ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

95

ಬಳಸಬೇಕಾಗಿದೆ. ಹರಕೆ ಬಯಲಾಟದಲ್ಲಿ, ಒಬ್ಬನು, ರಂಗದಲ್ಲೆ "ಒಂದು ಪಾಲಕಿ ಉತ್ಸವ, ಪೂಜೆಯಾಗಬೇಕು ಇದು ನನ್ನ ಭಕ್ತಿಗೆ ಸಂಬಂಧಿಸಿದ್ದು " ಎನ್ನುತ್ತಾನೆ. ಮತ್ತೊಬ್ಬ, ಇನ್ನೂ ಏನೊ ಒಂದು ದೃಶ್ಯ ಬರಬೇಕು. "ಇದು ನನ್ನ ಸಂಕಲ್ಪ ಅಥವಾ ನನ್ನ ವ್ಯವಹಾರ ಕ್ಷೇತ್ರದ ಯಶಸ್ಸಿನ ದ್ಯೋತಕವಾಗಿ ಭಕ್ತಿಯಿಂದ ತರುವ ದೃಶ್ಯ" ಎನ್ನುತ್ತಾನೆ ಎಂದಿಟ್ಟುಕೊಳ್ಳೋಣ. ಹರಕೆ ಆಟದ ಮೇಳವು ಒಪ್ಪಬಹುದೇ? ಇಲ್ಲಿ ಇರುವುದು ಸ್ವಾತಂತ್ರ್ಯದ ಪ್ರಶ್ನೆ ಅಲ್ಲ. ವಿವೇಕದ ಪ್ರಶ್ನೆ.
ನಮ್ಮ ಅಭಿರುಚಿಯ ದೊಡ್ಡ ಸಮಸ್ಯೆ ಏನೆಂದರೆ -ವಿಕಾರಗಳಿಗೆ, ಗಿಮಿಕ್ರಿಗಳಿಗೆ ನಮ್ಮ ಮನಸ್ಸು ಕ್ರಮೇಣ ಒಗ್ಗಿಕೊಂಡು, ಅದನ್ನೇ ಕಲೆ ಎಂದು ಒಪ್ಪಿ ಬಿಡುವುದು! ವಿಮರ್ಶೆಯ ಎಚ್ಚರ, ಸತತ ಜಾಗೃತಿಯೇ ಅದಕ್ಕೆ ಪರಿಹಾರ, ವಿಮರ್ಶೆಗೂ ಪ್ರತಿ ವಿಮರ್ಶೆ ಅಗತ್ಯ.




© ಡಾ. ಎಂ. ಪ್ರಭಾಕರ ಜೋಶಿ