನು ನಡೆಯಿಸುತ್ತಿದ್ದು ದಾಗಿ ಹೇಳಿರುವುದರಿಂದ ಸಂಸ್ಕೃತ ವಿದ್ಯಾಭಿಮಾನಿಯೂ ಕವಿಯೂ ಆದ ದಾರಾಸಿಕೋನಿನಲ್ಲಿ ಜಗನ್ನಾಥಪಂಡಿತನು ಎರಕಗೊಂಡುದೇನೂ ಅಚ್ಚರಿಯಲ್ಲ. ಏಕೆಂದರೆ ದಾರನು ಯುವರಾಜನಾಗಿದು ಪಂಡಿತರನ್ನು ಮನ್ನಿಸುವ ವಾಡಿಕೆಯು ಇದ್ದಿತು. ಗ್ರಂಥಗಳು:- ೧ರಸಗಂಗಾಧರ ೨, ಯಮುನಾವರ್ಣನ ಚಂಪೂ ೩. ಆಸಫವಿಲಾಸ ಚಿತ್ರಮೂಾಂಮಾಸಾಖಂಡನ ೫. ಭಾಮಿನೀವಿಲಾಸ ಮನೋರಮಾಕು ಚಮರ್ದನ ಅತಲಹರಿ