ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೧೩

ರಾಜಬಣ್ಣಗಳದ್ದು, ಕಾಟು ಬಣ್ಣ (ಅಸಂಸ್ಕೃತ ಕಾಡುರಕ್ಕಸರದ್ದು ಮತ್ತು ಹೆಣ್ಣು ಬಣ್ಣಗಳದ್ದು, ಕಿರಾತರ ಬೊಬ್ಬೆ 'ಕಿ ಲಲಲಲಲ ಕೀ ಹಾ' ಎಂದಿರುತ್ತದೆ. ಹನುಮಂತ, ವಾಲಿ ಮೊದಲಾದ ಕಪಿಗಳಿಗೆ ಬುಯ್ಯೋ... ಹ್ಹ ಹ್ಹ ಮತ್ತು ಹೈಕ್ ಟು‌ರ್ರ್ ಎಂಬ ಕಿರುಚಾಟಗಳಿರುತ್ತವೆ. ಇವೆಲ್ಲ ಒಂದು ಬಗೆಯ ಮಾತುಗಳಷ್ಟೆ?

ರಂಗಸ್ಥಳದ ವ್ಯವಹಾರಕ್ಕೆ ಸಂಬಂಧಿಸಿ ಒಳಗಿಂದ ಅಂದರೆ ಚೌಕಿ ಯಿಂದ ಮಾತಾಡುವ ಕೆಲವು ಸನ್ನಿವೇಶಗಳಿವೆ. ಉದಾ: ಆಕಾಶವಾಣಿ. ಕಂಸನಿಗೆ ಕೇಳಿಸುವ ಅಂಬರವಾಣಿ, ಭೀಷ್ಮ-ಪರಶುರಾಮರಿಗೆ ಯುದ್ಧ ವನ್ನು ನಿಲ್ಲಿಸುವಂತೆ ದೇವತೆಗಳ ಸಂದೇಶ ಇತ್ಯಾದಿ, ಕೌರವನು ದ್ವೈಪಾಯನ ಸರೋವರದಲ್ಲಿ ಮುಳುಗಿಕೊಂಡಿರುವಾಗ, ಕೃಪ,ಅಶ್ವತ್ಥಾಮಾದಿಗಳಿಗೆ ಹೇಳುವ ಉತ್ತರ. ಇದನ್ನು ಚೌಕಿಯಿಂದಲೇ ಹೇಳುವುದು ಕ್ರಮ. ಇಂತಹ ಮಾತುಗಳನ್ನು ಹೆಚ್ಚಾಗಿ ಹಾಸ್ಯಗಾರನು ಆಡಬೇಕು. 'ಹಾಸ್ಯಗಾರನು ಇಡಿಯ ರಾತ್ರಿ ಸಕ್ರಿಯನಾಗಿರುವವನೂ, ರಂಗಸ್ಥಳಕ್ಕೆ ಹತ್ತಿರದಲ್ಲೆ ಅವನ ಬಣ್ಣದ ಮನೆಯಸ್ಥಾನವು ಇರುವುದೂ ಇದಕ್ಕೆ ಕಾರಣವಿರಬಹುದು.

ಕೆಲವೊಮ್ಮೆ ಮೌನವೇ ಮಾತಾಗುತ್ತದೆ. ಕೇವಲ ಹಸ್ತಾಭಿನಯ ದಿಂದ ಅಥವಾ ಸ್ವಲ್ಪ ಮಾತಿನಿಂದ ಸ್ವಲ್ಪ ಕೈಭಾಷೆಯಿಂದ ಮಾತಾಡುವ ಕ್ರಮವುಂಟು. ಉದಾ: ಚಂದ್ರಹಾಸಚರಿತ್ರೆಯ ದುಷ್ಟಬುದ್ಧಿ “...ಕಟುಕರೆ, ಈ ಬಾಲಕನನ್ನು ದೂರದ ಅರಣ್ಯಕ್ಕೊಯ್ದು... (ಕೈಭಾಷೆಯಿಂದ ವಧಿಸುವ ಅಭಿನಯ ತೋರಿಸುವುದು)

ವಾಚಿಕಾಭಿನಯಕ್ಕೆ ಪೂರಕವಾಗಿ, ಹಿಮ್ಮೇಳದ ವಾದ್ಯಗಳ 'ಗತ್ತು' ಗಳನ್ನು ಕೊಡುವುದು ಪದ್ಧತಿ, ಈ ಗತ್ತುಗಳ ಗಾತ್ರ, ನಾದಗಳು ಸಂದರ್ಭ, ಪಾತ್ರ ಮತ್ತು ಅಲ್ಲಿಯ ಭಾವವನ್ನು ಅನುಸರಿಸಿ ಇರುತ್ತವೆ. ಮಾತಿನಲ್ಲಿ ಭಾವಪರಿವರ್ತನೆಗೆ ಪೂರ್ವಭಾವಿಯಾಗಿಯೂ ಅಂತಹ ಗತ್ತು ಕೊಡುವುದುಂಟು.

ಯಕ್ಷಗಾನದ ಹಾಸ್ಯಗಾರನ ಮಾತುಗಾರಿಕೆಯ ಉಳಿದ ಪಾತ್ರ ಗಳಿಗಿಂತ ವಿಭಿನ್ನ ರೀತಿಯದು. ಅದು ಹೆಚ್ಚು ಮುಕ್ತವಾದದ್ದು. ಲೋಕಧರ್ಮಿ, ನಾಟ್ಯಧರ್ಮಿಗಳ ವಿಚಿತ್ರ ಮಿಶ್ರಣವದು. ಹಾಸ್ಯಗಾರನು