________________
೨೫ ಸಂದೇಹವಿಲ್ಲ. ಇನ್ನು ಮುಷ್ಟಿಮೈಥುನಾದಿಗಳಿಂದ ಬಂದ ನಪುಂಸಕತೆಗೆ,, ಆ ಅಭ್ಯಾಸವನ್ನು ಬಿಟ್ಟು ಬಿಡುವದು ಮೊದಲನೆ ಔಷಧ. ಅಂಥವರು ಮದುವೆಯಾಗಿರದಿದ್ದರೆ, ತಮ್ಮಲ್ಲಿ ಪುನಃ ಪು೦ಸ್ಯವು ಬರುವವರೆಗೆ ಮದುವೆಯಾಗಬಾರದು. ಮದುವೆಯಾದವರು, ಯೋಗ್ಯವಾದ ಬ್ರಹ್ಮ ಚರ್ಯೆಯನ್ನು ಆಚರಿಸಬೇಕು. ಇಡೀ ಶರೀರಕ್ಕೆ ಬಲವನ್ನು ಕೊಡುವ ಆಹಾರ, ವಿಹಾರ, ವ್ಯಾಯಾಮಗಳನ್ನು ಕೈಗೊಳ್ಳಬೇಕು. ಅವಶ್ಯವಿದ್ದರೆ ಕೆಲವುದಿನ ಔಷಧಗಳನ್ನು ಯೋಗ್ಯವೈದ್ಯರಿಂದ ತೆಗೆದುಕೊಳ್ಳಬೇಕು, (ಪುಸ್ತಕದ ಕೊನೆಯ ಭಾಗದಲ್ಲಿ ನೋಡಿರಿ), ಅಲ್ಲದೆ ಹಿಂದೆ ಕೃತ್ರಿಮ ಮೈಥುನ ಮತ್ತು ಸ್ವಪ್ನ ಸ್ವಲನಗಳಿಗೆ ಹೇಳಿದ ಆಹಾರವಿಹಾರ ನಿಯಮ ಗಳನ್ನು ತಪ್ಪದೆ ಅನುಸರಿಸಿದರೆ ನಪುಂಸಕರು ಖಂಡಿತ ಗುಣಹೊಂದುವದ ರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ ಮನದಲ್ಲಿ ಧೈರ್ಯವನ್ನು ತಂದುಕೊಂಡು, ತಮ್ಮ ರೋಗವು ನಿಶ್ಚಯವಾಗಿ ಗುಣಹೊ೦ದುವದೆಂದು ನಂಬಿ ಪ್ರಯತ್ನಿಸು ವದರಿಂದ ಬಹಳ ಒಳ್ಳೆಯ ಪರಿಣಾಮವಾಗುವದು. ೧೪ ನೇ ಪ್ರಶ್ನೆ :-ಲಿಂಗವು ತನ್ನಷ್ಟಕ್ಕೆ ತಾನೆ ಉದ್ರೇಕ ನಾಗುವದು ಸಹಜವಾದ ಕಾಮದ ಚಿಹ್ನವಲ್ಲವೇ ? ಲಿಂಗೋದ್ರೇ ಕವು ಸಂಭೋಗವನ್ನು ಕೈಕೊಳ್ಳುವದಕ್ಕೆ ಸೂಚನೆಯಲ್ಲವೋ ? ಉತ್ತರ:-ಲಿಂಗೋದ್ರೇಕಕ್ಕೆ ಕಾರಣಗಳು-(೧) ಮೂತ್ರಾಶಯವು. (Blacter) ಮೂತ್ರದಿಂದ ತುಂಬಿರುವದು. (೨) ಮಲಬದ್ಧತೆಯಿಂದ ತುಂಬಿದ ಕರಳುಗಳ ಭಾರವು ವೀರ್ಯಾಶಯದಮೇಲೆ ಬೀಳುವದು. (೩) ಕರಳುಗಳಲ್ಲಿ ಸಣ್ಣ ಕ್ರಿಮಿಗಳಾದರೆ ಅವುಗಳ ಕೆರಳುವಿಕೆಯಿಂದ ಕಾಮ ಕೇಂದ್ರದ ನರೋದ್ರೇಕವಾಗುವದು. (೪) ಅಸ್ತವ್ಯಸ್ತವಾಗಿ ಮಲಗುವದ ರಿಂದ ಲಿಂಗವು ಕೃತ್ರಿಮವಾಗಿ ಚಲಿಸಿ ಉದ್ರೇಕವಾಗುವದು. (೫): ವೀರ್ಯಾ ಶಯವು ತುಂಬುವದರಿಂದಲೂ ಲಿಂಗವು ಉದ್ರೇಕವಾಗುವದು. ಆದರೆ ಅದು ಕೇವಲ ನಿದ್ರೆಯಲ್ಲಿ ಮಾತ್ರ ಆಗುವದು. ಅಷ್ಟೇ ಅಲ್ಲ, ಕಾಮವು ಹುಟ್ಟಿದಾಗಲೂ ಸಾಮಾನ್ಯವಿಲ್ಲದೆ ಲಿಂಗೋದ್ರೇಕವಾಗಬಾರದು ಎಂದು ಹಿಂದೆ ಹೇಳಿದೆ. ಆದ್ದರಿಂದ ಲಿಂಗೋ