ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ









ಕಲೆ - ಕಲಾವಿದ :
ಹಿತರಕ್ಷಣೆ -ಸಂಘಟನೆ - ವಿಸ್ತರಣೆ


ಯಕ್ಷಗಾನ ಕಲಾವಿದರ ಬದುಕಿನ ಸ್ಥಿತಿಗತಿಗಳಿಗೆ ಸ್ಪಂದಿಸಿ, ಅವರ ಬಾಳಿನ ಮಟ್ಟ ಮತ್ತು ಬದುಕಿನ ಗುಣಮಟ್ಟ ಈ ಎರಡೂ ಎತ್ತರಿಸುವ ಪ್ರಯತ್ನವು, ಕಲೆಯ, ಕಲಾವಿದನ ಮತ್ತು ಸಮಾಜದ ಆರೋಗ್ಯಕ್ಕೆ ಅಗತ್ಯ. ಕಲೆಯ ಬರಿಯ ವೈಭವೀಕರಣ ಮತ್ತು ಬಾಯ್ಮಾತಿನ ಸಹಾನುಭೂತಿಗಳಿಂದ ಏನೂ ಆಗುವುದಿಲ್ಲ.
ಈ ನಿಟ್ಟಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗವು ಮಾಡಿರುವ ಸಾಧನೆ ದೇಶಕ್ಕೆ ಮಾದರಿ. ಕಲಾವಿದನ ಕಲ್ಯಾಣ ಎಂಬುದು ಎಲ್ಲರ ಹೊಣೆ ಎಂಬ ಅರಿವು ಮತ್ತು ಆ ಅರಿವಿನ ಕಾರ್ಯರೂಪವು, ಕಲಾರಂಗದ ಹೆಗ್ಗಳಿಕೆ. ಕ
ಲೆಯ ಉತ್ಕರ್ಷ, ಕಲಾವಿದನ ಉತ್ಕರ್ಷಗಳಿಗೆ ಸಂಬಂಧವಿದೆ. ಆದರೆ ಗಳಿಕೆ, ಉಳಿಕೆ, ಭವಿಷ್ಯ ಭದ್ರತೆಗಳ ವಾಸ್ತವ, ಕಲಾವಿದನ ಗಮನಕ್ಕೆ ಬರುವುದು ಅವನಿಗೆ ಐವತ್ತರ ವಯಸ್ಸು ದಾಟಿದಾಗ, ಕ</br. ಲಾವಿದನೆನಿಸುವ ವ್ಯಕ್ತಿ, ವ್ಯವಸಾಯಿಯಾಗಿ ಅದು ಅವನಿಗೆ ಜೀವನಾಧಾರವಾದರೆ

ಅದು ಕಲೆಗೆ ಒಳಿತೇ. ಕಸುಬುದಾರಿಕೆಯಿಂದಲೇ ಕಲೆ ಬೆಳೆಯುತ್ತದೆ. ಆದರೆ ಆ

• ಡಾ. ಎಂ. ಪ್ರಭಾಕರ ಜೋಶಿ