ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIV, ಪರ ಲೋಕ ಯಾತ್ರ ೧೩೩ ಹುಟ್ಟಿದ್ದಿತು. ಅದಕ್ಕೆ ಉಸಾಮನೆಂಬ ತರುಣನೊಬ್ಬನನ್ನು ಸೇನಾ ಪತಿಯನ್ನಾಗಿ ನಿಯಮಿಸಿ ಅಬೂ ಬಕರ, ಓಮರ ಮುಂತಾದ ಗೌರ ವಸ್ಥರಾದ ಅನುಭವಶಾಲಿಗಳೆಲ್ಲರೂ ಆ ಯುವಕನ ಆಜ್ಞಾಧಾರಕರಾಗಿ ಸಾಮಾನ್ಯ ಸೈನಿಕರಂತೆ ವಿಜಯ ಯಾತ್ರೆ ಹೊರಡಲು ಮಹಮ್ಮದನ ಆಜ್ಞೆಯಾಗಿದ್ದಿತು. ಮಹಮ್ಮದನು, ಅನುಭವಸ್ಥರಾದ ವೀರಾಗುಣಿ ಗಳು ಕೂಡ ಉತ್ಸಾಹಶಾಲಿಯಾದ ಚಿಕ್ಕ ವಯಸ್ಸಿನ ಉಸಾಮನೊಡನೆ ಸಾಮಾನ್ಯ ಸೈನಿಕರಂತೆ ಹೋಗಬೇಕೆಂದು ಅಪ್ಪಣೆಮಾಡಿದುದು ಧರ್ಮದ ಮುಂದೆ ಎಲ್ಲರೂ ಸಮಾನರೆಂಬ ತತ್ತ್ವವನ್ನು ಕಾರ್ಯಕ್ಷೇತ್ರ ದಲ್ಲಿ ಬೆಳಗಿಸುವುದಕ್ಕಾಗಿಯೇ, ಸ್ವಾಮಿ ಭಕ್ತರಾದ ಆ ವೀರ ಶ್ರೇಷ್ಠರು ತಮ್ಮ ಗುರುವಿನ ಹೃದಯವನ್ನರಿತಿದ್ದುದರಿಂದ ಲೇಶ ಮಾತ್ರವೂ ಅಸಮಾಧಾನ ಪಡದೆ ಮೊದಲಣ ಉತ್ಸಾಹದಿಂದಲೇ ವಿಜಯ ಯಾತ್ರೆಗೆ ಸಿದ್ಧರಾದರು. ತಾನು ರೋಗದಿಂದ ನರಳುತ್ತಿದ್ದರೂ ಮಹಮ್ಮದನು ಯುವಕ ದಳಪತಿಯ ಕೈಗೆ ತನ್ನ ಕೈಯಿಂದಲೇ ಧ್ವಜ ಪತಾಕೆಗಳ ನೈ ಪ್ಪಿಸಿ ಹರಸಿ ಕಳುಹಿಸಿದನು. ಸೈನ್ಯವು ಪ್ರಯಾಣ ಹೊರಡುವಷ್ಟ ರಲ್ಲಿಯೇ ಮಹಮ್ಮದನ ರೋಗವು ಹೆಚ್ಚಿದುದರಿಂದ, ಆ ವಿಜಯ ಯಾತ್ರೆ) ಯನ್ನು ಅಷ್ಟಕ್ಕೇ ನಿಲ್ಲಿಸಬೇಕಾಯಿತು. ರೋಗವು ದಿನೇ ದಿನೇ ಪುಬಲಿ ಸುತ್ತ ಬಂದರೂ ಮಸೀದಿಗೆ ಹೋಗಿ ತನ್ನ ಶಿಷ್ಯರೊಡನೆ ಭಗವಂತನ ಪ್ರಾರ್ಥನೆ ಮಾಡುವ ಆಸೆಯು ಮಹಮ್ಮದನನ್ನು ಬಿಡಲೊಲ್ಲದು. ಆದ ಕಾರಣ, ಮಹಮ್ಮದನು ಮಸೀದಿಗೆ ಹತ್ತಿರದಲ್ಲಿದ್ದ ಒಂದು ಮನೆಯನ್ನು ತನ್ನ ವಾಸಕ್ಕಾಗಿ ಗೊತ್ತುಮಾಡಿಕೊಂಡು ಅಲ್ಲಿಯೇ ನಿಂತನು. ಅಯಷೆಯು ಕೇವಲ ಭಕ್ತಿಯಿಂದ ಪ್ರತಿ ಶುಕ್ರೂಷೆ ಮಾಡಿ ಅವನನ್ನು ಉಪಚರಿಸುತ್ತಿದ್ದಳು. ದೇಹದಲ್ಲಿ ತ್ರಾಣವಿರುವ ವರೆಗೂ ಮುಹಮ್ಮದನು ಮಸೀದಿಗೆ ಹೋಗಿಬರುತ್ತಿದ್ದನು. ಒಂದು ದಿನ ಜ್ವರದ ಆವೇಗದಿಂದ ಮಹಮ್ಮದನಿಗೆ ತೀರ ನಿತ್ರಾಣವಾಯಿತು. ಅಂತಹ ಸ್ಥಿತಿಯಲ್ಲಿಯೂ ಅವನು ತಲೆಗೆ ಒದ್ದೆಯ ಬಟ್ಟೆಯನ್ನು ಬಿಗಿದುಕೊಂಡು ನಮಾಜು ಮಾಡಲು ಮಸೀದಿಗೆ ಹೋದನು ; ಅದೇ ಕೊನೆಯ ದಿನ, ಪ್ರಾರ್ಥನೆಯು ಮುಗಿದನಂತರ ಮಹಮ್ಮದನು ಒಂದು ಸಣ್ಣ ಭಾಷಣವನ್ನು ಮಾಡಿ