ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

119

ಈ ಅರ್ಥವಾಙ್ಮಯದ ಹಿಂದೆ ಒಂದು ಕಾವ್ಯ ಪರಂಪರೆ ಇದೆ. ಪ್ರಧಾನ ಆಕರವು ಪ್ರಸಂಗ; ಆ ಬಳಿಕ ಆ ಪ್ರಸಂಗಕ್ಕೆ ಆಕರವಾಗಿರುವ ಕಾವ್ಯ. ಉದಾ-ರಾಜಸೂಯಾಧ್ಪರ ಯಕ್ಷಗಾನ, ಮತ್ತು ಅದಕ್ಕೆ ಆಕರವಾಗಿರುವ ಗದುಗಿನ ಭಾರತ. ಇವು ಪ್ರದರ್ಶನದ ಸೀಮೆಯನ್ನು broad outlineನ್ನು ನಿರ್ಧರಿಸುತ್ತವೆ. ಇದು ಕಥಾರೇಖೆ, (Story line) ಅದರ ಘಟನಾವಳಿ, ಮತ್ತು ಕೆಲವು ಮಟ್ಟಿಗೆ ಪ್ರತಿಪಾದ್ಯ ವಿಷಯಗಳಲ್ಲಿ ಮೀರಬಾರದ ನಿಯಮವಾಗಿರುತ್ತದೆ.
ಈ ಆಧಾರಕ್ಕೆ ಪೂರಕವಾಗಿ, ವ್ಯಾಸಭಾರತವನ್ನು ಬಳಸಬಹುದು, ಆದರೆ ಅವಿರೋಧವಾಗಿರಬೇಕು. ವಿವರಗಳಲ್ಲಿ ತಾಕಲಾಟ ಬರಬಾರದು, ಅಷ್ಟೆ, ಉದಾ-ಕೃಷ್ಣ ಸಂಧಾನ ಪ್ರಸಂಗದ ಕೌರವ ಕೃಷ್ಣ ಸಂವಾದದಲ್ಲಿ ಕೃಷ್ಣನು, "ನಾನು ನಿನಗೆ ನೀತಿ ಹೇಳಿದಾಗ ಮಧ್ಯದಲ್ಲಿ ಸಭಾತ್ಯಾಗ ಮಾಡಿದೆ", ಎಂದು ಹೇಳಿದ ಎಂದಿಟ್ಟುಕೊಳ್ಳಿ. (ಇದು ವ್ಯಾಸಭಾರತದ ವಿವರ)ಕೌರವನ ಪಾತ್ರಾಧಾರಿ "ಇಲ್ಲ ನಾನು ಹಾಗೆ ಮಾಡಲಿಲ್ಲ "ಎಂದು ಹೇಳಬಾರದೆಂಬುದು ಅರ್ಥಗಾರಿಕೆಯ ನೀತಿ (ethics) ಆಗಿದೆ. ಹೇಳಿದರೆ, ಕೃಷ್ಣನು ಅದನ್ನು ಹೇಗೋ ನಿಭಾಯಿಸಬಹುದು, ಅದು ಬೇರೆ ಪ್ರಶ್ನೆ.
ಆದರೆ ಇನ್ನೊಂದು ಪ್ರಕರಣವನ್ನು ನೋಡೋಣ. ಪಂಚವಟಿ ಪ್ರಸಂಗದ, ರಾವಣ- ಮಾರೀಚ ಸಂವಾದ (ಮಾರೀಚ ನೀತಿ)ದಲ್ಲಿ, ರಾವಣನು ಮೊದಲೇ ಒಮ್ಮೆ ಮಾರೀಚನಲ್ಲಿಗೆ ಬಂದು, ಉಪದೇಶಕ್ಕೊಪ್ಪಿ ಹಿಂದೆ ಹೋಗಿದ್ದಾನೆಂಬ ವಾಲ್ಮೀಕಿ ರಾಮಾಯಣದ ವಿವರವನ್ನು ತಂದರೆ, ಪ್ರದರ್ಶನದ ಸೊಗಸು ಕೆಡುತ್ತದೆ. ಮಾರೀಚೋಪದೇಶದ ನಾವೀನ್ಯವೂ ಹೋಗುತ್ತದೆ. ಹಾಗಾಗಿ "ಮೂಲದಲ್ಲಿದೆ ಅಥವಾ "ಮೂಲದಲ್ಲಿಲ್ಲ” ಎಂಬುದರಿಂದ, ಒಂದು ವಿಷಯವು ಗ್ರಾಹ್ಯ ಅಥವಾ ತ್ಯಾಜ್ಯವೆನಿಸುವುದಿಲ್ಲ. ಅದು ಪಾಂಡಿತ್ಯದ ಪರಿಗಣನೆ ಹೊರತು ರಸಪರಿಷೋಷ ಕೇಂದ್ರಿತವಾದ ಕಲೆಯ ಪರಿಗಣನೆ ಅಲ್ಲ.

ಹೀಗೆ ಪ್ರಸಂಗ, ಆಕರ ಕಾವ್ಯಗಳೊಂದಿಗೆ ಪಾತ್ರಧಾರಿಯ ಅಧ್ಯಯನ ಪರಿಶೀಲನೆಗೊದಗಿದ ಕಾವ್ಯಗಳು, ಸಾಹಿತ್ಯ, ಅನುಭವ, ಕಲ್ಪನೆ ಮೊದಲಾದ ಅನೇಕಾನೇಕ ರೂಪದ ಸಾಮಗ್ರಿಯನ್ನು ಅರ್ಥದಲ್ಲಿ ತಂದು ಹೊಂದಿಸಿ, ಅವೆಲ್ಲವನ್ನು ಪ್ರಸಂಗದ ಹಂದರದಲ್ಲಿ ಸಕಾರಣವಾಗಿ ಹೊಂದಿಸುವುದು ಅರ್ಥಗಾರಿಕೆಯ ರಚನಾ ರಹಸ್ಯ. ಇದು ಅರ್ಥ ಪರಂಪರೆಯ ಒಂದು ಮಗ್ಗುಲು.
ಜೊತೆಗೆ, ಮಾತುಗಾರಿಕೆಗೆ, ಒಂದೊಂದು ಪ್ರದೇಶದ, ಒಂದು ತಿಟ್ಟಿನ, ಒಂದು ಮೇಳದ, ಕಲಾವಿದರ ಜೊತೆಗಾರಿಕೆಯ ಪರಂಪರೆಗಳಿವೆ. ಒಂದು ಪ್ರಸಂಗಕ್ಕೆ ಬಡಗುತಿಟ್ಟಿನ ಮತ್ತು ತೆಂಕುತಿಟ್ಟಿನ ಮಾತುಗಾರಿಕೆಯ ಸ್ವರೂಪಗಳನ್ನು ನೋಡಿದರೆ, ಅವು ಸ್ಥೂ ಲವಾಗಿ

0 ಇ. ಎಂ. ಪ್ರಭಾಕರ ಜೋಶಿ