ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

157

ಮತ್ತು ರೂಪುಗೊಳ್ಳಬೇಕಾದ ರೀತಿಯನ್ನು ಪ್ರತಿಪಾದಿಸಲಾಗಿದ್ದು, ಯಕ್ಷಗಾನದಲ್ಲಿ ನೈಜ ಸೃಜನಶೀಲತೆಯು ಕೆಲಸ ಮಾಡಬೇಕಾದ ರೀತಿಗೆ ದಿಗ್ದರ್ಶಕವಾಗಿದೆ. ಕಲಾ ಮಾಧ್ಯಮದ ಸ್ವರೂಪ ಮತ್ತು ಹೊಸ ಆವಿಷ್ಕಾರಗಳ ಮಧ್ಯೆ ಸರಿಯಾದ ಸಮತೋಲನವನ್ನುಳಿಸಿ ಕಲೆಯನ್ನು ಬೆಳೆಸುವ ದೃಷ್ಟಿ ಇಲ್ಲಿ ಗೋಚರವಾಗುತ್ತದೆ
ಗ್ರಂಥದ ಕೆಲವು ಲೇಖನಗಳು ತೀರ ಸಂಕ್ಷೇಪವಾಗಿದ್ದು ಕೇವಲ ಸೂಚನೆಗಳಂತಿವೆ. ಅಲ್ಲಿಯ ವಿಚಾರಗಳ ವಿಸ್ತಾರಕ್ಕೆ ಅವಕಾಶವುಂಟು. ಹಲವು ಪ್ರತಿಪಾದನೆಗಳಲ್ಲಿ ಬೇರೆ ಯೋಚನೆಗಳು ಸಾಧ್ಯ.
ಅಮೃತರ 'ಯಕ್ಷಾಂದೋಳ' ಓರ್ವ ಸಮತೂಕದ ಕಲಾಪ್ರಜ್ಞೆಯುಳ್ಳ ಚಿಂತಕನ, ವಿಚಾರಗಳ ಸಂಕಲನ. ನಮ್ಮಲ್ಲಿ ಯಕ್ಷಗಾನದ ಕುರಿತು ಒಂದು ವೈಚಾರಿಕ ಆಂದೋಳವನ್ನು ನಿರ್ಮಿಸುವ, ಮಾಹಿತಿ ಮತ್ತು ವಿವೇಚನೆಗಳೆರಡರ ಮಟ್ಟದಲ್ಲೂ ಓದುಗನ ತಿಳಿವನ್ನು ಬೆಳೆಸುವ ಕೃತಿ. ಕಲಾ ವಿಮರ್ಶೆಯ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆ. ಕಲೆಯಲ್ಲಿ ಆಂದೋಲನವೊಂದನ್ನು ಪ್ರೇರಿಸಬಲ್ಲ ಕೃತಿ.








• ಡಾ. ಎಂ. ಪ್ರಭಾಕರ ಜೋಶಿ