ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

8

ಇನ್ನು 'ಹೂಬಿಸಿಲ' ನ್ನು ಜಗತ್ತಿನಲ್ಲೆಲ್ಲ ಹರಡಲು ಬಯಸಿದ ನನ್ನ ಪತಿಯವರಲ್ಲಿ ನಾನಾ ರೀತಿಯಲ್ಲಿ ನನ್ನ ಕೃತಜ್ಞತೆಯನ್ನು ಸೂಚಿಸಲಿ?

ಎಲ್ಲ ಕತೆಗಳೂ ಸುತ್ತುಮುತ್ತಲೂ ನಾನು ಕಂಡುವುಗಳೇ. ಆದರೆ 'ಮಹಾಶಿವರಾತ್ರಿ'ಯೊಳಗಿನ ಗೊವಿಂದನ ಕತೆ ಪ್ರತ್ಯಕ್ಷ ನನ್ನ ತಮ್ಮನದು. ಆತನು ತೀರಿ ಹೊಗಿ ನಾಲ್ಕು ತಿಂಗಳಾಯಿತು. ಅದು ಕತೆಯಲ್ಲ-ನನ್ನ ದುಃಖಶಮನವನ್ನು ಕ್ಷಣಮಾತ್ರವಾಗಿಯಾದರೂ ಮಾಡಿಕೊಳ್ಳಲೆಂದು, ವಾಚಕರೆದುರು ತೋಡಿಕೊಂಡ ಅಂತರಂಗದ ಅಲ್ಲೋಲಕಲ್ಲೋಲ !!

ತಮ್ಮ ಅಧಿಕಾರವಾಣಿಯಿಂದ ಮುನ್ನುಡಿ ಬರೆದು ಆಶೀರ್ವದಿಸಿದ ಅಣ್ಣಂದಿರಾದ ಬೆಟಗೇರಿಯವರಿಗೆ ನನ್ನ ವಂದನೆಗಳು.

––ಶ್ಯಾಮಲೆ
೨೬-೧೨-೩೬