ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನಾಥಪಂಡಿತ ೩೯೧ ಮೊಗಲಚಕ್ರವರಿಗಳಲ್ಲಿ ದಾರಾಶಿಕೊವನ್ನು ಬಿಟ್ಟರೆ ಭಾಷಾಭೇದಗಳನ್ನೆಣಿ ಸದ ಒಬ್ಬನು ಮಾತ್ರ ಸಂಸ್ಕೃತಭಾಷಾಪೋಷಕನು ಎಂದು ಹೇಳಲಾಗುತ್ತದೆ. ಆದರೆ ಅವನಾರು? ಅಕೃರನೆ ? ಅಕೃರನೆನ್ನುವುದಾದರೆ ಇವನ ಕಾಲವೂ ಜಗ ನಾಥನ ಕಾಲವೂ ಸರಿಹೋಗದು, ಕಾಲವ್ಯತ್ಯಾಸವು ಮಿತಿಮೀರಿರುವುದು, ಜಗನ್ನಾಥನು ಫಾರಸೀ ಭಾಷೆಯಲ್ಲಿ ನಿಪುಣನಾಗಿರಬಹುದು. ಆದರೆ ಅವನು ಫಾರಸೀ ಭಾಷೆಯ ಜ್ಯೋತಿಷಗ್ರಂಥವನ್ನು ಸಂಸ್ಕೃತ ಮಾಡಿದನೆಂಬುದು ಸತ್ಯ ವಿಚಾರವಾಗದು. ಸಂಸ್ಕೃತಭಾಷೆಯಲ್ಲಿ ರಚಿತವಾಗಿರುವ ಜ್ಯೋತಿಷಗ್ರಂಥಗಳನೇಕ ಗಳು ವಿದೇಶಭಾಷೆಗೆ ಎಷ್ಟೋ ಪರಿವರಿಸಲ್ಪಟ್ಟಿರುವುವಾದರೂ ಪರಿವತ್ರನವಾಗದ ಗ್ರಂಥಗಳ ಸಂಖ್ಯೆಯು ಅನಂತ್ರ ಅಲ್ಲದೆ ಗ್ರಂಥವು ಇಂತಹುದೆಂಬದನ್ನು ಖಂಡಿತ ಮಾಡಿ ಹೇಳದೆ ಇರುವುದರಿಂದ ಹಾಗೆ ಹೇಳಲಾಗದು. ಅಲ್ಲದೆ ಕವಿಯು ಷಹಜ ಹಾನನ ಕಾಲದವನು. ಎರಡನೆಯದರಲ್ಲಿ ಹೇಳಿರುವ ಶ್ಲೋಕಗಳಾವುವೂ ಜಗನ್ನಾಥಕೃತ ಯಾವ ಗ್ರಂಥಗಳಲ್ಲಿಯೂ ಇರುವುದಿಲ್ಲ. ಮೊಗಲರ ಅರಸರಿಗೆ ಲವಂಗಿಯೆಂಬ ಕನೈಯು ಇದ್ದು ದಾಗಿ ಯಾವ ಚರಿತ್ರೆಯೂ ಹೇಳುವುದಿಲ್ಲ. ಯಾರಾದರೊಬ್ಬ ರಾಜಪುತ್ರಪ್ತಿಯಲ್ಲಿ ಹುಟ್ಟಿದವಳೆಂದು ಹೇಳುವುದಾದರೆ ರಜಪೂತ ರಮಣಿಯರ ಸೌಂದರ್ಯಸದ್ಮದಲ್ಲಿ ಹೆಚ್ಚಾಗಿ ವಾಸಿಸಿದವನು ಅಕೃರನೊಬ್ಬನು. ಮೇಲೆ ಹೇಳಿ ದಂತೆ ಕಾಲವು ಮೇಳೆಸದಾದುರಿಂದ ಇವನಾರಾದರೂ ಎರಡನೆಯ ಅಕ್ಷರವಿರ ಬಹುದೆ? ಹಾಗೆ ಹೇಳುವ ಚರಿತೆಯು ಇನ್ನೂ ಬರೆಯಲ್ಪಟ್ಟಿಲ್ಲ, ಏನಿಅಕ್ಷರಿ ಯನ್ನು ಬರೆದ ಅಬ್ದುಲ್ಫಸಲನು ಈ ವಿಚಾರವನ್ನು ಎಲ್ಲಿಯೂ ಹೇಳಿರುವುದಿಲ್ಲ. ಇದಂತಿರಲಿ. (ಫರದಾ' ವಿಚಾರವು ಅತ್ಯಂತ ಪ್ರಬಲವಾಗಿದ್ದ ಆ ಕಾಲದಲ್ಲಿ ಅಸರಿ ಚಿತ ಹಿಂದೂ ತರುಣನ ಎದುರಿನಲ್ಲಿ ಆ ಹುಡುಗಿಯು ಬಂದುದೆಂದು ಹೇಳುವು ದಾಗಲಿ ಅಥವಾ ಜಲಕುಂಭವನ್ನು ತಂದಳೆಂಬುದಾಗಲಿ, ರಾಜನು ಹಾಗೆ ಹೇಳಿದ ನೆಂಬುದಾಗಿ ಹೇಳುವುದು ತೃಪ್ತಿಕರವಾಗಿರಲಾರದು, ಹೇಳಿರುವುದು ಕೇವಲ ಮನೋರಂಜಕ ಹೊರ್ತು ಚಾರಿತ್ರಕದೃಷ್ಟಿಯಿಂದಲ್ಲವೆನಬೇಕಾಗುವುದು, ಮೂರನೆಯ ವಿಚಾರವು ಇದ್ದರೂ ಇರಬಹುದು, ಇರಕೂಡದೇಕೆ ? ಅದರ ವಿಚಾರವಾಗಿ ನಮಗೆ ತಿಳಿಯದು. ಪ್ರಾಣಾ ಭರಣ ಗ್ರಂಥದನಾಯಕನಿರಬಹುದೆ? ಹಾಗೆ ಹೇಳುವ ಚರಿತೆಗಳಾವುವು ? ನಾಲ್ಕು ಮತ್ತು ಐದನೆಯ ವಿಚಾರಗಳ ವಿಚಾರದಲ್ಲಿ ಹರದೀಕ್ಷಿತನು ಜಗ ಸ್ನಾಥನ ಕಾಲದವನೆನಲಾಗುವುದಿಲ್ಲ. ಹೇಳುವುದಾದರೆ ಸಮಂಜಸವಾಗದು. ಆರನೆಯದರಲ್ಲಿ ಹೇಳಿರುವಂತೆ ತನ್ನ ಶೇಷಾಯುಷ್ಯವನ್ನು ಕಳೆಯುವುದಕ್ಕಾಗಿ ಜಗನ್ನಾಥನು ಕಾಶಿಗೆ ಹೋಗಿರಬಹುದು. ಅಪ್ಪಯ್ಯ ದೀಕ್ಷಿತನೂ ಆ ವೇಳೆಗೆ