ವಿಷಯಕ್ಕೆ ಹೋಗು

ಪುಟ:ಮುಡಿ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
4
ಮುಡಿ


ಅರಿಕೆ - ನೆನವರಿಕೆ



ಯಕ್ಷಗಾನ ಕಲೆಗೆ ಸಂಬಂಧಿಸಿ, ವಿವಿಧ ಸಂದರ್ಭಗಳಿಗಾಗಿ ಬರೆದ ಇಪ್ಪತ್ತನಾಲ್ಕು ಲೇಖನಗಳ ಸಂಕಲನವಿದು. ಇದರಲ್ಲಿ ಸಂಶೋಧನೆ, ಕಲಾತತ್ವ ವಿಚಾರ, ಯಕ್ಷಗಾನದ ವಿವಿಧ ಅಂಶಗಳ ವಿವೇಚನೆ, ಯಕ್ಷಗಾನ ರಂಗಭೂಮಿಯ ಸ್ಥಿತಿಗತಿ ಕುರಿತ ಲೇಖನಗಳು ಮತ್ತು ಕೆಲವು ಸಾಂದರ್ಭಿಕ ಟಿಪ್ಪಣಿಗಳಿವೆ.

ವಿಸ್ತಾರವೂ ಬಹುಮುಖಿಯೂ ಆಗಿ ಬೆಳೆಯುತ್ತಿರುವ ಒಂದು ಸಂಸ್ಕೃತಿ ಪ್ರಕಾರ - ಯಕ್ಷಗಾನ, ಕಲೆಯ ಗುರುತನ್ನೂ, ಚಲನಶೀಲತೆಯನ್ನೂ ಹೊಂದಿಸಿಕೊಂಡು ಮುಂದುವರಿಯುವ ಸಮತೋಲವು ಯಕ್ಷಗಾನದಂತಹ ಕಲಾಸಾಹಿತ್ಯ ಪ್ರಕಾರಗಳ ಮುಂದೆ ಇರುವ ಮುಖ್ಯವಾದ ವಿಚಾರವೆಂಬುದು ನನ್ನ ಎಣಿಕೆ. ಆದುದರಿಂದಲೇ, ನನ್ನ ಈ ಬರಹಗಳು ಕೆಲವರಿಗೆ ಸಂಪ್ರದಾಯವಾದಿ ನಿಲುವಿನವುಗಳಾಗಿಯೂ, ಕೆಲವರಿಗೆ ಸುಧಾರಣಾವಾದಿಯಾಗಿಯೂ ಕಾಣುವುದು ಸಹಜ. ಇವೆರಡೂ ಆಗಿ ಕಂಡರೆ, ನನ್ನ ಶ್ರಮ ಸಾರ್ಥಕವಾದಂತೆಯೇ.
ಮುಡಿ ಎಂದರೆ ಕಿರೀಟ, ತುರುಬು, ಸಂಗ್ರಹ, ಧಾನ್ಯಗಳ ಕಟ್ಟಿದ ಗಂಟು, ತಲೆಯಲ್ಲಿ ಅಲಂಕಾರವಾಗಿ ಧರಿಸು - ಮೊದಲಾದ ಅರ್ಥಗಳಿವೆ. ಯಕ್ಷಗಾನ ಪರಿಭಾಷೆಯಲ್ಲೂ ಈ ಪದ ಇದೆ. ಹಾಗಾಗಿ ಈ ಸಂಕಲನಕ್ಕೆ ಮುಡಿ ಎಂಬ ಹೆಸರಿಟ್ಟಿದೆ.

● ಡಾ. ಎಂ. ಪ್ರಭಾಕರ ಜೋಶಿ