ಪ್ರಕಾಶಕರ ಮಾತು
ನಾನು ಮನೋಹರ ಗ್ರಂಥಮಾಲೆಯ ಸಂಪಾದಕರಾದ ಶ್ರೀ ಜಿ ಬಿ. ಜೋಶಿಯವರ ಸಹಾಯದಿಂದ ದಿವಂಗತ ಕೆರೂರ ವಾಸುದೇವಾಚಾರ್ಯರು ಬರೆದ ಸಾಹಿತ್ಯವನ್ನೆಲ್ಲ ಒಂದು ಕ್ರಮಬದ್ದವಾದ ರೀತಿಯಲ್ಲಿ ಪುಸ್ತಕರೂಪವಾಗಿ ಪ್ರಕಟಿಸಬೇಕೆಂದೆಣಿಸಿ ಈ ವಾಸುದೇವ ಸಾಹಿತ್ಯರತ್ನ ಮಾಲೆಯನ್ನು ಪ್ರಾರಂಭಿಸಿದ್ದೇನೆ ಹನ್ನೆರಡು ಸಾಮಾಜಿಕ ಕಥೆಗಳ ಸಂಕಲನವಾದ "ತೋಳದ ಮುತ್ತಿ" ನೊಡನೆ ಬೇರೆಯಾಗಿ ಪ್ರಕಟಿಸಬೇಕೆಂದಿದ್ದ ಮೂರು ಪತ್ತೇದಾರಿ ಕಧೆಗಳು ಕೂಡಿದ "ಬೆಳ್ಳಿ ಚಿಕ್ಕೆ"ಯೂ ಕೂಡಿದ ಈ ಗ್ರಂಥವು ಆ ಮಾಲೆಯಲ್ಲಿಯ ಏಳನೆಯು ರತ್ನವಾಗಿದೆ.
ನಂಜನಗೂಡಿನ ಸತಿಹಿತೈಷಿಣೀ ಗ್ರಂಥಮಾಲೆಯ ಸಂಪಾಪಿಕೆಯರಾದ ಶ್ರೀಮತಿ ತಿರುಮಲಾಂಬಾ ಅವರು ದಿವಂಗತ ವಾಸುದೇವಾಚಾರ್ಯರ ಮೇಲಿನ ತಮ್ಮ ಗೌರವದಿಂದ ತಮ್ಮಲ್ಲಿದ್ದ : ಸಚಿತ್ರ ಭಾರತ 'ದ ಮೊದಲ ಸಂಪುಟವನ್ನು ಸಮಯಕ್ಕೆ ಒದಗಿಸಿಕೊಟ್ಟು ಸಹಾಯ ಮಾಡಿದ್ದಾರೆ ; ಅದಕ್ಕಾಗಿ ನಾನು ಅವರಿಗೆ ಉಪಕೃತನಾಗಿದ್ದೇನೆ ಅಲ್ಲದೆ ಈ ಮೊದಲೆ ಸಚಿತ್ರ ಭಾರತದ ಮೂರೂ ಸಂಪುಟಗಳನ್ನು ಕೊಟ್ಟು ಗ್ರ೦ಧಪ್ರಕಟನೆಗೆ ಸಹಾಯ ಮಾಡಿದ ಹುಬ್ಬಳ್ಳಿಯ ಶ್ರೀ ಸರಸ್ವತಿ ವಿದ್ಯಾರಣ್ಯ ವಾಚನಾಲಯದ ಸಂಚಾಲಕರಿಗೂ ಮೂರನೆಯ ಸಂಪುಟವೊಂದನ್ನು ಕೊಟ್ಟ ಶ್ರೀ ಮಂಗಳವೆ, ಶ್ರೀನಿವಾಸರಾಯರಿಗೂ ನಾನು ಋಣಿಯಾಗಿದ್ದೇನೆ.