೧೩೬ / ಜಾಗರ
ತ್ತದೆ. ಹಲವೆಡೆ ವಾಲಿ-ರಾಮರ ಹಾಗೂ ಭೀಷ್ಮ ಕೌರವರ ಸಂಭಾಷಣೆಗಳು ಇದಕ್ಕೆ
ಉದಾಹರಣೆಗಳಾಗಿ ಕಂಡಿವೆ.
ಹಿಂದೆ ತಾಳಮದ್ದಳೆಗಳಲ್ಲಿ ಶುಷ್ಕವಾದಗಳೇ ಮುಖ್ಯವಾಗಿದ್ದುವಂತೆ.
ವಂಶಾವಳಿ, ಶಸ್ತ್ರಾಸ್ತ್ರಗಳ ವರ್ಣನೆ ಹೆಂಡಿರು-ಮಕ್ಕಳ ಸಂಖ್ಯಾವಿವರ, ಧ್ವಜ, ರಥ
ಹಾಗೂ ಸೈನ್ಯ ಸಂಖ್ಯೆ ಮುಂತಾದುವುಗಳ ಬಗ್ಗೆ ವಾದಗಳಾಗುತ್ತಿದ್ದುವಂತೆ. ಅದರ ನಂತರ
ಪರಿಸ್ಥಿತಿ ತಿ ಬದಲಾಗಿ, ತಾತ್ವಿಕ, ವಿಚಾರ ಪ್ರಧಾನ ಚರ್ಚೆಗಳೂ, ಸಾಹಿತ್ಯವೂ,
ಮಾತಿನ ಚಮತ್ಕಾರವೂ, ಕಾವ್ಯ ಸೌಂದರ್ಯವೂ ಕಾಣಿಸಿಕೊಂಡವು.
ಆದರೆ ಇತ್ತೀಚಿನ ವರ್ಷಗಳಲ್ಲಿ ಇನ್ನೊಂದು 'ಅತಿ' ಕಾಣಿಸಿಕೊಂಡಿತು.
ವೈಚಾರಿಕ ಚರ್ಚೆ, ಮಾತಿನ ಚಮತ್ಕಾರ, ಸಾಹಿತ್ಯದ ಹೆಸರಿನಲ್ಲಿ ತಾಳಮದ್ದಳೆ”
ಗಳು ಬರೀ 'ತಕರಾರು ಕೂಟ'ಗಳಾದುವು. ಪಾತ್ರಗಳ ಬಾಯಿಯಿಂದ ಪ್ರಸಂಗ-
ಸಾಹಿತ್ಯವನ್ನು ಅಣಕಿಸುವ ಮಾತುಗಳೂ ಬಂದವು. ಅಷ್ಟೇ ಅಲ್ಲದೆ, 'ತಾಳ
ಮದ್ದಳೆ'ಗಳು ಚರ್ಚಾಸಭೆ, ಹಾಗೂ ಪ್ರಸಂಗದ ವಿಮರ್ಶಾಸಭೆಗಳಾಗಿ ಕಂಡು
ಬಂದವು. ಅರ್ಥಧಾರಿ ಪ್ರಸಂಗದ ವಿಮರ್ಶೆ ಮಾಡುತ್ತ ಕೂರಬೇಕೆ? ವಾದದ
ಭರದಲ್ಲಿ ಒಂದು ರಾತ್ರಿಗೆ ಕೇವಲ ಇಪ್ಪತ್ತು-ಮೂವತ್ತು ಪದ್ಯಗಳಷ್ಟೆ ಹಾಡಲ್ಪಟ್ಟು
ಕಥೆ ಸಾಗಿತು. ಈ 'ಅತಿ'ಯು ಅರ್ಥಗಾರಿಕೆಯ ನಿಜರೂಪವನ್ನೇ ಕೆಡಿಸಿತು.
`ಅತಿ-ವಾದ'ವು ನಮ್ಮ ಅರ್ಥಗಾರಿಕೆಗೆ ತಗಲಿದ ದೊಡ್ಡ ರೋಗ,
ಒಬ್ಬನ ಪೀಠಿಕೆ
ಯನ್ನು ಸಹ ಅಕ್ಷರಕ್ಷರ ಖಂಡಿಸುವುದು ಈಗಲೂ ನಡೆದಿದೆ. ಈ “ವಯರ್‌ಸ್
ಆರ್ಗ್ಯೂಮೆಂಟ್" ತಾಳಮದ್ದಳೆಯ ವಿಚಿತ್ರಗಳಲ್ಲೊಂದು. ಇದು ಬರೀ ವಾದದ
ಚಟ.
ನನ್ನ ಅನಿಸಿಕೆಯಂತೆ ಹೇಳುವುದಾದರೆ, ಅರ್ಥಗಾರಿಕೆಯಲ್ಲಿ ವಾದದ ಮಿತಿ
ಯನ್ನು ಕಂಡುಕೊಳ್ಳಲು ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
೧.ಇದಿರಾಳಿ ಎತ್ತಿದ ಪ್ರಶ್ನೆಗಳಲ್ಲಿ ಸುಸಂಬದ್ಧ ಹಾಗೂ ಸನ್ನಿವೇಶದ ಒಪ್ಪಂದಕ್ಕೆ
ಪೂರಕವಾಗುವ ಪ್ರಶ್ನೆಗಳಿಗಷ್ಟೇ ಉತ್ತರಿಸುವ ಯತ್ನ ನಡೆಸುವುದು.
و ಮುಂದಿನ ಪದ್ಯವನ್ನೂ, ಪ್ರಸಕ್ತ ಪದ್ಯದ ಭಾವವನ್ನೂ ಸ್ಪುಟಪಡಿಸುವ ಪ್ರಶ್ನೆ
ಗಳನ್ನು ಕೇಳುವುದು.
೩ ಇದಿರಾಳಿ ಯಾವುದೋ ಆಧಾರವನ್ನು ಎತ್ತಿದ ಎಂದಿಟ್ಟುಕೊಳ್ಳಿ. ಆ ಆಧಾರ
ವನ್ನೇ ಪ್ರಶ್ನಿಸುವುದು ತರವಲ್ಲ. ಅದನ್ನು ಅಂಗೀಕರಿಸಿ, ಪ್ರತಿ ವಾದ ವನ್ನೂ
ಯುಕ್ತಿಯನ್ನೂ ಹೂಡುವುದು ಸೌಂದರ್ಯಪ್ರಜ್ಞೆಯುಳ್ಳವನ ದಾರಿ.
ಪುಟ:ಜಾಗರ.pdf/೧೪೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ