ಪುಟ:ಕವಿಯ ಸೋಲು.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕವಿಯ ಸೋಲು

ಕವಿ ರಾ.- ಅಹಹಾ! ನೆನಪಾಯ್ತು! ಬಂದಿರುವನಾರೆಂದು

ಅರಿವಾಯು, ಭಾಗ್ಯದೇವತೆ ನೀನು ಬಂದಿರುವೆ
ದಯವಿಟ್ಟು ಬಾರಯ್ಯ,

ಘೂ, ರಾ.~ ಇವಗೆಷ್ಟು ಸಂತೋಷ !

ಪಾಪಕಾರವ ಮಾಡಿ ನಲಿಯುತಿಹ ರಾಕ್ಷಸನು !

ಕವಿ ರಾ.- ಈ ಕವಿಯ ಮಂದಿರವ ಪಾವನವ ಮಾಡಯ್ಯ.

ಘೂ, ರಾ.~ ಕವಿರಾಜ ! ಭಾಪುರೇ!

ಕವಿ ರಾ.-ಎನ್ನ ದೊರೆ ಚಿತ್ರವಿಸು,

ನಿನ್ನ ಸುಡಿ ದಿಟವಕ್ಕೆ ಚಿತ್ರವಿಸು, ಅವರಲ್ಲಿ
ಕುಳಿತಿರಲು ಕಂಡಂತೆ ಆಡಿದೆನು. ನಿಮಗೇಕೆ
ಕೋಪವೆಂಬುದನರಿಯೆ ಅಪಮಾನವೇನಾಯ್ಯೋ
ನಾನರಿಯೆ,


ಘೂ, ರಾ- ಹಸುಗೂಸು ! ನೀನರಿಯೆ! ಎಂತರಿವೆ!

ಕಿವಿಯಲ್ಲಿ ಕೇಳಿದೆವು ಮನದಲ್ಲಿ ಕೊರಗಿದವು
ಬೆಳಕು ಕಂಡಂತೆ ಸಂಕಟವಾಯು, ಬಸಿರೆಲ್ಲ
ಕುದಿಯಾಯ್ತು.

ಕವಿ ರಾ.- ಕಂಡಂತೆ ಆಡಿದರೆ ತಪ್ಪಾಯೆ?

ಘೂ. ರಾ.- ಕಂಡಂತೆ ಆಡಿದೆಯ? ಸಟೆಯ ಹೇಳುವೆಯೆ?

ಕವಿಯೆಂಬ ಹುಚ್ಚಿನಲಿ ಬಂದಂತೆ ಆಡುವುದೆ?
ಅವರಂತೆ ನಮಗೇನು ನರೆತ ಹುಬ್ಬುಗಳಿವೆಯೆ ?
ಅವರಂತೆ ಕಣ್ಣುಗಳು ಪಾತಾಳಕಿಳಿದಿವೆಯೆ ?
ಅವರಂತೆ ಗೂನುಬೆನ್ನಲಿ ಕುಳಿತು ಮಡಕೆಯಲಿ
ಕಲ್ಲನಾಡಿಸುವಂತೆ ಮಾತನೇನಾಡುವೆವೆ?

೮೯