ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨ / ವಾಗರ್ಥ

ಮತ್ತು ಬಹುಪಾಲು, ವಾಲಿಯು ಅದನ್ನೊಪ್ಪಿಕೊಂಡು ಹೋಗುತ್ತಿದ್ದ. ಆದರೆ ಈಗ ಈ ವಾದವು ಅಷ್ಟಾಗಿ ಹಿಡಿಸಲಾರದೆ ಹೋಗಿ, ವಾಲಿಯೇ ರಾಮನನ್ನು ದೇವರೆಂದು ಒಪ್ಪುವ ಸನ್ನಿವೇಶ ಬರುವವರೆಗೆ, ವಾಲಿರಾಮರ ಮಾತುಗಳು ಲೌಕಿಕ ನೆಲೆಯಲ್ಲೆ ಸಾಗುತ್ತವೆ. ಹಳೆಯ ಶೈಲಿಯ ಅರ್ಥದಾರಿಗಳು ಇದನ್ನು ಆಕ್ಷೇಪಿಸುವುದುಂಟು. "...ದಾನವರುಗಳ ದುಷ್ಟರ ಶಿರವರಿದು | ಕ್ಷೋಣಿಭಾರವನಿಳುಹುವದೆಮ್ಮ ಬಿರುದು" ಎಂದು ಪ್ರಸಂಗದಲ್ಲೆ ಪದ್ಯವಿರುವಾಗ, ತಾನು ದೈವೀಶಕ್ತಿಯುಳ್ಳವನೆಂದು ರಾಮನು ಹೇಳದೇ ಇರಬಹುದೆ? ಎಂದು ಅವರ ಆಕ್ಷೇಪ. ದುಷ್ಟ ನಿಗ್ರಹ, ಸಜ್ಜನರಿಗೆ ಸಹಾಯವೆಂಬುದು ವ್ಯಕ್ತಿ ಮಾತ್ರದವನ ಕರ್ತವ್ಯ ವೆಂದೂ, ತಾನು ಆ ಮಾನವೀಯ ನೆಲೆಯಲ್ಲಿ ಕಾರಪ್ರವೃತ್ತನಾದು ದೆಂದೂ ಹೇಳುವುದೇ ಹೆಚ್ಚು ಸೂಕ್ತವೆಂದು, ಆಧುನಿಕ ಅಭಿಪ್ರಾಯ. ಇದು ಕಾಲಪ್ರಜ್ಞೆಯ ಪ್ರಭಾವ ಸಂಸ್ಕಾರ.

ಇದಿಷ್ಟು ಪಾತ್ರಪರವಾದ 'positive' ಚಿತ್ರಣದ ವಿಚಾರ. ಅದೇ ರೀತಿ, ನಾಯಕ ಪಾತ್ರಗಳ, ದೈವೀ ಪಾತ್ರಗಳ, ಋಷಿಮುನಿಗಳ ಬಗೆಗೆ, ಅವರ ವಿರುದ್ಧವಾದ ನಿಲುಮೆ ವಹಿಸುವ ಪಾತ್ರಗಳಿಂದ, ಬಲವಾದ ವಾದಗಳು, ಆಕ್ಷೇಪಗಳೂ ಬಂದಿವೆ. ಮೊದಲಾದರೆ, ಇವು ಮಾಮೂಲು ವಿರೋಧಗಳು, 'ದುಷ್ಟಪಾತ್ರದ ಮಾತು' ಎಂಬಷ್ಟು ಇತ್ತು. ಈಗ ಅವು ತುಂಬ ನಾಜೂಕನ್ನೂ, ತಾರ್ಕಿಕತೆಯನ್ನೂ ಪಡೆದಿವೆ. ಈ ಪಂಥಾಹ್ವಾನದ ವಿರುದ್ಧ ಶಿಷ್ಟ ಪಾತ್ರಗಳು ಹೊಸ ವಾದಗಳನ್ನು, ತರ್ಕಗಳನ್ನು ಶೋಧಿಸ ಬೇಕಾಗಿ ಬಂದಿದೆ. ಮತ್ತು, ಆ ಕೆಲಸವನ್ನು ಆ ಆ ಪಾತ್ರಗಳು ಚೆನ್ನಾಗಿ ನಿರ್ವಹಿಸಿವೆ ಕೂಡ. ಹೀಗೆ, ಪಾತ್ರ ಸಂಘರ್ಷ, ಹೊಸ ಮಜಲನ್ನು ಪ್ರವೇಶಿಸಿದೆ. ಹಾಸ್ಯಪಾತ್ರಗಳಿಂದ ಬರುವ ವಿಡಂಬನೆಯೂ ಕೂಡ ಹೊಸ ಆಯಾಮ ಪಡೆದಿದೆ. ಇದನ್ನು ನಿಭಾಯಿಸಲು, ಗಂಭೀರ, ಶಿಷ್ಟಪಾತ್ರ ಗಳು ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿವೆ.

ಹೀಗೆ ಪಾತ್ರವು ಅಭಿವ್ಯಕ್ತಿಗೊಳ್ಳುವ ಕ್ರಮದಲ್ಲಿ ಕಲಾವಿದನ ಯೋಚನೆಗಳಿಂದಾಗಿ, ಸಾಮಾಜಿಕ ಸನ್ನಿವೇಶದ ಬದಲಾವಣೆಯ ಪ್ರೇರಣೆ ಗಳಿಂದಾಗಿ, ಬಂದಿರುವ ಪರಿವರ್ತನೆಗಳು ಉಪಯುಕ್ತ ಚರ್ಚೆಗಳನ್ನು ಪ್ರೇರಿಸುತ್ತವೆ. ಅರ್ಥಗಾರಿಕೆಯು, ಸ್ವಂತ ಮಾತುಗಾರಿಕೆಯಾದುದರಿಂದ, ಕಲಾವಿದನ ಚಿಂತನೆಯು ರಂಗದಲ್ಲಿ ಪೂರ್ಣಕ್ರಿಯಾಶೀಲವಾಗುತ್ತದೆ