ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩ ಹರಣೆಗಳು ನಮ್ಮಲ್ಲಿ ಬೇಕಾದಷ್ಟಿವೆ. ಅಂಥ ಸಂದರ್ಭದಲ್ಲಿ ಗಂಡಸೇ ಅಂಗಾ ತನಾಗಿ ಮಲಗಿ ಯೇ ಮೇಲೆ ಮಲಗಿ ತನಗೆ ತೃಪ್ತಿಯಾಗುವಂತೆ ಸಂಭೋಗಿಸುವದರಿಂದ, ಯಾವ ತೊಂದರೆಯೂ ಆಗುವದಿಲ್ಲ. ಈ ಚಿಕಿತ್ಸೆ ಯಿಂದ ಗುಣಹೊಂದಿದ ಉದಾಹರಣೆಗಳು, ನಮ್ಮ ವೈದ್ಯ ಸಂಘದಲ್ಲಿರುವ ರೋಗಿ ಚರಿತ್ರ ಸಂಗ್ರಹದಲ್ಲಿ ಬೇಕಾದಷ್ಟು ಸಿಕ್ಕುತ್ತವೆ. ವೀರ್ಯಸ್ಕಲನ ವಾಗುವ ಮುಂಚೆಯ ಸಂಭೋಗದಿಂದ ದೂರಾಗುವದು. ಸಂಭೋಗವಾದ ಕೂಡಲೆ ಯೋನಿಯನ್ನು ತೊಳೆದುಕೊಳ್ಳುವದು. ಪುರುಷನ ಅಂಡ ಅಥವಾ ಆ೦ತ್ರವೃದ್ಧಿ ಮತ್ತು ಲಿಂಗದ ಮುಂದೊಗಲು ಬಹಳ ಸಂಕುಚಿತವಾಗಿರು ವದರಿಂದ ಸಂಭೋಗವನ್ನು ವೀರ್ಯಸ್ಟಲನವಾಗುವವರೆಗೆ ಮಾಡಲಾಗದಿರು ವದು. ಇವುಗಳೂ ಮಕ್ಕಳಾಗದಿರುವದಕ್ಕೆ ಕಾರಣವಾಗಬಹುದು. ಸ್ಪಷ್ಟವಾಗಿ ಹೇಳಬೇಕಾದರೆ ಗಂಡಸಿನಲ್ಲಿರುವ ಮೊದಲಿನ ಮೂರು ದೋಷಗಳೇ ಬಂಜೆತನಕ್ಕೆ ಅತ್ಯಂತ ಮುಖ್ಯ ಕಾರಣಗಳು. ಗಂಡಸಿನ ದೋಷದಿಂದಲೇ ಹೆಂಗಸಿಗೆ ಪ್ರದರ, ಪ್ರಮೇಹರೋಗಗಳು ಬರುತ್ತಿರುತ್ತವೆ. ಕೆಲವು ಹೆಂಗಸರಲ್ಲಿ ಗರ್ಭಾಶಯವೇ ಇರುವದಿಲ್ಲ. ಅಥವಾ ಅವರ ಡಿಂಭಾ ಶಯಗಳು ಒಣಗಿರುತ್ತವೆ. ಆದರೆ ಇಂಥ ಉದಾಹರಣೆಗಳು ಲಕ್ಷಕ್ಕೆ ಒಬ್ಬ ರಂತೆ ಸಿಕ್ಕುವದು ಕಷ್ಟ, ಬ೦ಜೆಯೆಂದು ಹೇಳಿಸಿಕೊಳ್ಳುವ ಹೆಂಗಸರ ಗಂಡಂದಿರಲ್ಲಿ ಮಾತ್ರ ನೂರಕ್ಕೆ ೯೫ ಜನರು ನಾವು ಮೇಲೆ ವರ್ಣಿಸಿದ ರೋಗಗಳಿಂದ ಖಂಡಿತ ನರಳುತ್ತಿರುತ್ತಾರೆ. ಆದರೆ ಮಕ್ಕಳಾಗದಿದ್ದ ಕೂಡಲೆ ಬಂಜೆತನವನ್ನು ಹೆಂಡಂದಿರಮೇಲೆ ಹೊರಿಸಿ, ತಮ್ಮ ರೋಗದ ಪ್ರಸಾದವನ್ನು ಇನ್ನೊಬ್ಬ ನಿರಪರಾಧಿ ಹೆಂಗಸಿಗೆ ಕೊಡಲಿಕ್ಕೆ ಹೊಸದಾಗಿ ಮದುವೆಯಾಗು ವರು. ನಮ್ಮ ಸಮಾಜದ ವಿವೇಕಶೂನ್ಯ ನೀತಿಗಳು ಇಂಥ ಮಾನವೀ ರಾಕ್ಷಸರನ್ನು ಸುರಕ್ಷಿತವಾಗಿ ಕಾಪಾಡುವವು. ತಾವು ಪುನ್ಮಾನ ನರಕ ದಿಂದ ಪಾರಾಗುವ ನೆವದಿಂದ ತಮ್ಮ ಹೆಂಡಂದಿರನ್ನು, ಆ ಮರಣವೂ ನರಕ ಕ್ಕಿಂತ ಕಡೆಯಾದ ಜೀವನಕ್ಕೆ ದೂಡುವರು. ಆದ್ದರಿ೦ದ ವಿವೇಕಕ್ಕೆ ಮಾನ ಕೊಡಬೇಕನ್ನುವವರು, ನಿಜವಾದ ಧರ್ಮ, ದೇಶೋದ್ಯಾರವನ್ನ ಪೇಕ್ಷಿಸು ವವರು, ಮೇಲೆ ಹೇಳಿದ ನೀಚ ಆಚಾರಗಳನ್ನು ನಮ್ಮ ಸಮಾಜದಿಂದ ಹೊರಗೆ ತಳ್ಳಲಿಕ್ಕೆ ಸೊಂಟಕಟ್ಟಬೇಕು.