ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

113

ಮಾಡಿದ್ದಾರೆ. ರಾಜೇಂದ್ರ ಕೆದ್ಲಾಯರ 'ಪಾಂಚಾಲಿ' ಇದೇ ಬಗೆಯ ಇನ್ನೊಂದು ಪ್ರಯೋಗ. ಏಕವ್ಯಕ್ತಿ ಪ್ರಸಂಗದ ಮೊದಲಿಗರು ಬಹುಶಃ ಕವಿ ಪತ್ರಕರ್ತ ದಿ. ಪಾಂಡೇಶ್ವರ ಗಣಪತಿರಾಯರು (ಜಿ. ಆರ್. ಪಾಂಡೇಶ್ವರ) ಅವರು ತಾವೇ ಬರೆದ ಮಾರಾವತಾರದಲ್ಲಿ ಮನ್ಮಥನಾಗಿ ಮೊದಲ ರಂಗಪ್ರಯೋಗ ನಡೆಸಿದ್ದರು.
ಆಹಾರ್ಯ
ವೇಷಭೂಷಣಗಳಲ್ಲಿ ಅನೇಕಾನೇಕ ಪ್ರಯೋಗಗಳಾಗಿವೆ. ಅವುಗಳನ್ನು ಈ ಸಂಕ್ಷಿಪ್ತ ಲೇಖನದಲ್ಲಿ ಅವಲೋಕಿಸಲಾಗಿಲ್ಲ. ಅದಕ್ಕೆ ಚಿತ್ರಸಹಿತವಾದ ಬೇರೆಯೇ ರೀತಿಯ ಲೇಖನ ಅವಶ್ಯವಿದೆ. ಯಕ್ಷಗಾನದ ಸ್ವರೂಪವೇ ಬದಲಾಗುವಷ್ಟು ವೈವಿಧ್ಯ ಪೂರ್ಣ ಪ್ರಯೋಗಗಳು “ಆಹಾರ್ಯ'ದಲ್ಲಿ ನಡೆದಿವೆ. ಅದಕ್ಕೂ ಹೊಸ ವಸ್ತುಗಳ ಪ್ರಸಂಗ ರಚನೆಗೂ ನಿಕಟಸಂಬಂಧವೂ ಇದೆಯೆಂಬುದನ್ನು ಮಾತ್ರ ಉಲ್ಲೇಖಿಸಬೇಕಾಗಿದೆ.
ಹೀಗೆ ಬಹುಮುಖಿಯಾಗಿ, ವಿವಿಧ ಉದ್ದೇಶಗಳಿಂದ, ಬೇರೆ ಬೇರೆ ನೆಲೆಗಳಲ್ಲಿ ಬೆಳೆದು ಬಂದ ಯಕ್ಷಗಾನದ ಪ್ರಾಯೋಗಿಕ ರಂಗಭೂಮಿ ಮುಂದೆ ಇದರ ಬೆಳೆದ ಹಂತಗಳ ನಿರ್ಮಿತಿಗಳಿಗೆ, ಸೃಷ್ಟಿಸುವ ಪ್ರೇರಣೆ ನೀಡಿ ಪ್ರಯೋಗ - ಪರಂಪರೆ ಬೆಳೆಯಬೇಕಾಗಿದೆ.


ಯಕ್ಷಗಾನ - ಪ್ರಯೋಗ

ಪರಿಶಿಷ್ಟ ಮಾಹಿತಿ

• ಮೈಸೂರು ಡಾ| ರಾ. ಸತ್ಯನಾರಾಯಣ ಪ್ರೊ, ಉಮಾಕಾಂತ ಭಟ್, ರಾಧಿಕಾ ನಂದಕುಮಾರ್ ಇವರ ಕಲ್ಪನೆಯಾದ ಶೃಂಗ ನಾಟ್ಯವೆಂಬ ಭರತ ನಾಟ್ಯಶಾಸ್ತ್ರ ಆಧಾರಿತ ನೂತನ ಸೃಷ್ಟಿ, ಇದರಲ್ಲಿ ಭರತನಾಟ್ಯಂ ಮತ್ತು ಯಕ್ಷಗಾನ ರಂಗ ವಿಧಾನಗಳನ್ನು ಸಮನ್ವಯಿಗೊಳಿಸಲಾಗಿದ್ದು ನವೀನ ರಂಗಭಾಷೆಯ ವಿಕಾಸದ ಯತ್ನವಾಗಿದೆ.

• ಯಕ್ಷಗಾನದಲ್ಲಿ ವಿವಿಧ ರೀತಿಯ ಕುತೂಹಲ ಪ್ರಯೋಗಗಳನ್ನು ನಡೆಸಿದ ಇಬ್ಬರ ಯತ್ನಗಳನ್ನಿಲ್ಲಿ ಉಲ್ಲೇಖಿಸಬಹುದು - ಹಿಂದಿ, ಇಂಗ್ಲೀಷ್ ಭಾಷೆಗಳಲ್ಲೂ, ನೂತನ ಕಥಾವಸ್ತುಗಳ ಅಳವಡಿಕೆಯಲ್ಲೂ ಹಲವು ಪ್ರಯೋಗ ಗೈದ ವಿಟ್ಲದ ವಿದ್ವಾನ್ ಅಂಗ್ರಿ ಶಂಕರ ಭಟ್ಟರು ಓರ್ವರು. ಅಂತೆಯೇ ಇಂಗ್ಲೀಷ್, ಹಿಂದಿ, ಕರ್ಹಾಡ ಭಾಷೆಗಳಲ್ಲಿ ಯಕ್ಷಗಾನಗಳನ್ನು ಬರೆದು ತಾಳಮದ್ದಳೆಗಳಿಗೆ ಅಳವಡಿಸಿದ ನಿಡ್ಪಳ್ಳಿ ಡಾ. ಡಿ. ಸದಾಶಿವ ಭಟ್ಟರು.

ಡಾ. ಎಂ. ಪ್ರಭಾಕರ ಜೋಶಿ