________________
೧೯ ಅವರು ದೂರ ಕೂತರೆ ರೋಗಿಗಳ ಅವಸ್ಥೆ ಏನಾದೀತು ? ರೋಗದ ಕಾರಣ ವನ್ನು ತಿಳಿದು ಅದಕ್ಕೆ ತಕ್ಕ ಸ್ವಚ್ಛತೆಯನ್ನೂ ಅವರು ಬಲ್ಲರಾದ್ದರಿಂದ ಅವರಿಗೆ ರೋಗವಂಟುವದಿಲ್ಲ. ಇಷ್ಟೆಲ್ಲ ವಾದವು ಮುಟ್ಟೆ೦ಬುದು ಒ೦ದು ರೋಗವೆಂದು ತಿಳಿದದ್ದಕ್ಕೆ, ಆದರೆ ಅದು ರೋಗವಲ್ಲ. ಅಲ್ಲದೆ ಅದರ ಕಾರ ಣವನ್ನೂ ನಾವು ತಿಳಿದಿದ್ದೇವೆ. ಅದಕ್ಕೆ ತಕ್ಕ ಸ್ವಚ್ಛತೆಯನ್ನು ಕೈಕೊಂಡ ಮೇಲೆ ಮಡಿ-ಮೈಲಿಗೆಗಳ ಹೆಸರಾದರೂ ಏಕೆ ಬರಬೇಕು ? ದಿನಾಲು ಮಲ ಮೂತ್ರಗಳನ್ನು ವಿಸರ್ಜಿಸುವವರನ್ನು ಹೊರಗೆ ಇಟ್ಟರೆ ಯಾರಾದರೂ ನಮಗೆ ತಲೆಕೆಟ್ಟಿದೆಯೆಂದು ಹೇಳದಿರಲಾರರು. ಮಲಮೂತ್ರಗಳನ್ನು ವಿಸ ರ್ಜೆ ಸಿದಮೇಲೆ ಗುದಲಿಂಗಗಳನ್ನು ತೊಳೆದು ಬಿಟ್ಟರೆ ಶುದ್ಧಿಯಾಯಿತು. ಹಾಗೆಯೇ ಸ್ವಚ್ಛವಾದ ಲಂಗೋಟಿಗಳನ್ನು ಕಟ್ಟಿಕೊಂಡು, ಮೇಲಿಂದ ಮೇಲೆ ಯೋನಿಯನ್ನು ತೊಳೆಯುತ್ತಿದ್ದರೆ, ಮುಗೂ-ಮೈಲಿಗೆಗೂ ಸಂಬಂಧವೆಲ್ಲಿಂದ ಬಂತು ? ಮಲಮೂತ್ರಗಳು ಕ್ಷಣಕ್ಷಣಕ್ಕೂ ತಯಾರಾಗಿ ದೇಹದ ಆಯಾಅ೦ಗಗಳಲ್ಲಿ ಸಂಗ್ರಹವಾಗುತ್ತಿರುತ್ತವೆ. ಆ ಸಂಗ್ರಹವೇ ಆಶುದ್ದವೆಂದು ಕಲ್ಪನೆಯಿದ್ದರೆ, ಶುದ್ದಿಗಾಗಿ ದೇಹವನ್ನೇ ಸುಟ್ಟು ಬಿಡಬೇ ಕಾದೀತು. ಹಾಗೆಯೇ ಗರ್ಭಾಶಯದಲ್ಲಿರುವ ರಜಸ್ಸು ಯೋನಿಮಾರ್ಗದಿಂದ ಹೊರಗೆ ಬರುವರೆಗೆ ಅದು ಅಶುದ್ಧ ಹೇಗೆ ಆಯಿತು ? ದೇಹದೊಳಗಿನ ಸ್ರಾವ (Scrction) ಗಳಲ್ಲ, ದೇಹದ ಹೊರಗೆ ಬರುವವರೆಗೆ ಇಹ್ಮಲವಾಗ ಲಾರದು, ಹೊರಗೆ ಬಂದಮೇಲೆ ಅದು ಬರುವ ದ್ವಾರಕ್ಕನುಸರಿಸಿ, ಮಲ, ಮೂತ್ರ, ಉಗುಳು, ಸಿಂಬಳ ಎಂದು ಹೆಸರು ಬರುವದು. ಮೂಗಿನಲ್ಲಿರುವ ಸಿ೦ಬಳವನ್ನು ಒಳಗಿಂದೊಳಗೇ ಬಾಯಲ್ಲಿ ಎಳೆ ಕೊ೦ಡು, ಸ್ವಲ್ಪವೂ ಅಸಹ್ಯ ವಿಲ್ಲದೆ, ನುಂಗುತ್ತಿರುವದನ್ನು ನಾವು ನೋಡುವದಿಲ್ಲವೋ ? ಉಗುಳಿಗೆ CC ಅಧರಾಮೃತ ಎಂಬ ಪವಿತ್ರನಾಮವನ್ನಿಟ್ಟು : ಕಾಮಕಲಾಧುರೀಣರು ಮದೋನ್ಮತರಾಗಿ ಪಾನಮಾಡುವದಿಲ್ಲವೋ ? ಇದಕ್ಕೆಲ್ಲ ಮೈಲಿಗೆಯಿಲ್ಲ. ಗಂಡಸರೂ ಮುಟ್ಟಾಗುವ ಸಂದರ್ಭವೇನಾದರೂ ಇದ್ದರೆ ಈ ಮುಟ್ಟಿನ ಮೈಲಿಗೆಯು ಯಾವಾಗಲೋ ಹಾರಿಹೋಗುತ್ತಿತ್ತು, ಹೀಗೆಯೇ ಮುಟ್ಟಿಬ ದು ಮೈಲಿಗೆಯಲ್ಲ ಎಂಬುದನ್ನು ಸಾಧಿಸಲು ಬೇಕಾದಷ್ಟು ಶಾಸ್ಸಿಯ ವಿವೇಚನೆಯನ್ನು ಕೊಡುತ್ತ ಹೋಗಬಹುದು.