ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

$6 ( ಬಾಲೆ ನಿನ್ನಯ ತಮ್ಮನೆಲ್ಲಿ? ಮುಗಿದುದಾ ನರಿಯಳು ಹಿಂದೆ, ಬೊಗಳಿ ಮಗಿದುವು ನಾಯಿ ಮುಂದೆ; ಮುಗಿಯದಿರುಳಿರುಳುದ್ದವೊಂದೆ ಕಣ್ಮುಗಿಯದೀ ಯೋಚನೆ ಮುಂದುಗಾಣವ ಮನದ ಚಿಂತೆ ಯಿಂದ ಮೊಳಗುವ ಭೀತಿಗಿಂತ ನಾಳಿನಾಸೆಯಳಂಬೆಯಂತೆ ಅದುರುವೆದೆಯಲಿ ಮೊಳೆವುದು ಕರುವಳಿದ ತುರುಗೆಡ್ನಲಂತೆ ತೊರೆಯೆ ಕಂಗಳಿನೆದೆಯ ಚಿಂತೆ, ಚಾಪೆ ಚಾಡಿಯ ನುಡಿಯದಂತೆ ತಾಯ ಮುನ್ನಮೆ ಮಡಚುವೆ. ಕೋಳಿ ಕೆಲೆವುದೆ, ತಾಯ ಜತೆಯಿಂ ಕೆಲಸದಲಿ ಬಳಸಿದಡೆ ಮತಿಯಂ, ಮೂಗುತಿಯ ಕಳಕೊಂಡ ಸತಿಯಂ ತದಯ ಮರುಕಂ ಮರೆವುದೆ ? ಸಾಲೆಗಯ್ದ ಲು ಕಾಲು ಬಾರದು, ಮನಸು ಮನೆಯಲ್ಲಿ ನಿಲ್ಲಲಾರದು, ಕಣ್ಣು ನೆನವಂ ಬಿಟ್ಟು ಕೊರದು, ಏನೆಸಗಲುಂ ತೋರದು. ತಾಯಿ ತಿಎಕ್ಕಡಿ ನೆರಸುತನ್ನ ನೊಂದು ಬಾಗಲಲಿರಿಸಿದನ್ನ, ದಾಯ ತಪ್ಪುತ ಕವಡಿಯನ್ನ ನಡಸುವೆನ್ನ ನಗಾಡರೆ ? 3 “ಎಕ್ಕಡಿ' ಎಂದರೆ ಕವಡಿಗಳಿಂದ ಆಡುವ ಒಂದು ಬಗೆಯ ಆಟದಮಣೆ, ಅದರಲ್ಲಿ ನಾಲ್ಕು ಕಳಗಳಿವೆ, ಅವಕ್ಕೆ ನಾಲ್ಕು ಬಗಲುಗಳೆನ್ನುವರು