ಈ ಪುಟವನ್ನು ಪ್ರಕಟಿಸಲಾಗಿದೆ
ಅರಿಕೆ
ವಾಸುದೇವಾಚಾರ್ಯರು ಆಗೀಗ ತಮ್ಮ ' ಸಚಿತ್ರ ಭಾರತ ' ದಲ್ಲಿ ಈ ಕತೆಗಳನ್ನು ಬರೆದು ಪ್ರಕಟಿಸಿದರು, 'ಸಂಪೂರ್ಣಕಥೆ' ಎಂದು ಇವಕ್ಕೆ ಅವರೇ ನಾಮಕರಣ ಮಾಡಿದರು. ಅವುಗಳಲ್ಲಿ ಕಾಲ್ಪನಿಕ ಮತ್ತು ಐತಿಹಾಸಿಕ ಕಥೆಗಳದೊಂದು, ಚಾರಿತ್ರಿಕ ಕಥಗಳದೊಂದು, ಪತ್ತೇದಾರಿ-ಕಥೆಗಳದೊಂದು, ಸಾಮಾಜಿಕ ಕಥೆಗಳದೊಂದು ಹೀಗೆ ಬೇರೆ ಬೇರೆ ಸಂಕಲನಗಳನ್ನು ಮಾಡಿ, ಪ್ರತಿಯೊಂದು ಸಂಕಲನಕ್ಕೂ ಬೇರೆ ಬೇರೆ ಹೆಸರಿಟ್ಟು ಪ್ರಕಟಿಸಲಾಗಿದೆ. 'ಪ್ರೇಮ ವಿಜಯ' ಅವುಗಳಲ್ಲಿಯ ಮೊದಲನೆಯ ಸಂಕಲನ. 'ಬೆಳಗಿದ ದೀಪಗಳು' ಎರಡನೆಯದು. 'ತೊಳೆದ ಮುತ್ತು'ಮತ್ತು ಮೂರನೆಯದು. 'ಬೆಳ್ಳಿ ಚಿಕ್ಕೆ' ನಾಲ್ಕನೆಯದು.
ಏಕಸಮಯದಲ್ಲಿ ಈ ಗ್ರಂಥಗಳು ವಾಸುದೇವ ಸಾಹಿತ್ಯರತ್ನ ಮಾಲೆಯಲ್ಲಿ ಪ್ರಕಟವಾಗಿಯೂ, ಮನೋಹರ ಗ್ರಂಥಮಾಲೆಯಲ್ಲಿಯ ಗ್ರಾಹಕರಿಗೂ ದೊರೆಯುವಂತಾದುದು, ಮತ್ತು ಅದಕ್ಕೆ ಅನುಕೂಲ ಮಾಡಿಕೊಟ್ಟುದು ಶ್ರೀ ಧೀರೇಂದ್ರ ವಾ. ಕರೂರ ಅವರ ಸಹಕಾರ ಸಹಾಯದಿಂದ ಎಂಬದನ್ನು ಬೇರೆ ಹೇಳಬೇಕಾಗಿಲ್ಲ. ಆದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ
- ಜಿ, ಜೋಶಿ.